ಮೊಟ್ಟೆ ತಿನ್ನುವುದರಿಂದ ಏನೆಲ್ಲಾ ಲಾಭವಿದೆ ಎನ್ನುವುದು ಕೆಲವರಿಗೆ ಮಾತ್ರ ಗೊತ್ತು. ಪ್ರತಿದಿನ ಮೊಟ್ಟೆ ಸೇವನೆಯಿಂದ ಮಧುಮೇಹ ದೂರ ಇಡಬಹುದು ಎಂದು ಹೊಸ ಅಧ್ಯಯನವೊಂದರಿಂದ ತಿಳಿದುಬಂದಿದೆ.
ಇತ್ತೀಚೆಗೆ ಅಧ್ಯಯನ ಸಂಸ್ಥೆಯೊಮದು ನಿರ್ದಿಷ್ಠ ಲಿಪಿಡ್ ಅಣುಗಳನ್ನೊಳಗೊಂಡ ಹೆಚ್ಚಿನ ಮೊಟ್ಟೆ ಸೇವಿಸುತ್ತಿದ್ದ ಪುರುಷರ ರಕ್ತದ ಮಾದರಿಗಳನ್ನು ಟೈಪ್-2 ಡಯಾಬಿಟಿಸ್ ನಿಂದ ಮುಕ್ತವಾಗಿರುವಂತಹ ಪುರುಷರ ರಕ್ತದ ಮಾದರಿಯೊಂದಿಗೆ ಹೋಲಿಕೆ ಮಾಡಿ ನೋಡಿದಾಗ ಸಕಾರಾತ್ಮಕ ಅಂಶ ಕಂಡುಬಂದಿದೆ.
ಪ್ರೋಟಿನ್ ನ ಗಣಿ ಈ ಮೊಟ್ಟೆ:
ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ ಅಂಶದಿಂದಾಗಿ ಮೊಟ್ಟೆಯನ್ನು ಹೆಚ್ಚಾಗಿ ಸೇವಿಸಬಾರದು ಎನ್ನುತ್ತಾರೆ ಕೆಲವರು ಆದರೂ ಮೊಟ್ಟೆಯಲ್ಲಿ ಪ್ರೋಟಿನ್ ಅಂಶ ಹೇರಳವಾಗಿದೆ.
ಮೊಟ್ಟೆ ಸೇವನೆಯಿಂದ ಮಧುಮೇಹದಿಂದ ಉಂಟಾಗುವ ಅಪಾಯವನ್ನು ಕಡಿಮೆ ಮಾಡಬಹುದು ಎಂಬುದು ಅಧ್ಯಯನದಲ್ಲಿದೆ. ಯಾವುದಕ್ಕೂ ಮೊಟ್ಟೆ ತಿನ್ನುವುದನ್ನು ರೂಢಿಸಿಕೊಂಡರೆ ನಮ್ಮ ಆರೋಗ್ಯಕ್ಕೇನೆ ಉಪಯೋಗ. ನೀವು ಮೊಟ್ಟೆ ಬಗ್ಗೆ ಇಷ್ಟು ತಿಳಿದು ಮೊಟ್ಟೆ ತಿನ್ನಲು ಶುರು ಮಾಡುವಿರಲ್ಲಾ?