ನಿಮಗೆ ಟೀಚರ್ ಆಗ್ಬೇಕು ಅನ್ನೊ ಕನಸಿದ್ಯಾ: ಭವಿಷ್ಯದ ನೂರಾರು ಟೀಚರ್ಸ್ ಗಳನ್ನು ತಯಾರು ಮಾಡ್ತಿದೆ ಉಡುಪಿಯ ಶ್ರೀಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್

ಟೀಚಿಂಗ್ ಉದ್ಯೋಗ ದಿ ಬೆಸ್ಟ್ ಉದ್ಯೋಗ, ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾ ನಾವೂ ಬದುಕು ಕಟ್ಟಿಕೊಳ್ಳೋದು ನಿಜಕ್ಕೂ ಖುಷಿ ಕೊಡೋ ಪ್ರೊಫೆಶನ್ ಎನ್ನುವವರಿದ್ದಾರೆ. ಅಂತವರಿಗೆ ಈ ಟೈಮ್ ನಲ್ಲಿ ಸರಿಯಾದ ಮಾರ್ಗದರ್ಶನ ನೀಡುವವರಿಲ್ಲ.

ನಿಮಗೆ ಟೀಚರ್ ಆಗ್ಬೇಕು ಅನ್ನೋ ಆಸೆ ಇದ್ಯಾ? ಆದ್ರೆ ಸರಿಯಾದ ಮಾಹಿತಿ ಮತ್ತು ಗೈಡೆನ್ಸ್ ಸಿಗ್ತಾ ಇಲ್ವಾ? ಹಾಗಿದ್ರೆ ಉಡುಪಿಯ ಕುಂಜಿಬೆಟ್ಟಿನ ಶ್ರೀಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ನೀವು ಅದ್ಬುತ ತರಬೇತಿ ಪಡೆದು ಟೀಚರ್ ಆಗಬಹುದು.

ಯಸ್, ಕಳೆದ 7 ವರ್ಷಗಳಿಂದ ಉಡುಪಿಯ ಕುಂಜಿಬೆಟ್ಟಿನ ಶ್ರೀಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ಮಹಿಳೆಯರಿಗೆ ಮಾಂಟೇಸರಿ, ನರ್ಸರಿ ಟೀಚರ್ ಟ್ರೈನಿಂಗ್ ನಡೆಸುತ್ತಿದೆ.

ಏನಿದೆ ಇಲ್ಲಿ?

ಮಕ್ಕಳನ್ನು ಸಹಜವಾಗಿ 2.5 – 3 ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಕಲಿಸಲಾಗುತ್ತದೆ. ಮಾಂಟೆಸ್ಸರಿ ಬೋಧನೆಯೂ ಮಗುವಿನ ಎಲ್ಲಾ ಅಂಶಗಳನ್ನು ಬೆಳೆಸುವ ಕಡೆಗೆ ವ್ಯವಹರಿಸುತ್ತದೆ. ವಿಶೇಷ ಕಾರ್ಯಾಗಾರಗಳು ಮತ್ತು ವಿಚಾರಗೋಷ್ಠಿಗಳನ್ನು ಈ ತರಬೇತಿಯ ಅವಧಿಯಲ್ಲಿ ಒಳಗೊಂಡಿದೆ. ಮಾಂಟೆಸ್ಸರಿ ವಿಧಾನದ ಸಲಕರಣೆಗಳನ್ನು ಉಪಯೋಗಿಸುವುದು ಮತ್ತು ಮಗುವಿನ ದೈಹಿಕ ಭಾವನಾತ್ಮಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಅನುಕೂಲವಾಗುವ ಬೋಧನಾ ವಿಧಾನಗಳನ್ನು ಇಲ್ಲಿ ಹೇಳಿಕೊಡಲಾಗುತ್ತದೆ.

ಶಿಕ್ಷಕಿಯರಿಗೆ ಭರ್ಜರಿ ಬೇಡಿಕೆ:

ಇಲ್ಲಿ ಅತ್ಯುತ್ತಮ ತರಬೇತಿ ಪಡೆದ ಶಿಕ್ಷಕಿಯರಿಗೆ ಭಾರೀ ಬೇಡಿಕೆ ಉಂಟು. ತರಬೇತಿಯ ನಂತರ ಅನೇಕ ಶಾಲೆಗಳಲ್ಲಿ ಸಂದರ್ಶನಕ್ಕೆ ಹೋಗಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಈಗಾಗಲೇ ಇಲ್ಲಿನ ಶಿಕ್ಷಕಿ ವಿದ್ಯಾರ್ಥಿಗಳಿಗೆ (CBSE / ICSE) ಶಾಲೆಗಳಲ್ಲಿ ಉದ್ಯೋಗ ದೊರಕಿದ್ದು ನೂರಾರು ಶಿಕ್ಷಕಿಯರು ಇಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

ಭಾರತದ ಸರ್ಕಾರದ ನಿರುದ್ಯೋಗ ನಿರ್ಮೂಲನಾ ಏಜೆನ್ಸಿಯಾದ ಭಾರತ್ ಸೇವಕ ಸಮಾಜದ ಆಶ್ರಯದಲ್ಲಿ ನಡೆಸಲ್ಪಡುವ ಈ ಕೋರ್ಸಿಗೆ ಪ್ರವೇಶ ಆರಂಭವಾಗಿದ್ದು, ಪಿಯುಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿದ ಮಹಿಳಾ ಅಭ್ಯರ್ಥಿಗಳು ಈ ತರಬೇತಿಗೆ ಪ್ರವೇಶ ಪಡೆದುಕೊಳ್ಳಬಹುದು. ಟೀಚರ್ ಆಗ್ಬೇಕು ಅನ್ನೋ ಆಸೆಯನ್ನು ಇನ್ನು ಮುಂದೂಡಬೇಡಿ ನಿಮ್ಮ ಕನಸನ್ನು ಆದಷ್ಟು ಬೇಗ ಉಡುಪಿಯ ಕುಂಜಿಬೆಟ್ಟಿನ ಶ್ರೀಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಜೊತೆ ನನಸಾಗಿಸಿ.

ಮಾಹಿತಿಗಾಗಿ ಉಡುಪಿ ಕುಂಜಿಬೆಟ್ಟು ಲಾ ಕಾಲೇಜಿನ ಎದುರು, ರಮೇಶ್ ಭಟ್ ಕಾಂಪ್ಲೆಕ್ಸ್ ನ ಎರಡನೇ ಮಹಡಿಯಲ್ಲಿರುವ ಸಂಸ್ಥೆಯ ಸಂಯೋಜಕಿ ಸುನೀತಾ ಅವರನ್ನು ಸಂಪರ್ಕಿಸಿ 9901722527