ಆ.21ಕ್ಕೆ ಕಾರ್ಕಳ ಜ್ಞಾನಸುಧಾದಲ್ಲಿ ಬೃಹತ್ ರಕ್ತದಾನ ಶಿಬಿರ

ಕಾರ್ಕಳ: ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ದಿ. ಗೋಪಾಲ ಶೆಟ್ಟಿಯವರ ಜನ್ಮ ಶತಾಬ್ದಿ ಅಂಗವಾಗಿ ಉಡುಪಿ ಅಜ್ಜರಕಾಡು ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಕಾರ್ಕಳ ಜ್ಞಾನಸುಧಾ ಸಂಸ್ಥೆಯ ಆವರಣದಲ್ಲಿ ಆ. 21ರಂದು ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯ ತನಕ ರಕ್ತದಾನ ಶಿಬಿರ ನಡೆಯಲಿದೆ. ಆಸಕ್ತ ರಕ್ತದಾನಿಗಳು ರಕ್ತದಾನ ಮಾಡಲು ಹೆಸರು ನೋಂದಾಯಿಸುವಂತೆ ಸಂಸ್ಥೆ ವಿನಂತಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ನಂ. 81474 54902 ಸಂಪರ್ಕಿಸಬಹುದಾಗಿದೆ.

ವೀಲ್‌ ಚೇರ್‌ ವಿತರಣೆ
ಅದೇ ದಿನ ಆಯ್ದ ವಿಕಲಚೇತನರಿಗೆ ವೀಲ್ಸ್‌ ಚೇರ್‌ ವಿತರಣೆ, ಜ್ಞಾನಸುಧಾ ವಿದ್ಯಾರ್ಥಿಗಳಿಗೆ ಅಭಿನಂದನೆ, ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.