ಬಾರಕೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಇಂದಿನಿಂದ ಡಿ.4ರ ವರೆಗೆ ರಂಗಪೂಜಾದಿ ದೀಪೋತ್ಸವ ನೆರವೇರಲಿದೆ.
ಇಂದು (ಡಿ.2) ಪಂಚಾಮೃತ ಅಭಿಷೇಕ, ಮಹಾಪೂಜೆ, ಉತ್ಸವ ಸಂತರ್ಪಣೆ ಹಾಗೂ ರಾತ್ರಿ ರಂಗಪೂಜಾದಿ ದೀಪೋತ್ಸವ ಜರುಗಲಿದೆ. ಡಿ.3ರಂದು ಮಧ್ಯಾಹ್ನ ತುಲಾಭಾರ ಸೇವೆ ನಡೆಯಲಿದೆ. ಡಿ. 6ರಂದು ರಾತ್ರಿ ದೈವಗಳ ನೇಮೋತ್ಸವ ನೆರವೇರಲಿದೆ ಎಂದು ಆಡಳಿತ ಧರ್ಮದರ್ಶಿ ಶ್ರೀಧರ ಆಚಾರ್ಯ ವಡೇರಹೋಬಳಿ ತಿಳಿಸಿದ್ದಾರೆ.
ಇಂದು ರಾತ್ರಿ 8 ಗಂಟೆಗೆ ಧಾರ್ಮಿಕ ಸಭಾಕಾರ್ಯಕ್ರಮ ನಡೆಯಲಿದ್ದು, ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ ಅವರು ಆಶೀರ್ವಚನ ನೀಡುವರು.
ಕಾಳಿಕಾಂಬಾ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಗೋಪಾಲ ಪೂಜಾರಿ, ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಗಣೇಶ್ ಕ್ಯಾಪೂಸ್ ಸಮೂಹ ಸಂಸ್ಥೆಯ ಗಣೇಶ್ ಕಿಣಿ, ಜೇನುಗೂಡು ಜಗತ್ತು ಪತ್ರಿಕೆಯ ಸಂಪಾದಕ ರಾಮಮೂರ್ತಿ ಎಂ. ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.