ಬಾಲಿವುಡ್ ಹಿರಿಯ ನಟ ಖಾದರ್ ಖಾನ್ ನಿಧನ

ಹಿಂದಿ ಚಿತ್ರರಂಗದ ಹಿರಿಯ ನಟ, ಸಂಭಾಷಣೆಕಾರ ಖಾದರ್ ಖಾನ್ ವಿಧಿವಶರಾಗಿದ್ದಾರೆ. 81 ವರ್ಷ ವಯಸ್ಸಾಗಿದ್ದ ಅವರು ಉಸಿರಾಟದ ತೊಂದರೆಯಿಂದ ಬಳಲುತಿದ್ದರು. ಕೆನಾಡದ ಟೋರಾಂಟೋದಲ್ಲಿರುವ ಆಸ್ಪತ್ರೆಯೊದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖಾದರ್ ಖಾನ್ ಅವರು ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕವನ್ನು ತ್ಯಜಿಸಿದರು. ಅವರ ಸಾವಿಗೆ ಕುಟುಂಬದ ಹಾಗೂ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಖಾದರ್ ಖಾನ್ ಅವರು ನಟನೆ, ಸಂಭಾಷಣೆ ಹಾಗೂ ಚಿತ್ರಕತೆ ಬರೆಯುವ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಭಾಷಣೆಯನ್ನು ಬರೆದಿದ್ದಾರೆ.

1973 ರಲ್ಲಿ ಮೊದಲ ಬಾರಿಗೆ ಖಾದರ್ ಖಾನ್ ಸಿನಿಮಾದಲ್ಲಿ ನಟಿಸಿದರು. ರಾಜೇಶ್ ಖನ್ನಾ ಜೊತೆಗಿನ ‘ದಾಗ್’ ಅವರ ಮೊದಲ ಸಿನಿಮಾವಾಗಿತ್ತು. ಈ ಚಿತ್ರದಿಂದ ಪ್ರಾರಂಭವಾದ ಅವರು ಸಿನಿಮಾ ಜರ್ನಿ ಸುಮಾರು 300 ಚಿತ್ರಗಳಲ್ಲಿ ನಟಿಸುವಂತೆ ಮಾಡಿತ್ತು.

ಖಾದರ್ ಖಾನ್ ಅವರು ಲಾವಾರಿಸ್, ದಾಗ್, ಅಮರ್‌ ಅಕ್ಬರ್‌ ಅಂಥೋನಿ, ಮುಕದ್ದರ್ ಕಾ ಸಿಖಂದರ್, ಸುಹಾಗ್, ಕೂಲಿ, ಶರಾಬಿ  ಹಾಗೂ ಹಾಸ್ಯ ಪಾತ್ರಗಳಲ್ಲಿ ನಟಿಸಿ ತಮ್ಮದೇ ಆದ ವಿಶಿಷ್ಟವಾದ ಛಾಪು ಮೂಡಿಸಿದ್ದರು.