ಮಕ್ಕಳ “ಬಾಂಧವ್ಯ”ದ ಕತೆ ಹೇಳುವ ದ.ಕ ಯುವಕನ ಕಿರುಚಿತ್ರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ

ಮೂವಿಮಸಾಲ (ಉಡುಪಿ xpress):  ರಾಜಸ್ಥಾನ್ ನ ಜೈಪುರದಲ್ಲಿ ನಡೆದ ಪ್ರತಿಷ್ಠಿತ Pinkcity ಇಂಟರ್ನ್ಯಾಷನಲ್ ಶಾರ್ಟ್ ಫಿಲಂ ಫೆಸ್ಟಿವಲ್ ನಲ್ಲಿ 2019 ರ ಸಾಲಿನ ಬೆಸ್ಟ್ ಸೋಶಿಯಲ್ ಅವೇರ್ನೆಸ್ ಫಿಲ್ಮ್ ಅವಾರ್ಡ್ಗ್ ಗೆ ದಕ್ಷಿಣ ಕನ್ನಡದ ವಿಟ್ಲ, ಅಡ್ಯ ನಡ್ಕದ ಯುವಕ ರಂಜಿತ್ ಅಡ್ಯನಡ್ಕ ನಿರ್ದೇಶಿಸಿದ ಚಿತ್ರ ‘ಬಾಂಧವ್ಯ’ಆಯ್ಕೆಯಾಗಿದೆ. ದೇಶ-ವಿದೇಶಗಳಿಂದ ಈ ಚಿತ್ರೋತ್ಸವಕ್ಕೆ ಎರಡು ಸಾವಿರಕ್ಕೂ ಹೆಚ್ಚಿನ ಕಿರುಚಿತ್ರಗಳು ಪೈಪೋಟಿ ನೀಡಿತ್ತು.

ವಿದೇಶಫಿಲ್ಮ್ ವಿಭಾಗದಲ್ಲಿ 16, ಮತ್ತು ಇಂಡಿಯನ್ ಫಿಲ್ಮ್ ವಿಭಾಗದಲ್ಲಿ 35 ಕಿರುಚಿತ್ರಗಳು ಕೊನೆಯ ಹಂತದಲ್ಲಿ ಭಾರೀ ಸ್ಪರ್ಧೆ ನೀಡಿತ್ತು.  ಇದರಲ್ಲಿ ಕರಾವಳಿ ಹುಡುಗನ “ಬಾಂಧವ್ಯ “ಆಯ್ಕೆಯಾಗಿ ದಕ್ಷಿಣ ಭಾರತದಿಂದ ಆಯ್ಕೆಯಾದ ಮೊದಲ ಚಿತ್ರ ಎನ್ನುವುದು ಹೆಮ್ಮೆಗೆ ಭಾಜನವಾಗಿದೆ. ಇಷ್ಟ ಮಾತ್ರವಲ್ಲ ಪುಣೆ ಅಂತಾರಾಷ್ಟ್ರೀಯ ಕಿರು ಚಿತ್ರೋತ್ಸವ 2019- ಕ್ಕೂ ಈ ಚಿತ್ರ  ಆಯ್ಕೆಯಾಗಿದೆ.

ಹೇಗಿದೆ ಕತೆ?
” ಬಾಂಧವ್ಯ”ಸರಳ ಮತ್ತು ಹೃದ್ಯವಾದ ಕಥಾ ಹಂದರವುಳ್ಳ ಚಿತ್ರ. ಮೊಬೈಲ್ ಜಗತ್ತಿನಲ್ಲಿ ಮಕ್ಕಳ ಪೋಷಣೆಯನ್ನು ಪಾಲಕರು ಹೇಗೆ ಮಾಡಬೇಕು? ಒಂದು ಮೊಬೈಲ್ ನಿಂದ ಎಷ್ಟೆಲ್ಲಾ ಒಳ್ಳೆಯ ಹಾಗೂ ಕೆಟ್ಟ ವಿಚಾರಗಳು ನಮ್ಮಲ್ಲಿ ಪ್ರಭಾವ ಬೀರುತ್ತದೆ? ನಮ್ಮ ಸ್ವಾತಂತ್ರ್ಯಕ್ಕೆ ಮಕ್ಕಳ ಜೀವನ ಹೇಗೆ ಕೊನೆಗೊಳ್ಳುತ್ತದೆ? ಎನ್ನುವ ಕತೆ ಹೇಳುವ ಚಿತ್ರ ಈ ಕಾಲದ ಸನ್ನಿವೇಶದ ಹದ ಪಾಕದಂತಿದೆ.

ಚಿತ್ರಕ್ಕೆ ಛಾಯಾಗ್ರಹಣ- ಮೋಹನ್ ಪಡ್ರೆ ,ಸಂಗೀತ ನಾಗಾರ್ಜುನ್ ಮಂಗಲ್ಪಾಡಿ, ಸಂಕಲನ- ರೋಶಿಕ್ ಪಂಜ. ಕಲರಿಂಗ್ ಚರಣ್ ಜೋಗಿ, ಸಂಭಾಷಣೆ ಸಹ ನಿರ್ದೇಶನ -ಅಕ್ಷತ್ ವಿಟ್ಲ, ಸಬ್ ಟೈಟಲ್ ಕೃತಿ ಕೈಲಾರ್, ಕ್ಯಾಮೆರಾ ಅಸ್ಸಿಸ್ಟಂಟ್-ರಾಜು  ಚಿತ್ರಕ್ಕೆ ಕ್ರಿಯಾತ್ಮ ಸ್ಪರ್ಶ ನೀಡಿದ್ದಾರೆ.

ತಾರಾಗಣದಲ್ಲಿ ಬೇಬಿಶ್ರೀ ಬೆಂಗಳೂರು(ಕಣ್ಮಣಿ ಧಾರಾವಾಹಿ ಖ್ಯಾತಿಯ, ಕನ್ನಡ, ತಮಿಳು, ತೆಲುಗು, ಹಿಂದಿ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಬಾಲ ಕಲಾವಿದೆ).
ಹರ್ಷ ರೈ ಪುತ್ರಕಳ, ಚಂದ್ರಕಲಾ ಮಂಗಳೂರು ಮೊದಲಾದವರು ಸಖತ್ತಾಗಿ ಮಿಂಚಿದ್ದಾರೆ. ಅಂದಹಾಗೆ ಈ ಚಿತ್ರವನ್ನು  ಅಂಜು ಕ್ರಿಯೇಷನ್ಸ್ ನಿರ್ಮಿಸಿದೆ.