ಅಕ್ರಮ ಮತದಾನ ಅರ್ಜಿ ವಜಾ: ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಉಪಚುನಾವಣೆ ಹಾದಿ ಸುಗಮ

ಕಲಬುರಗಿ: 2018ರ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಬಂದಿದ್ದ ಪ್ರತಾಪ್ ಗೌಡ ಪಾಟೀಲ್ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಸದ್ಯ ಅನರ್ಹಗೊಂಡಿರುವ ಪ್ರತಾಪ್ ಗೌಡ ಪಾಟೀಲ್ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಪ್ರತಾಪ್ ಅಕ್ರಮ ಮತದಾನ ಮೂಲಕ ಗೆಲುವು ಸಾಧಿಸಿದ್ದಾರೆಂದು ಆರೋಪಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಬಸನಗೌಡ ತುರವಿಹಾಳ ನ್ಯಾಯಾಲಯ ಮೆಟ್ಟಿಲು ಏರಿದ್ದರು. ಆದರೆ ಬಸನಗೌಡ ಸೂಕ್ತ ದಾಖಲೆಗಳನ್ನು ಸಲ್ಲಿಸದ ಕಾರಣ ಅವರ ಅರ್ಜಿಯನ್ನು ಕೋರ್ಟ್ ವಜಾ […]

ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಅಸ್ಥಿತ್ವಕ್ಕಾಗಿ ಪರದಾಡುತ್ತಿದೆ: ಬಿ.ಸಿ. ಪಾಟೀಲ್

ಹಾವೇರಿ: ಕಾಂಗ್ರೆಸ್ ನಲ್ಲಿ ಏನು ಉಳಿದಿಲ್ಲ, ಅದೊಂದು ಮುಳುಗುತ್ತಿರುವ ಹಡಗು. ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಪರದಾಡುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ಹಾವೇರಿಯ ಹೀರೆಕೆರೂರು ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದದರು. ಕಾಂಗ್ರೆಸ್ 2019ರ ಚುನಾವಣಾ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾಯ್ದೆಯ ತಿದ್ದುಪಡಿಯನ್ನು ಉಲ್ಲೇಖಿಸಿತ್ತು. ಆದರೆ ಈಗ ಕಾಂಗ್ರೆಸ್ ಪರಿಸ್ಥಿತಿ ಹೇಳುವುದೊಂದು ಮಾಡುವುದು ಇನ್ನೊಂದು ಆಗಿದೆ ಎಂದು ಕುಟುಕಿದರು. ಕಾಂಗ್ರೆಸ್ಸಿಗರು ರಾಜಕೀಯ ದುರುದ್ದೇಶಕ್ಕಾಗಿ ಈಗ ಕಾಯ್ದೆಗಳನ್ನು ವಿರೋಧಿಸುತ್ತಿದೆ. ಕಾಂಗ್ರೆಸ್ ಮಾಡುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ ಎಂದು ಕಿಡಿಕಾರಿದರು.

