udupixpress
Home Trending ಬಂಟ್ವಾಳ: ಲಾಕ್ ಡೌನ್ ಮುಂದುವರಿಕೆ ಹಿನ್ನೆಲೆ ಬ್ಯಾಂಕ್ ಮುಂದೆ ಜನಜಂಗುಳಿ

ಬಂಟ್ವಾಳ: ಲಾಕ್ ಡೌನ್ ಮುಂದುವರಿಕೆ ಹಿನ್ನೆಲೆ ಬ್ಯಾಂಕ್ ಮುಂದೆ ಜನಜಂಗುಳಿ

ಮಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಆದೇಶ ಮುಂದುವರೆಯುವ ಹಿನ್ನೆಲೆ ಸಾರ್ವಜನಿಕರು ಹಣಕ್ಕಾಗಿ ಬಾಂಕ್ ಮುಂದೆ ಪರದಾಟ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.
ಏಪ್ರಿಲ್ 14ರ ವರೆಗೆ ಇದ್ದ ಲಾಕ್‌ಡೌನ್ ಏಪ್ರಿಲ್ 30ರ‌ ವರೆಗೂ ಮುಂದುವರಿಯಲಿದೆ. ಹೀಗಾಗಿ ಜನಧನ್ ಅಕೌಂಟ್ ಜಮೆಯಾದ ಆದ ಹಣವನ್ನು ವಿತ್ ಡ್ರಾ ಮಾಡಲು ಬಂಟ್ವಾಳದ ಸಿಂಡಿಕೇಟ್ ಬ್ಯಾಂಕ್ ಮುಂದೆ ನೂರಾರು ಜನ ಜಮಾವಣೆಗೊಂಡಿದ್ದರು. ಇಂದು ಬೆಳಗ್ಗಿನಿಂದಲೂ ಸುಮಾರು 300ಕ್ಕೂ ಹೆಚ್ಚು ಜನರು ಗುಂಪಾಗಿ ಸೇರಿದ್ದು, ಲಾಕ್ ಡೌನ್ ಇದ್ದರೂ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಕೆ ನೀಡಿದ್ದರು.
ಅನಂತರ ಎಚ್ಚೆತ್ತುಕೊಂಡ‌ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಸಾಲುಗಟ್ಟಿ ನಿಂತರು. ಶನಿವಾರ ಹಾಗೂ ಭಾನುವಾರ ರಜೆ ಇದ್ದ ಕಾರಣ ಹಾಗೂ ಮತ್ತೆ ನಾಳೆ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಜನರು ಹೆಚ್ಚಾಗಿ ಸೇರಿದ್ದರು.
error: Content is protected !!