ಉಡುಪಿ: ಏ.1ರಂದು ಪಿಂಕ್​ ಸೂಪರ್​ ಮೂನ್​ ವೀಕ್ಷಣೆಗೆ ಅವಕಾಶ

ಉಡುಪಿ: ಆಕಾಶಕಾಯದಲ್ಲಿ ದಿನವೂ ಬೆಳ್ಳಗೆ ಗೋಚರಿಸುವ ಚಂದ್ರ ಏ.1ರಂದು ಸಂಜೆ 6:30ಕ್ಕೆ ಪಿಂಕ್​ ಸೂಪರ್​ ಮೂನ್​ (ಗುಲಾಬಿ ಬಣ್ಣದಲ್ಲಿ) ಕಂಡುಬರಲಿದ್ದಾನೆ. ಅಲ್ಲದೆ, ಪ್ರತಿದಿನ ಕಾಣುತ್ತಿದ್ದ ಗಾತ್ರಕ್ಕಿಂತ ಶೇ.30ರಷ್ಟು ಹೆಚ್ಚು ಪ್ರಕಾಶಮಾನವಾಗಿ ಮತ್ತು ದೊಡ್ಡದಾಗಿ ಗೋಚರಿಸಲಿದ್ದಾನೆ.  ಬಣ್ಣ ಬದಲಿಸಿಕೊಳ್ಳಲಿರುವ ಚಂದ್ರನ ಗೋಚರದಲ್ಲಿನ ಕೌತುಕ ಹಾಗೂ ಅಪೂರ್ವ ಕ್ಷಣಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ‘ಮೋಸ್ಟ್​ ಪವರ್ ಫುಲ್​’ ಎಂಬ ವಿಶ್ವ ದಾಖಲೆ ಗಳಿಸಿದ ಮಣಿಪಾಲದ ಆರ್​. ಮನೋಹರ್​ ಅವರು ಆವಿಷ್ಕರಿಸಿದ ದೂರದರ್ಶಕದ ಮೂಲಕ ಏ.1ರಂದು ಸಂಜೆ 6:30ಕ್ಕೆ ಕೊಳಲಗಿರಿಯ ಅತಿ ಎತ್ತರ […]

ಮಂಗಳೂರು: ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ

ಮಂಗಳೂರು: ನಗರದ ಅತ್ತಾವರದ ಅಪಾರ್ಟ್‌ಮೆಂಟ್ ಒಂದರ 12ನೇ ಮಹಡಿಯಿಂದ ಹಾರಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿರುವುದು ವರದಿಯಾಗಿದೆ. ಕೋಲ್ಕತ್ತಾ ಮೂಲದ ಸಾರ್ಥಕ್ ಮೌರ್ಯ (23) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ನಗರದ ಖಾಸಗಿ ವೈದ್ಯಕೀಯ ಕಾಲೇಜಿನ 4ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿರುವ ಈತ ಸೋಮವಾರ ಮಧ್ಯಾಹ್ನದ ವೇಳೆಗೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದ್ದು, ಘಟನೆಗೆ ನೈಜ ಕಾರಣ ತಿಳಿದು ಬಂದಿಲ್ಲ. ಖಾಸಗಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಶಿಕ್ಷಣ ಪಡೆಯುತ್ತಿದ್ದ ಸಾರ್ಥಕ್ ಅವರು ಸೋಮವಾರ […]

ಬೆಳ್ತಂಗಡಿ: ಯುವ ಉದ್ಯಮಿ ವಿಷ ಸೇವಿಸಿ ಮೃತ್ಯು.

