ವಾರ್ಪಲೋಟಾ: ಅಂತಾರಾಷ್ಟ್ರೀಯ ಮೋಟಾರ್ ಸೈಕ್ಲಿಂಗ್ ಫೆಡರೇಷನ್ (ಎಫ್‌ಐಎಂ) ಬಾಜಾ ಕ್ರಾಸ್ ಕಂಟ್ರಿ ವಿಶ್ವಕಪ್‌ನ ಮಹಿಳಾ ವಿಭಾಗದಲ್ಲಿ ಐಶ್ವರ್ಯ ಮೊದಲ ಸ್ಥಾನ ಪಡೆದು ಇತಿಹಾಸ ಬರೆದಿದ್ದಾರೆ. 4 ಸುತ್ತಿನ ರೇಸ್‌ನಲ್ಲಿ ಒಟ್ಟು 3,200 ಕಿ.ಮೀ. ಕ್ರಮಿಸಿ, 65 ಅಂಕ ಪಡೆದು ಕೂಟದ ಚಾಂಪಿಯನ್ ಎನಿಸಿಕೊಂಡರು. ಪೋರ್ಚುಗಲ್ನ ರೀಟಾ ವಿಯೆರಾ 61 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡರು.
ಐಶ್ವರ್ಯ ಸಾಧನೆ ಹಿಂದೆ ದೊಡ್ಡ ಸಾಹಸವಿದೆ. ವಿಶ್ವಕಪ್‌ನಲ್ಲಿ ಅವರು ಕೇವಲ 250 ಸಿಸಿ ಬೈಕ್‌ನಿಂದ ಇಷ್ಟು ದೊಡ್ಡ ಸಾಧನೆ ಮೆರೆದಿದ್ದಾರೆ. ಬೇರೆ ದೇಶದ ಸ್ಪರ್ಧಿಗಳು 450 ಸಿಸಿ ಬೈಕ್ ಹೊಂದಿದ್ದರು. ಆದರೆ ಐಶ್ವರ್ಯ 250 ಸಿಸಿ ಬೈಕ್‌ನಲ್ಲೇ ಸಾಹಸ ಮೆರೆದರು.
ಐಶ್ವರ್ಯ ಬೈಕ್ ರೇಸಿಂಗ್ ಜತೆ ಮಾಡೆಲಿಂಗ್ ಕ್ಷೇತ್ರದಲ್ಲೂ ಹೆಸರು ಮಾಡಿದ್ದಾರೆ. ಪ್ರತಿಷ್ಠಿತ ಬ್ರಾಂಡ್‌ಗಳ ಫೋಟೋಶೂಟ್‌ಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.