ಬ್ರಹ್ಮಾವರದಲ್ಲಿ ಐತಿಹಾಸಿಕ ಬಿಲ್ಲವ ಮಹಾಸಮಾವೇಶ:50 ಸಾವಿರಕ್ಕೂ ಅಧಿಕ ಜನಸಾಗರ

ಉಡುಪಿ: ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಫೆ. 3ರಂದು ನಡೆದ   ‘ಉಡುಪಿ ಜಿಲ್ಲಾ ಬಿಲ್ಲವ ಮಹಾ ಸಮಾವೇಶ’ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ಮೂಲಕ ಕಾರ್ಯಕ್ರಮ  ಯಶಸ್ವಿಯಾಗಿ ಜರಗಿತು .

ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಕಾರ್ಕಳ ಬೊಲ್ಯೊಟ್ಟು ಶ್ರೀ ಗುರುದೇವಾಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚಿಸಿದರು . ಸಮಾವೇಶದ ಅಧ್ಯಕ್ಷ ಬಿ.ಎನ್‌. ಶಂಕರ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು . ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ  ಡಾ| ಜಯಮಾಲಾ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌, ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ,ಕಾರ್ಕಳ ಶಾಸಕರಾದ ವಿ. ಸುನಿಲ್‌ ಕುಮಾರ್‌, ಮಧು  ಬಂಗಾರಪ್ಪ, ಉಮಾನಾಥ ಕೋಟ್ಯಾನ್‌,ಉಡುಪಿ ಶಾಸಕ ರಘುಪತಿ ಭಟ್ ,ಬೈಂದೂರ್ ಶಾಸಕ ಸುಕುಮಾರ್ ಶೆಟ್ಟಿ ,ಶೋಭಾ ಕರಂದ್ಲಾಜೆ , ವಿನಯ ಕುಮಾರ್‌ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ,ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು, ಗಣ್ಯರು,ಮುಂಬಯಿ ಸಾಹಿತಿ ಬಾಬು ಶಿವ ಪೂಜಾರಿ,ಸಮಿತಿಯ ಪ್ರಧಾನ ಸಂಚಾಲಕ ಅಚ್ಯುತ ಅಮೀನ್‌ ಕಲ್ಮಾಡಿ, ಕಾರ್ಯಾಧ್ಯಕ್ಷ ಪ್ರವೀಣ್‌ ಎಂ. ಪೂಜಾರಿ, ಪ್ರಚಾರ ಸಮಿತಿ ಅಧ್ಯಕ್ಷ ಎಚ್. ಅಶೋಕ್‌ ಪೂಜಾರಿ ಹಾರಾಡಿ, ವಲಯ ಸಂಚಾಲಕ ದಿವಾಕರ ಸನಿಲ್‌,ಪ್ರದೀಪ್ ಸನಿಲ್ ,ವಿಶ್ವನಾಥ್ ಕಲ್ಮಾಡಿ  , ರಿತೇಶ್‌ ಕುಮಾರ್‌ ಹಾಗೂ ಪದಾಧಿಕಾರಿಗಳು , ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಮುಖ ಬೇಡಿಕೆಗಳು

ಬಿಲ್ಲವ ಸಮಾಜ ಹಿಂದುಳಿದ ಪ್ರವರ್ಗ 2ರಲ್ಲಿ ಬರುವುದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಉನ್ನತ ಶಿಕ್ಷಣ, ಸರಕಾರಿ ಸೌಲಭ್ಯಕ್ಕೆ ಆದಾಯ ಮಿತಿ ನಿರ್ಬಂಧದಿಂದ ಕಷ್ಟ ಸಾಧ್ಯವಾಗಿದೆ. ಆದ್ದರಿಂದ ಬಿಲ್ಲವರನ್ನು ಪ್ರವರ್ಗ 1ಕ್ಕೆ ಸೇರಿಸಬೇಕು. ಸಮಾಜದ ಬಡ ಕುಟುಂಬಗಳ ಅಭಿವೃದ್ಧಿಗೊಳಿಸುವ ಮತ್ತು ಮಹಿಳೆಯರಿಗೆ ನಿಬಡ್ಡಿ ಸಾಲ ವಿತರಿಸುವ ನಿಟ್ಟಿನಲ್ಲಿ ‘ಬ್ರಹ್ಮಶ್ರೀ ನಾರಾಯಣಗುರು’ ಹೆಸರಿನಲ್ಲಿ ನಿಧಿ ಸ್ಥಾಪಿಸಿ ಸೌಲಭ್ಯ ಕಲ್ಪಿಸಬೇಕು. ಕೋಟಿ-ಚೆನ್ನಯರ ಪೂಜಾ ಕೈಂಕರ್ಯ ನಡೆಸುವವರಿಗೆ ಮಾಸಾಶನ, ಪ್ರಸ್ತುತ ಗರಡಿ ಇರುವ ಸ್ಥಳದ ಪಹಣಿ ಪತ್ರವು ಆಯಾಯ ಗರಡಿಗಳ ಹೆಸರಿನಲ್ಲಿಯೇ ನೋಂದಾಯಿಸಬೇಕೆನ್ನುವ ಪ್ರಮುಖ 3 ಬೇಡಿಕೆಗಳನ್ನು ಈಡೇರಿಸುವಂತೆ ಸಮಾವೇಶದ ಮೂಲಕ ಪ್ರಸ್ತಾಪಿಸಲಾಯಿತು.