ಬೆಳ್ತಂಗಡಿ: ಯುವ ಉದ್ಯಮಿ ವಿಷ ಸೇವಿಸಿ ಮೃತ್ಯು.

ಬೆಳ್ತಂಗಡಿ: ಯುವ ಉದ್ಯಮಿಯೊಬ್ಬರು ಒಂದು ತಿಂಗಳ ಹಿಂದಷ್ಟೇ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದು, ಇವರು ತಿಂಡಿಯೊಂದಿಗೆ ವಿಷ ಸೇವಿಸಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ.

ನೆಲ್ಯಾಡಿ ನಿವಾಸಿ ಸುದೀಪ್ ರೈ(36) ಮೃತಪಟ್ಟವರು.

ಸುದೀಪ್ ರೈ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕರ್ನೋಡಿಯಲ್ಲಿ ಅಜ್ಜನ ಮನೆಯಲ್ಲಿ ವಾಸವಿದ್ದರು. ಸುದೀಪ್ ರೈ’ಗೆ ಫೆ.17ರಂದು ಕಾರ್ಕಳ ತಾಲೂಕಿನ ಯುವತಿ ಜೊತೆಗೆ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿತ್ತು.

ಸುದೀಪ್ ಅವರು ಬೆಳ್ತಂಗಡಿಯಲ್ಲಿ ಎಸ್‌ಆ‌ರ್‌ಎನ್ ಗ್ರೂಪ್ ಹೆಸರಲ್ಲಿ ಇಲೆಕ್ಟ್ರಾನಿಕ್ ಮತ್ತು ಸೋಲಾರ್ ಉದ್ಯಮ ನಡೆಸುತ್ತಿದ್ದರು. ಈ ನಡುವೆ, ಮಾರ್ಚ್ 17ರಂದು ಸುದೀಪ್ ತಿಂಡಿಯ ಜೊತೆಗೆ ವಿಷ ಸೇವಿಸಿದ್ದಾರೆ ಎನ್ನಲಾಗುತ್ತಿದ್ದು ಆನಂತರ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಮಾರ್ಚ್ 29ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.