ಪೆರ್ಡೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮತ ಯಾಚನೆ

ಕಾಪು: ಬಿಜೆಪಿ ರಾಷ್ಟ್ರ ಧರ್ಮದ ಚಿಂತನೆ ಅನುಸರಿಸಿಕೊಂಡು ಬರುತ್ತಿರುವ ಪಕ್ಷವಾಗಿದೆ. ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ರಾಷ್ಟ್ರ ಮುಖ್ಯ ಎಂಬ ಚಿಂತನೆಯನ್ನು ಅನುಸರಿಸಲಾಗುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಗೆಲುವಿಗಿಂತಲೂ ಧರ್ಮ ಗೆಲ್ಲಬೇಕು. ನಾಡಿನ ಪರಂಪರೆ ಗೆಲ್ಲಬೇಕು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪ ಗೆಲ್ಲಬೇಕು. ಅದಕ್ಕಾಗಿ ನಾವೆಲ್ಲರೂ ಕಟಿ ಬದ್ಧರಾಗಿ, ಕೆಲಸ ನಿರ್ವಹಿಸೋಣ ಎಂದು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಮಂಗಳವಾರ ಕಾಪು ವಿಧಾನಸಭಾ ಕ್ಷೇತ್ರದ ಪೆರ್ಡೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ಮನೆ ಭೇಟಿ, ಕಾರ್ಖಾನೆ ಭೇಟಿ, ಕಾರ್ಯಕರ್ತರ ಭೇಟಿ ಸಹಿತ ವಿವಿಧೆಡೆಗೆ ತೆರಳಿ ಮತಯಾಚನೆ ನಡೆಸಿ, ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.

ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಉಸ್ತುವಾರಿ ಸುಲೋಚನಾ ಭಟ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀಶ ನಾಯಕ್ ಪೆರ್ಣಂಕಿಲ, ಪಕ್ಷದ ಪ್ರಮುಖರಾದ ದೇವು ಪೂಜಾರಿ, ಸಾಯೀಶ ಸುಧಾಕರ ಶೆಟ್ಟಿ, ಸುರೇಶ್ ಶೇರ್ವೆಗಾರ್, ಸುಭಾಸ್ ಹೆಗ್ಡೆ ಪೆರ್ಡೂರು, ಉದ್ಯಮಿಗಳಾದ ಸುಭಾಸ್ ನಾಯ್ಕ್, ಕೃಷ್ಣಾನಂದ ಶೆಟ್ಟಿ, ಕಿರಣ್ ಪೂಜಾರಿ, ಡಾ.ವಿದ್ಯಾಧರ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಪೆರ್ಡೂರು ಘಟಕದ ಕಾರ್ಯಕರ್ತರು, ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.