ಬೆಳ್ತಂಗಡಿ: ವಿಶೇಷ ಪ್ರಭೇದದ ಕಪ್ಪೆಯೊಂದು ಬೆಳ್ತಂಗಡಿ ಗೇರುಕಟ್ಟೆ ಸಮೀಪದ ಮನೆಯ ತೋಟವೊಂದರಲ್ಲಿ ಸೋಮವಾರ ಪತ್ತೆಯಾಗಿದೆ.
ಈ ಕಪ್ಪೆಯು ಮಲಬಾರ್ ಪ್ರಾಗ್ (malabar gliding frog) ಎಂಬ ಪ್ರಭೇದಕ್ಕೆ ಸೇರಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದು ಬಲು ಅಪರೂಪಕ್ಕೆ ಕಾಣಸಿಗುವ ಪ್ರಭೇದವಾಗಿದೆ. ಭಾರತದ ಪಶ್ಚಿಮಘಟ್ಟ ಕೆಲವೊಂದು ಭಾಗಗಳಲ್ಲಿ ಅಪರೂಪ ಎಂಬಂತೆ ಕಾಣಸಿಗುತ್ತವೆ. ಪಾಚಿ ಹಿಡಿಯುವ ಮರ, ಹಸಿರು ಎಲೆಗಳಲ್ಲಿ ಕಂಡುಬರುವ ಇವು, ಹಾರುವ ಲಕ್ಷಣವನ್ನು ಹೊಂದಿದೆ. ಇದರ ಮೇಲ್ಮೈ ಕಡುಹಸಿರು ಬಣ್ಣದಿಂದ ಕೂಡಿದೆ.