ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (KIA) ವಿಂಗ್ಸ್ ಇಂಡಿಯಾ ಅವಾರ್ಡ್ಸ್ 2024 ರಲ್ಲಿ “ವರ್ಷದ ಅತ್ಯುತ್ತಮ ವಿಮಾನ ನಿಲ್ದಾಣ” ಎಂಬ ಮತ್ತೊಂದು ಪ್ರಶಸ್ತಿಯನ್ನು ಪಡೆದುಕೊಂಡಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಐದು ಮಿಲಿಯನ್ಗಿಂತಲೂ ಕಡಿಮೆ ಪ್ರಯಾಣಿಕರ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ಗೆದ್ದಿದೆ.
ಬೆಂಗಳೂರು ವಿಮಾನ ನಿಲ್ದಾಣವು ತನ್ನ ದೆಹಲಿಯ ಪ್ರತಿಸ್ಪರ್ಧಿಯೊಂದಿಗೆ ಪ್ರಶಸ್ತಿಯನ್ನು ಹಂಚಿಕೊಂಡಿದೆ. ಎರಡೂ ವಿಮಾನ ನಿಲ್ದಾಣಗಳು ಅಗ್ರ ಸ್ಥಾನಕ್ಕೆ ಪೈಪೋಟಿ ನಡೆಸಿವೆ.
ವಿಂಗ್ಸ್ ಇಂಡಿಯಾ ಫೋರಮ್ ಏಷ್ಯಾದ ಅತಿದೊಡ್ಡ ನಾಗರಿಕ ವಿಮಾನಯಾನ ಪ್ರದರ್ಶನವಾಗಿದೆ. ಜನವರಿ 18 ರ ಗುರುವಾರದಿಂದ ಹೈದರಾಬಾದ್ನ ಹೋಟೆಲ್ ತಾಜ್ ಕೃಷ್ಣಾದಲ್ಲಿ ನಾಲ್ಕು ದಿನಗಳ ಕಾರ್ಯಕ್ರಮವನ್ನು ನಡೆದಿದೆ.
“ಅಮೃತ ಕಾಲದಲ್ಲಿ ಭಾರತವನ್ನು ವಿಶ್ವಕ್ಕೆ ಸಂಪರ್ಕಿಸುವುದು: 2047 ರಲ್ಲಿ ಭಾರತೀಯ ನಾಗರಿಕ ವಿಮಾನಯಾನಕ್ಕೆ ವೇದಿಕೆಯನ್ನು ಹೊಂದಿಸುವುದು” ಪರಿಕಲ್ಪನೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸಮಾರಂಭದಲ್ಲಿ ಉಪಸ್ಥಿತರಿದ್ದು ಪ್ರಶಸ್ತಿಗಳನ್ನು ವಿತರಿಸಿದ್ದಾರೆ.
KIA ಯು ಈ ಹಿಂದೆಯೂ ಅನೇಕ ಪ್ರಶಸ್ತಿಗಳಿಗೆ ಭಾಜನವಾಗಿದೆ. ಯುನೆಸ್ಕೋದ ಪ್ರಿಕ್ಸ್ ವರ್ಸೈಲ್ಸ್ ನೀಡಿದ ‘ಒಳಾಂಗಣಕ್ಕಾಗಿ ವಿಶೇಷ ಪ್ರಶಸ್ತಿ’, ಏವಿಯೇಷನ್ ಅನಾಲಿಟಿಕ್ಸ್ ಸಂಸ್ಥೆ ಸಿರಿಯಮ್ ನಿಂದ ‘ವಿಶ್ವದ ಅತ್ಯಂತ ಕ್ಲಪ್ತ ಸಮಯದ ವಿಮಾನ ನಿಲ್ದಾಣ’ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ.