ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬೆಳಕು: ಬಿಲ್ಲಾಡಿ ಆತ್ಮಾನಂದ ಸರಸ್ವತಿ ಕೈಗಾರಿಕಾ ತರಬೇತಿ ಸಂಸ್ಥೆ: ದಾಖಲಾತಿ ಶುರು

ಕೋಟ : ಆತ್ಮಾನಂದ ಸರಸ್ವತಿ ಕೈಗಾರಿಕಾ ತರಬೇತಿ ಕೇಂದ್ರ ಬಿಲ್ಲಾಡಿ ಜಾನುವಾರುಕಟ್ಟೆಯಲ್ಲಿ ಈ ಸಾಲಿನ ಪ್ರವೇಶ ಪ್ರಕ್ರಿಯೆ ಶುರುವಾಗಿದ್ದು ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ 2 ವರ್ಷದ ಅವಧಿಯ ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಹಾಗೂ ಎಲೆಕ್ಟ್ರೀಷಿಯನ್ ತರಬೇತಿ ಕೋರ್ಸುಗಳು ಇಲ್ಲಿ ಲಭ್ಯವಿದೆ.
ಏನೇನು ತರಬೇತಿ?
ಎಸ್.ಎಸ್.ಎಲ್.ಸಿ ಅನುತ್ತೀರ್ಣರಾದವರಿಗೆ ಅಲ್ಪಾವಧಿಯಲ್ಲಿ ಮೆಕ್ಯಾನಿಕ್ಸ್ ರೆಫ್ರಿಜರೇಶನ್, ಎಲೆಕ್ಟ್ರೀಕಲ್ ವಯರಿಂಗ್, ಏಲೆಕ್ಟ್ರಾನಿಕ್ಸ್ ಸರ್ವೀಸಿಂಗ್, ಗೃಹ ಉಪಕರಣಗಳ ದುರಸ್ತಿ ಹಾಗೂ ಕಂಪ್ಯೂಟರ್ ವಿಭಾಗದಲ್ಲಿ ತರಬೇತಿ ಪಡೆಯಲು ಅವಕಾಶವಿದೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬೆಳಕು:
ಈ ಸಂಸ್ಥೆಯು ನುರಿತ ಸಿಬ್ಬಂಧಿವರ್ಗ, ಸುಸಜ್ಜಿತ ಕಾರ್ಯಾಗಾರ, ವಸತಿ ಸೌಲಭ್ಯ ಹಾಗೂ ವಿಶಾಲವಾದ ಕ್ರೀಡಾಂಗಣ ಹೊಂದಿದೆ.
ಧರ್ಮಸ್ಥಳ ಶ್ರೀ ರಾಮಕ್ಷೇತ್ರ ಉಡುಪಿ ಸಮಿತಿ ಏಜುಕೇಶನಲ್ ಟ್ರಸ್ಟ್ (ರಿ) ಇದರ ಅಧೀನದಲ್ಲಿ ಇರುವ ಈ ಸಂಸ್ಥೆ ಕನ್ಯಾಡಿಯ ಗುರುದೇವ ಮಠದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹಾಗೂ ಕಾರ್ಯಾಧ್ಯಕರಾದ ಬನ್ನಂಜೆ ಬಾಬು ಅಮೀನ್ ಇವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು ಗ್ರಾಮೀಣ ಭಾಗದ ಬಡ ಮಕ್ಕಳ ಪಾಲಿಗೆ ಬೆಳಕಾಗಿದೆ.
ಬದುಕು ಕಂಡುಕೊಂಡಿದ್ದಾರೆ ನೂರಾರು ವಿದ್ಯಾರ್ಥಿಗಳು
ಇಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಡೊನೇಶನ್ ಇರುವುದಿಲ್ಲ.ಕೇವಲ ಟ್ಯೂಶನ್ ಫೀಸ್‍ನ್ನು ಮಾತ್ರ ಪಡೆದು  ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.
ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ.
ಈ ಸಂಸ್ಥೆಯು ಉದ್ಯೋಗ ಅವಕಾಶಕ್ಕಾಗಿ ಹರ್ಷ ಗೃಹೋಪಕರಣ ಮಳಿಗೆ, ಶಾಂತ ಇಲೆಕ್ಟ್ರೀಕಲ್ಸ್, ಕೂಲ್ ಬ್ರೀಸ್, ಸಾಯಿ ರೆಫ್ರಿಜರೇಶನ್ ಹಾಗೂ ಎರ್ ಕಂಡೀಷನಿಂಗ್ ಮತ್ತು ಲಿಪಿ ಕೌಶಲ್ಯ ಅಭಿವೃದ್ಧಿ ಕೇಂದ್ರದೊಂದಿಗೆ ವಡಂಬಡಿಕೆಯನ್ನು ಮಾಡಿಕೊಂಡಿದೆ.
ಪಠ್ಯೇತ್ತರ ವಿಷಯಕ್ಕೂ ಸೈ:
2019-20ನೇ ಸಾಲಿನ ಅಖಿಲ ಭಾರತ ವೃತ್ತಿ ಶಿಕ್ಷಣ ಇಲಾಖೆಯಿಂದ ನಡೆದ ಗ್ರೇಡಿಂಗ್ ಸಮೀಕ್ಷೆಯಲ್ಲಿ ಸಂಸ್ಥೆಯು ಭರ್ಜರಿ ನಿರ್ವಹಣೆ ತೋರಿದೆ.
ಐ.ಟಿ.ಐ ವಿದ್ಯಾಭ್ಯಾಸದ ಬಳಿಕ ಶಿಕ್ಷಣ ಮುಂದುವರಿಸುವುದಾದರೆ ನೇರವಾಗಿ 2ನೇ ವರ್ಷದ ಡಿಪ್ಲೋಮಾ ಆ ಬಳಿಕ ಇಂಜಿನಿಯರಿಂಗ್ ಶಿಕ್ಷಣಕ್ಕೆ ಇಲ್ಲಿ ಅವಕಾಶವಿದೆ.
ಪ್ರಸಕ್ತ ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಮಾರ್ಗದರ್ಶನದಂತೆ ಸಾಮಾಜಿಕ ಅಂತರದಲ್ಲಿ ಶಿಕ್ಷಣವನ್ನು ಹಾಗೂ ವಸತಿ ವ್ಯವಸ್ಥೆ ಇಲ್ಲಿ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರಾಂಶುಪಾಲರನ್ನು ಸಂಪರ್ಕಿಸಿ: 7349716274