ಕಾರ್ಕಳ ಹಿಂದೂ ಜಾಗರಣ ವೇದಿಕೆಯಿಂದ ‘ಭಾರತ್ ಮಾತಾ ಪೂಜನ್’: 400 ಹಿಂದೂ ಕಾರ್ಯಕರ್ತರಿಂದ ದೀಕ್ಷೆ ಸ್ವೀಕಾರ

ಬೆಳ್ಮಣ್: ಹಿಂದೂ ಜಾಗರಣ ವೇದಿಕೆ ಕಾರ್ಕಳ-ಬೆಳ್ಮಣ್ ವಲಯ ಇದರ ವತಿಯಿಂದ ಭಾರತ್ ಮಾತಾ ಪೂಜನ್ ಮತ್ತು ನೂತನ ಘಟಕಗಳ ಘೋಷಣೆ ಕಾರ್ಯಕ್ರಮ ಇಂದು ಸೂಡ ಸುಬ್ರಹ್ಮಣ್ಯ ದೇವಸ್ಥಾನದದ ಸಭಾಂಗಣದಲ್ಲಿ ನಡೆಯಿತು.

ಬೆಳ್ಮಣ್ ವಲಯದ ಖ್ಯಾತ ಧಾರ್ಮಿಕ ಮುಖಂಡ ಶ್ರೀಶ ಭಟ್ ಅಧ್ಯಕ್ಷತೆ ವಹಿಸಿದ್ದರು. ವಾಗ್ಮಿ, ಹಿಂದೂ ಧಾರ್ಮಿಕ ಮುಖಂಡ ಶ್ರೀಕಾಂತ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು.

ಹಿಂದೂ ಜಾಗರಣ ವೇದಿಕೆಯ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಬೈಲೂರು, ರಾಜೇಶ್ ಉಚ್ಚಿಲ, ಕಾರ್ಕಳ ತಾಲೂಕು ಹಿಂಜಾವೇ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ನಾರಾವಿ, ಹಿಂಜಾವೇ ಬೆಳ್ಮಣ್ ವಲಯಾಧ್ಯಕ್ಷ ಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಕ್ಕದಕಟ್ಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಜಿಲ್ಲಾ ಭೂ ಸುರಕ್ಷಾ ಸಂಯೋಜಕ್ ರಮೇಶ್ ಕಲ್ಲೊಟ್ಟೆ, ಜಿಲ್ಲಾ ಹಿಂದೂ ಯುವವಾಹಿನಿ ಸಂಯೋಜಕ್ ಉಮೇಶ್ ನಾಯ್ಕ್ ಸೂಡ, ಕಾಪು ತಾಲೂಕು ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಆಚಾರ್ಯ ಮೊದಲಾದ ಮುಖಂಡರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುಮಾರು 400 ಮಂದಿ ಹಿಂದೂ ಕಾರ್ಯಕರ್ತರು, ಮಾತೆಯರು ಹಿಂದೂ ಜಾಗರಣದ ದೀಕ್ಷೆ ಸ್ವೀಕರಿಸಿದರು. ಅಕ್ಷತಾ ಪೂಜಾರಿ ಪ್ರಾರ್ಥಿಸಿದರು.