ದೇಶದ ಜನತೆಗೆ ಬಿಗ್ ಶಾಕ್: ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ₹266 ಹೆಚ್ಚಳ

ನವದೆಹಲಿ:  ಬೆಲೆ ಏರಿಕೆಯ ಬಿಸಿಯಲ್ಲಿ‌ ಸುಡುತ್ತಿರುವ ದೇಶದ ಜನತೆಗೆ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ವಾಣಿಜ್ಯ ಬಳಕೆಯ ಸಿಲೆಂಡರ್ ಬೆಲೆಯನ್ನು ₹ 266 ರೂಪಾಯಿ ಹೆಚ್ಚಿಸುವ ಮೂಲಕ‌ ಬಿಗ್ ಶಾಕ್ ಕೊಟ್ಟಿದೆ.

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಂದಿನಿಂದ 266 ರೂಪಾಯಿ ಹೆಚ್ಚಳವಾಗಿದ್ದು, ಇನ್ಮುಂದೆ 19 ಕೆಜಿ ಸಿಲೆಂಡರ್ ಗೆ 2 ಸಾವಿರ ರೂಪಾಯಿ 50 ಪೈಸೆ ನೀಡಬೇಕು. ಈ ಹಿಂದೆ ಅದರ ಬೆಲೆ 1,734 ರೂಪಾಯಿಯಾಗಿತ್ತು. ಗೃಹ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಳವಾಗಿಲ್ಲ.

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಳವಾಗುತ್ತಿದ್ದಂತೆ ಹೊಟೇಲ್ ಗಳಲ್ಲಿ ಆಹಾರ ಪದಾರ್ಥಗಳ ಬೆಲೆ, ಬೇಕರಿಗಳಲ್ಲಿನ ತಿಂಡಿ-ತಿನಿಸುಗಳಲ್ಲಿ ಸಹ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.