ಉಡುಪಿ ಎಕ್ಸ್‌ಪ್ರೆಸ್ ವರದಿ: ಬ್ಯೂಟಿ ಪಾರ್ಲರ್ ವೊಂದರಲ್ಲಿ ಬ್ಯುಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಆಕಾಶಭವನ ಸಮೀಪ ನಡೆದಿದೆ.
ಆಕಾಶಭವನ ಬಳಿಯ ಕಾಪ್ರಿಗುಡ್ಡೆ ನಿವಾಸಿಯಾದ ಶಿಫಾಲಿ ( 22 ) ಅತ್ಮಹತ್ಯೆಗೆ ಶರಣಾದ ಬ್ಯುಟಿಷಿಯನ್. ಈಕೆ ಬ್ಯೂಟಿ ಪಾರ್ಲರ್ ವೊಂದರಲ್ಲಿ ಬ್ಯುಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದಳು. ಶುಕ್ರವಾರ ಸಂಜೆ ಎಂದಿನಂತೆ ಮನೆಗೆ ಆಗಮಿಸಿದ್ದಳು.
ನಂತರ ಮನೆಯಲ್ಲಿ ಕೋಣೆಗೆ ತೆರಳಿ, ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