ಉಡುಪಿ, ಮೇ 14: ಭಾರತೀಯ ಸೇನೆ Soldier-GD (ಮಹಿಳಾ ಮಿಲಿಟರಿ ಪೊಲೀಸ್) ಹುದ್ದೆಗಳನ್ನು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಜುಲೈ – ಸೆಪ್ಟೆಂಬರ್ ಅವಧಿಯಲ್ಲಿ ಬೆಳಗಾವಿ ನಗರದಲ್ಲಿ ನೇಮಕಾತಿ ರ್ಯಾಲಿಯನ್ನು ಆಯೋಜಿಸಲಾಗಿದೆ.
ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ಇಚ್ಚಿಸುವ ಮಹಿಳಾ ಅಭ್ಯರ್ಥಿಗಳು ಆನ್‍ಲೈನ್ ಪೋರ್ಟಲ್ www.joinindianarmy.nic.in ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಆನ್‍ಲೈನ್ ನೊಂದಣಿಗೆ ಜೂನ್ 8 ಕೊನೆಯ ದಿನವಾಗಿರುತ್ತದೆ. ನೇಮಕಾತಿ ರ್ಯಾಲಿಯ ನಿಖರ ದಿನಾಂಕ ಮತ್ತು admit card ಅನ್ನು ಅಭ್ಯರ್ಥಿಗಳ ನೊಂದಾಯಿತ ಇ-ಮೇಲ್‍ಗೆ ಕಳುಹಿಸಲಾಗುವುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.