‘ಅಂದಾಜಿ ಆಪುಜಿ’ ನಾಟಕಕ್ಕೆ ಮುಹೂರ್ತ, ಉತ್ತಮ ಸಂದೇಶವುಳ್ಳ ನಾಟಕದಿಂದ ಸಮಾಜದ ಬದಲಾವಣೆ ಸಾಧ್ಯ: ಶಶಿಧರ್ ಶೆಟ್ಟಿ

ಕಾರ್ಕಳ: ನಾಟಕಗಳು ಕಲಾಭಿಮಾನಿಗಳನ್ನು ರಂಜಿಸುವುದರ ಜತೆಗೆ ಸಮಾಜಕ್ಕೊಂದು ಉತ್ತಮ ಸಂದೇಶ ನೀಡಿ ಆ ಮೂಲಕ ಸಮಾಜದ ಬದಲಾವಣೆಯಲ್ಲಿ ಶ್ರಮಿಸಬೇಕಾಗಿದೆ. ಉತ್ತಮ ಸಂದೇಶವುಳ್ಳ ನಾಟಕದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಉದ್ಯಮಿ ಶಶಿಧರ್ ಶೆಟ್ಟಿ ಹೇಳಿದರು.
ಬೆಳ್ಮಣ್ ಶ್ರೀ ದುರ್ಗಾಪರಮೇಶ್ವರೀ ದೇವಾಸ್ಥಾನದಲ್ಲಿ ಶುಕ್ರವಾರ ನಡೆದ ತುಳುವ ಸಿರಿ ಕಲಾವಿದರು ಬೆಳ್ಮಣ್ ಇವರ ಅಭಿನಯದ ಪತ್ರಕರ್ತ ವಿಲಾಸ್ ಕುಮಾರ್ ನಿಟ್ಟೆ ರಚಿಸಿದ ಈ ವರ್ಷದ ವಿನೂತನ ನಾಟಕ ‘ಅಂದಾಜಿ ಆಪುಜಿ’ ಇದರ ಶುಭ ಮುಹೂರ್ತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ತುಳು ಭಾಷೆ ಸಂಸ್ಕೃತಿಯ ಉಳಿಸುವ ಪ್ರಯತ್ನ ನಾಟಕದ ಮೂಲಕವು ನಡೆಯುತ್ತದೆ. ರಂಗಭೂಮಿಯಲ್ಲಿ ಹಲವಾರು ತಂಡಗಳಿದ್ದರೂ ಹೊಸಬರ ತಂಡವೊಂದು ಹುಟ್ಟಿಕೊಂಡಿರುವುದು ರಂಗಭೂಮಿಗೆ ದೊಡ್ಡ ಕೊಡುಗೆ ಎಂದರು.
ಕಾರ್ಯಕ್ರಮದಲ್ಲಿ ಪುಂಡಿ ಪಣವು ಚಿತ್ರದ ನಿರ್ಮಾಪಕ ರಾಮಕೃಷ್ಣ ಶೆಟ್ಟಿ, ಉದ್ಯಮಿ ದೇವೇಂದ್ರ ಶೆಟ್ಟಿ, ನ್ಯಾಯವಾದಿ ಸರ್ವಜ್ಞ ತಂತ್ರಿ, ಜಗದೀಶ್ ಶೆಟ್ಟಿ, ನಾಟಕದ ನಿರ್ದೇಶಕ ತುಳುನಾಡ ರತ್ನ ದಿನೇಶ್ ಅತ್ತಾವರ್, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸಂಚಾಲಕ ಸಂದೀಪ್ ಪೂಜಾರಿ, ವೀರೇಂದ್ರ ಆರ್.ಕೆ, ನಿತ್ಯಾನಂದ ಅಮೀನ್, ಸುಭಾಷ್ ಕುಮಾರ್ ನಂದಳಿಕೆ, ರಂಗ ಕಲಾವಿದರಾದ ನರೇಂದ್ರ ಕೆರೆಕಾಡು, ಭಗವನ್ ಸುರತ್ಕಲ್, ಸುಧಾಕರ್ ಸಾಲ್ಯಾನ್, ಸತೀಶ್ ಶಿರ್ವಾ, ದಿನೇಶ್ ಪಾಪು ಮುಂಡ್ಕೂರು, ಚಿತ್ರಲೇಖಾ ಭಗವನ್, ರಾಜೇಶ್ ಕೆಂಚನಕೆರೆ, ತಂಡದ ನಿರ್ವಹಕ ಹರಿಪ್ರಸಾದ್ ನಂದಳಿಕೆ ಮತ್ತಿತರಿದ್ದರು. ತಂಡದ ಮಾರ್ಗದರ್ಶಕರು ಕಿನ್ನಿಗೋಳಿ ವಿಜಯ ಕಲಾವಿದರು ನಾಟಕ ತಂಡದ ಅಧ್ಯಕ್ಷ ಶರತ್ ಶೆಟ್ಟಿ ಮುಂಡ್ಕೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.