ಬೆಳ್ಮಣ್: ಮಾ. 14ಕ್ಕೆ ಉಚಿತ ಕಣ್ಣಿನ ತಪಾಸಣಾ ಶಿಬಿರ

ಬೆಳ್ಮಣ್: ಬೆಳ್ಮಣ್ ಗ್ರಾಪಂ ಹಾಗೂ ಬೆಳ್ಮಣ್ ನೇತ್ರ ಚಿಕಿತ್ಸಾಲಯ ಇದರ ಸಂಯುಕ್ತ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ಮಾ. 14ರ ಭಾನುವಾರ ಬೆಳಿಗ್ಗೆ 10ರಿಂದ 1ಗಂಟೆಯವರೆಗೆ ಬೆಳ್ಮಣ್ ದಾಮೋದರ್ ಕಾಂಪ್ಲೆಕ್ಸ್ ನ ನೇತ್ರ ಚಿಕಿತ್ಸಾಲಯ ಕೇಂದ್ರದಲ್ಲಿ ನಡೆಯಲಿದೆ.

ಶಿಬಿರದಲ್ಲಿ ಕಣ್ಣಿನ ಪೊರೆ ತಪಾಸಣೆ, ಕಣ್ಣಿನ ಇತರ ಸಮಸ್ಯೆಗಳ ತಪಾಸಣೆ ಹಾಗೂ ಚಿಕಿತ್ಸೆ ಅಗತ್ಯವಿರುವ ಶಿಬಿರಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಕನ್ನಡಕ ವ್ಯವಸ್ಥೆ ಮಾಡಿಕೊಡಲಾಗುವುದು. ಹಾಗೆ ಪೊರೆ ಶಸ್ತ್ರ ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುವುದು ಎಂದು ಡಾ. ರೂಪಶ್ರಿ ರಾವ್ ಹಾಗೂ ಡಾ. ಹರಿಪ್ರಸಾದ್ ಓಕುಡ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 84311 79905, 91416 99303 ಸಂಪರ್ಕಿಸಬಹುದು.