ಬೆಳ್ತಂಗಡಿ: ಯುವ ಉದ್ಯಮಿಯೊಬ್ಬರು ಒಂದು ತಿಂಗಳ ಹಿಂದಷ್ಟೇ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದು, ಇವರು ತಿಂಡಿಯೊಂದಿಗೆ ವಿಷ ಸೇವಿಸಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ. ನೆಲ್ಯಾಡಿ ನಿವಾಸಿ ಸುದೀಪ್ ರೈ(36) ಮೃತಪಟ್ಟವರು. ಸುದೀಪ್ ರೈ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕರ್ನೋಡಿಯಲ್ಲಿ ಅಜ್ಜನ ಮನೆಯಲ್ಲಿ ವಾಸವಿದ್ದರು. ಸುದೀಪ್ ರೈ’ಗೆ ಫೆ.17ರಂದು ಕಾರ್ಕಳ ತಾಲೂಕಿನ ಯುವತಿ ಜೊತೆಗೆ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿತ್ತು. ಸುದೀಪ್ ಅವರು ಬೆಳ್ತಂಗಡಿಯಲ್ಲಿ ಎಸ್‌ಆ‌ರ್‌ಎನ್ ಗ್ರೂಪ್ ಹೆಸರಲ್ಲಿ ಇಲೆಕ್ಟ್ರಾನಿಕ್ ಮತ್ತು ಸೋಲಾರ್ […]

ಸ್ವರ್ಣ ಜುವೆಲ್ಲರ್ಸ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಾತಿ

ಉಡುಪಿ: ಸ್ವರ್ಣ ಜುವೆಲ್ಲರ್ಸ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಾತಿ ನಡೆಯಲಿದೆಅನುಭವ ಇರುವವರು ಅಥವಾ ಫ್ರೆಶರ್ಸ್ ಅರ್ಜಿ ಸಲ್ಲಿಸಬಹುದು. ಊಟ ಮತ್ತು ವಸತಿ ಸೌಲಭ್ಯವಿದೆ. ಸಂದರ್ಶನದ ಕಾರ್ಯಕ್ಷಮತೆಯ ಆಧಾರದ ಮೇಲೆ ಸಂಬಳ ನೀಡಲಾಗುವುದು. ಆಸಕ್ತರು ನಿಮ್ಮ ರೆಸ್ಯೂಮ್ ಅನ್ನು ವಾಟ್ಸಪ್ ಅಥವಾ ಇಮೇಲ್ ಮಾಡಿ. .ಸ್ಥಳ : ಉಡುಪಿ, ಕುಂದಾಪುರ, ಮಂಗಳೂರುಆಸಕ್ತರು ನಿಮ್ಮ ರೆಸ್ಯೂಮ್ ಅನ್ನು ವಾಟ್ಸಪ್ ಅಥವಾ ಇಮೇಲ್ ಮಾಡಿ. 📞 7483255496 ಅಥವಾ 📩 [email protected]

ಬ್ರಹ್ಮಾವರ: ಮಾಬುಕಳದಲ್ಲಿ ಸ್ಕೂಟಿಗೆ ಟ್ರಕ್ ಢಿಕ್ಕಿ; ಸವಾರೆ ಸ್ಥಳದಲ್ಲೇ ಮೃತ್ಯು.

ಬ್ರಹ್ಮಾವರ: ಮಾಬುಕಳದಲ್ಲಿ ಟ್ರಕ್ ಢಿಕ್ಕಿಯಾಗಿ ಸ್ಕೂಟಿ ಸವಾರೆ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ. ಮೃತ ಮಹಿಳೆ ಉಪ್ಪಿನಕೋಟೆ ಸಾಲಿಕೇರಿ ನಿವಾಸಿ ನಿರ್ಮಲಾ (54). ಇವರು ತನ್ನ ಪುತ್ರಿ ನಿರೀಕ್ಷಾ ಅವರೊಂದಿಗೆ ಸಾಲಿಗ್ರಾಮದ ಆಂಜನೇಯ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಮಾಬುಕಳ ಸೇತುವೆ ಬಳಿ ಬ್ರಹ್ಮಾವರದಿಂದ ಕೋಟ ಕಡೆ ಸಂಚರಿಸುತ್ತಿದ್ದ ತೆಲಂಗಾಣ ನೋಂದಣಿಯ ಟ್ರಕ್‌ ಢಿಕ್ಕಿ ಹೊಡೆಯಿತು. ಢಿಕ್ಕಿಯ ರಭಸಕ್ಕೆ ನಿರ್ಮಲಾ ಅವರು ಸ್ಥಳದಲ್ಲೇ ಮೃತಪಟ್ಟರು. ನಿರೀಕ್ಷಾ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.