ಜನಸಾಮಾನ್ಯರಲ್ಲಿ ಆರೋಗ್ಯದ ಬಗ್ಗೆ ಜನ ಜಾಗೃತಿ”ಬಿ ಹೆಲ್ತಿ” ; ಬ್ರಹ್ಮಾವರದಲ್ಲಿ ಬೃಹತ್ ಮಟ್ಟದ ಮ್ಯಾರಥಾನ್

ಬ್ರಹ್ಮಾವರ; ಎಕ್ತಾ ಇವೆಂಟ್ ಮ್ಯಾನೇಜ್ಮೆಂಟ್ ಮತ್ತು ಕಲ್ಯಾಣಿ ಸ್ಪೋರ್ಟ್ಸ್ ರವರ ಜಂಟಿ ಆಶ್ರಯದಲ್ಲಿ ಹಾಗೂ ಸಮಾಜ ಸೇವಕರು ಆಗಿರುವ ಶ್ರೀಯುತ ಅಮೃತ್ ಶೆಣೈಯವರ ಮುಂದಾಳತ್ವದಲ್ಲಿ ಜನವರಿ 20 ರಂದು ಬ್ರಹ್ಮಾವರದ ಹೃದಯ ಭಾಗದಲ್ಲಿ “ಬಿ ಹೆಲ್ತಿ” ಎಂಬ‌, ಜನಸಾಮಾನ್ಯರಲ್ಲಿ ಆರೋಗ್ಯ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಬೃಹತ್ ಮಟ್ಟದ ಮ್ಯಾರಥಾನ್ ನಡೆಯಲಿದೆ.  ಬ್ರಹ್ಮಾವರ ಪರಿಸರದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಜನ ಜಾತ್ರೆ ಸಾಗಲಿದ್ದು, ದೇಶದ ಮೂಲೆ ಮೂಲೆಗಳಿಂದ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. ಈ ಮ್ಯಾರಥಾನ್ ನ ಸ್ಪರ್ಧೆ ಎರಡು ವಿಭಾಗದಲ್ಲಿ ಸಾಗಲಿದ್ದು ಪುರುಷರಿಗೆ 10 ಕಿ.ಮೀ ಹಾಗೂ ಮಹಿಳೆಯರಿಗೆ 6  ಕಿ.ಮೀ ಕ್ರಮಿಸಬೇಕಾಗಿದೆ.  ಪ್ರತಿ ವಿಭಾಗದಲ್ಲಿ 6  ವಿಜೇತರನ್ನು ಆಯ್ಕೆ ಮಾಡಲಾಗುವುದು. ನಗದು ಬಹುಮಾನದ ಜೊತೆ ಫಲಕಗಳು, ಪದಕಗಳು ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಗುವುದು. ಹಾಗೂ ಭಾಗವಹಿಸುವ ಪ್ರತಿಯೊಂದು ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಭಾಗವಹಿಸುವ ಸ್ಪರ್ಧಾಳುಗಳು ಆದಷ್ಟು ಬೇಗ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಮಾಡಿ ಸ್ಪರ್ಧಿಸುವ ಸ್ಪರ್ಧಾಳುಗಳಿಗೆ ಟೀ ಶರ್ಟ್, ಕ್ಯಾಪ್ ಹಾಗೂ ಪ್ರಮಾಣ ಪತ್ರ ನೀಡಲಾಗುವುದು. ಹಾಗೂ ಉಪಹಾರದ ವ್ಯವಸ್ಥೆಯು ಮಾಡಲಾಗುದು.
ದೂರದ ಊರಿನಿಂದ ಬರುವ ಮಹಿಳಾ ಹಾಗೂ ಪುರುಷ ಸ್ಪರ್ಧಾಳುಗಳಿಗೆ ತಂಗಲು  ಪ್ರತ್ಯೇಕವಾಗಿ‌ ಬಾರ್ಕೂರ್ ಹಾಗೂ ಬ್ರಹ್ಮಾವರ ಕಾಲೇಜ್ ಗಳಲ್ಲಿ  ವ್ಯವಸ್ಥೆ ಮಾಡಲಾಗಿದೆ.
ಅನ್ ಲೈನ್ ನೋಂದಣಿಗಾಗಿ 
www.ektaevm.com ಹಾಗೂ www.Kalyanisportsbvr.com ಹಾಗೂ ನೇರ ನೋಂದಣಿಗಾಗಿ ಎಕ್ತಾ ಇವೆಂಟ್ ಮ್ಯಾನೇಜ್ಮೆಂಟ್ ಬ್ರಹ್ಮಾವರ, ಕಲ್ಯಾಣಿ ಸ್ಪೋರ್ಟ್ಸ್ ಬ್ರಹ್ಮಾವರ, ಸಿನಿಗ್ರಾಫಿಕ್ಸ್ ಕುಂಜಾಲ್ ಮೈನ್ ರೋಡ್ ಬ್ರಹ್ಮಾವರ ಹಾಗೂ ಮೈಂಡ್ ಲೀಡ್ ಸ್ಕೂಲ್ ಸೈಬರಕಟ್ಟೆಯಲ್ಲಿ ಮಾಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ;8762573823,9108192979,9558732221