ಕುಂದಾಪುರ: ಬಸ್ರೂರು ಸೊಸೈಟಿಯ ಅಧ್ಯಕ್ಷ ಗೋಪಾಲ ಪೂಜಾರಿ ನಿಧನ

ಕುಂದಾಪುರ: ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರು, ಬಸ್ರೂರು ಕೋಟಿ ಚೆನ್ನಯ್ಯ ಗರಡಿಯ ಮುಖ್ಯಸ್ಥರಾದ ಗೋಪಾಲ ಪೂಜಾರಿ (68) ಅವರು ಆ.8ರಂದು ಹೃದಯಘಾತದಿಂದ ಮೃತಪಟ್ಟಿದ್ದಾರೆ.

ಗೋಪಾಲ ಪೂಜಾರಿ ಅವರು ಸಹಕಾರ ಕ್ಷೇತ್ರದಲ್ಲಿ ಸುದೀರ್ಘ ಅವಧಿಯಿಂದ ಗುರುತಿಸಿಕೊಂಡಿದ್ದು, ಕಳೆದ 25 ವರ್ಷಗಳಿಗೂ ಹೆಚ್ಚು ಕಾಲ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದರು.

ಬಸ್ರೂರು ಗರಡಿಯ ಪಾತ್ರಿಗಳಾಗಿ, ಗರಡಿಯ ಅಭಿವೃದ್ದಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಬಸ್ರೂರು ಪರಿಸರದ ಧಾರ್ಮಿಕ, ಸಹಕಾರ, ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದರು.
ಮೃತರು ಪತ್ನಿ, ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ವಿಕಾಸ್ ಹೆಗ್ಡೆ, ಹಾಗೂ ಎಲ್ಲಾ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸಬಿತಾ ಮತ್ತು ಸಿಬ್ಬಂದಿ ವರ್ಗ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.