ಧಾರ್ಮಿಕ ನಂಬಿಕೆಯಲ್ಲಿ ಬಂಟ ಸಮುದಾಯ ಬಲವಾಗಿತ್ತು: ಶ್ರೀಕಾಂತ್ ಶೆಟ್ಟಿ

ಬೆಳ್ಮಣ್: ಬಂಟ ಸಮುದಾಯ ಧಾರ್ಮಿಕ ನಂಬಿಕೆಯಲ್ಲಿ ಬಲವಾಗಿದ್ದ ಸಮುದಾಯ. ಶಿಕ್ಷಣ ಕ್ಷೇತ್ರಕ್ಕೆ ಬಂಟ ಸಮುದಾಯದ ಕೊಡುಗೆ ಅಪಾರವಾದದ್ದು. ಮಕ್ಕಳಿಗೆ ವಿದ್ಯೆಯನ್ನು ನೀಡುವುದರ ಜೊತೆಯಲ್ಲಿ ಸಂಸ್ಕಾರ ಸಂಸ್ಕೃತಿಯನ್ನು ಕಲಿಸಿಕೊಡುವ ಕೆಲಸಗಳು ನಮ್ಮ ಹಿರಿಯರಿಂದ ನಡೆಯಬೇಕಾಗಿದೆ ಜತೆಗೆ ಧಾರ್ಮಿಕ ನಂಬಿಕೆಗಳಿಗೆ ಪುನಶ್ಚೇತನ ದೊರಕಬೇಕಾಗಿದೆ ಎಂದು ಯುವ ವಾಗ್ಮಿ  ಶ್ರೀಕಾಂತ್ ಶೆಟ್ಟಿ ಹೇಳಿದರು.
ಬೆಳ್ಮಣ್ ಶ್ರೀ ಕೃಷ್ಣಾ ಸಭಾಂಗಣದಲ್ಲಿ ಸೋಮವಾರ ಜರುಗಿದ ಬೆಳ್ಮಣ್ ವಲಯ ಬಂಟರ ಯಾನೆ ನಾಡವರ ಸಂಘದ ವಾರ್ಷಿಕ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ , ವಿಧ್ಯಾರ್ಥಿ ವೇತನ ವಿತರಣೆ ಹಾಗೂ ಸಮ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಬಂಟ ಸಂಸ್ಕೃತಿ ಉನ್ನತ ಮಟ್ಟದಲ್ಲಿದೆ. ಬಂಟರು ಎಲ್ಲಾಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಬಂಟ ಸಮುದಾಯವರು ನಾಯಕತ್ವ ಗುಣವುಳ್ಳವರಾಗಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿಯೂ ಗುರುತಿಸಿಕೊಳ್ಳುತ್ತಿದ್ದಾರೆ . ಎಲ್ಲರೂ ಸಮಾನ ಮನಸ್ಸಿನ ಮೂಲಕ ಬೆಳೆದಾಗ ಸಂಘಟನೆಗಳು ಇನ್ನಷ್ಟು ಬಲಗೊಳ್ಳಲು ಸಾಧ್ಯ ನಮ್ಮ ಮಕ್ಕಳಲ್ಲಿ ಸಂಸ್ಕೃತಿ ದೂರವಾಗುತ್ತಿದೆ. ಕೂಡು ಕುಟುಂಬಗಳು ಮರೆಯಾಗಿ ಇಂದು ವಿಭಕ್ತ ಕುಟುಂಬಗಳ ಸಂಖ್ಯೆ ಮಿತಿ ಮೀರುತ್ತಿದೆ. ಮಕ್ಕಳಿಗೆ ಸಂಸ್ಕಾರ ಸಂಸ್ಕೃತಿಯನ್ನು ಕಲಿಸುವ ಕಾರ್ಯ ಪ್ರತಿಯೊಂದು ಮನೆಯ ತಾಯಂದಿರಿಂದ ನಿರಂತರ ನಡೆಯಬೇಕಾಗಿದೆ ಎಂದರು.
ಇದೇ ಸಂದರ್ಭ ಬಂಟ ಸಮುದಾಯದ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಮಣ್ ವಲಯ ಬಂಟರ ಸಂಘದ ಅಧ್ಯಕ್ಷ ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ ವಹಿಸಿದ್ದರು.
ಸಂಘದ ಸ್ಥಾಪಕಧ್ಯಕ್ಷ ಶೋಧನ್ ಕುಮಾರ್ ಶೆಟ್ಟಿ, ಪೂರ್ವಧ್ಯಕ್ಷ ಪ್ರಶಾಂತ್ ಶೆಟ್ಟಿ, ಗೌರವಾಧ್ಯಕ್ಷ ತುಕಾರಾಮ್ ಶೆಟ್ಟಿ, ಬೆಳ್ಮಣ್ ಗ್ರಾಮ ಸಮಿತಿ ಅಧ್ಯಕ್ಷ ದೇವೇಂದ್ರ ಶೆಟ್ಟಿ, ನಂದಳಿಕೆ ಸತೀಶ್ ಮಾಡ, ಕಾಂತಾವರ ಬೇಲಾಡಿ ರಂಜೀತ್, ಮೋಹನ್ ಶೆಟ್ಟಿ ಬೋಳ, ಪ್ರಕಾಶ್ ಶೆಟ್ಟಿ ಕಲ್ಯಾ , ಕಾರ್ಯದರ್ಶಿ ರಿತೇಶ್ ಶೆಟ್ಟಿ ಸೂಡ, ಮತ್ತಿತರಿದ್ದರು.
ಸತೀಶ್ ಶೆಟ್ಟಿ ಬೋಳ ಹಾಗೂ ನಿಶ್ಮಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸೂರ್ಯಕಾಂತ್ ಶೆಟ್ಟಿ ವಂದಿಸಿದರು.