ಇಂದಿನಿಂದ ಉಡುಪಿ ಕೃಷ್ಣಮಠ ಭಕ್ತರ ಪ್ರವೇಶಕ್ಕೆ ಮುಕ್ತ

ಉಡುಪಿ: ಉಡುಪಿ ಕೃಷ್ಣಮಠದಲ್ಲಿ ಭಕ್ತರಿಗೆ ಶ್ರೀಕೃಷ್ಣ ದರ್ಶನ ಪಡೆಯುವ ಅವಕಾಶ ಇಂದಿನಿಂದ ಆರಂಭಗೊಂಡಿತು. ದೇವರ ದರ್ಶನಕ್ಕೆ ಅವಕಾಶ ಕಲ್ಪಿಸುವುದಕ್ಕಾಗಿ ಮಾಡಿದ ವಿಶೇಷ ಪ್ರವೇಶ ದ್ವಾರವನ್ನು ಪರ್ಯಾಯ ಅದಮಾರು ಈಶಪ್ರಿಯತೀರ್ಥ ಶ್ರೀಪಾದರು, ಅದಮಾರು ಮಠಾಧೀಶರಾದ ವಿಶ್ವಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ವಿದ್ಯಾಧೀಶತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭತೀರ್ಥ ಶ್ರೀಪಾದರು ಉದ್ಘಾಟಿಸಿದರು. ಶ್ರೀಕೃಷ್ಣ ದೇವರ ಮುಂಭಾಗದಲ್ಲಿ ಲೋಕಾರ್ಪಣೆಗೊಳಿಸಿ ಅನುಗ್ರಹ ಸಂದೇಶ ನೀಡಿದರು. ಇಂದಿನಿಂದ ಭಕ್ತಾದಿಗಳಿಗೆ ನಿಗದಿತ ಸಮಯದಲ್ಲಿ (ಮಧ್ಯಾಹ್ನ 2 ಗಂಟೆಯಿಂದ 5 ರವರೆಗೆ) […]

ಪ್ರೇಯಸಿಗೆ ಚೂರಿ ಇರಿದು, ಗುಂಡಿಕ್ಕಿ ಕೊಲೆಗೈದ ಪಾಗಲ್ ಪ್ರೇಮಿ

ಜೈಪುರ: ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರೇಯಸಿ ಇನ್ನೊಬ್ಬ ಯುವಕನ ಜೊತೆ ಇದ್ದ ವಿಚಾರ ತಿಳಿದು ಆಕೆಗೆ ಚೂರಿ ಇರಿದು, ಗುಂಡಿಕ್ಕಿ ಕೊಂದ ಘಟನೆ ರಾಜಸ್ತಾನದ ಜೈಪುರದಲ್ಲಿ ನಡೆದಿದೆ. ಯುವತಿ ಪರೀಕ್ಷೆ ಮುಗಿಸಿ ವಾಪಸ್ ಬರುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಯುವಕರಿಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನು ಮಧ್ಯದಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬೆಳಕು: ಬಿಲ್ಲಾಡಿ ಆತ್ಮಾನಂದ ಸರಸ್ವತಿ ಕೈಗಾರಿಕಾ ತರಬೇತಿ ಸಂಸ್ಥೆ: ದಾಖಲಾತಿ ಶುರು

ಕೋಟ : ಆತ್ಮಾನಂದ ಸರಸ್ವತಿ ಕೈಗಾರಿಕಾ ತರಬೇತಿ ಕೇಂದ್ರ ಬಿಲ್ಲಾಡಿ ಜಾನುವಾರುಕಟ್ಟೆಯಲ್ಲಿ ಈ ಸಾಲಿನ ಪ್ರವೇಶ ಪ್ರಕ್ರಿಯೆ ಶುರುವಾಗಿದ್ದು ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ 2 ವರ್ಷದ ಅವಧಿಯ ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಹಾಗೂ ಎಲೆಕ್ಟ್ರೀಷಿಯನ್ ತರಬೇತಿ ಕೋರ್ಸುಗಳು ಇಲ್ಲಿ ಲಭ್ಯವಿದೆ. ಏನೇನು ತರಬೇತಿ? ಎಸ್.ಎಸ್.ಎಲ್.ಸಿ ಅನುತ್ತೀರ್ಣರಾದವರಿಗೆ ಅಲ್ಪಾವಧಿಯಲ್ಲಿ ಮೆಕ್ಯಾನಿಕ್ಸ್ ರೆಫ್ರಿಜರೇಶನ್, ಎಲೆಕ್ಟ್ರೀಕಲ್ ವಯರಿಂಗ್, ಏಲೆಕ್ಟ್ರಾನಿಕ್ಸ್ ಸರ್ವೀಸಿಂಗ್, ಗೃಹ ಉಪಕರಣಗಳ ದುರಸ್ತಿ ಹಾಗೂ ಕಂಪ್ಯೂಟರ್ ವಿಭಾಗದಲ್ಲಿ ತರಬೇತಿ ಪಡೆಯಲು ಅವಕಾಶವಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬೆಳಕು: ಈ ಸಂಸ್ಥೆಯು ನುರಿತ […]