ಬಂಟ್ವಾಳ: ಕಕ್ಯಪದವು ‌ಸತ್ಯ -ಧರ್ಮ ಜೋಡುಕರೆ ಕಂಬಳ‌ ಫಲಿತಾಂಶ 

ಬಂಟ್ವಾಳ: 7ನೇ ವರ್ಷದ ಕಕ್ಯಪದವು ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ ಕೂಟ ನ.31ರಂದು‌ ಪ್ರಾರಂಭಗೊಂಡು‌ ಡಿ.1ರಂದು‌ ಸಮಾಪನಗೊಂಡಿತು.
ಕೂಟದಲ್ಲಿ ಒಟ್ಟು 126 ಜತೆ ಕೋಣಗಳು ಭಾಗವಹಿಸಿದ್ದವು.
ನೇಗಿಲು ಕಿರಿಯ (ಸಬ್ ಜ್ಯೂನಿಯರ್): 27, ನೇಗಿಲು ಕಿರಿಯ: 45 ಜೊತೆ , ಹಗ್ಗ ಕಿರಿಯ: 16 ಜೊತೆ, ನೇಗಿಲು ಹಿರಿಯ: 19 ಜೊತೆ, ಹಗ್ಗ ಹಿರಿಯ: 12 ಜೊತೆ, ಅಡ್ಡಹಲಗೆ: 05 ಜೊತೆ, ಕನೆಹಲಗೆ: 02 ಜೊತೆ ಕೋಣಗಳು ಭಾಗವಹಿಸಿದ್ದವು. ಫಲಿತಾಂಶ ಹೀಗಿದೆ.
ಕನೆಹಲಗೆ: ಬೇಲಾಡಿ ಬಾವ ಅಶೋಕ್ ಶೆಟ್ಟಿ (6½ ಕೋಲು ನಿಶಾನೆಗೆ ನೀರು ಹಾಯಿಸಿರುತ್ತಾರೆ) ಹಲಗೆ ಮುಟ್ಟಿದವರು: ನಾರಾವಿ ಯುವರಾಜ ಜೈನ್ .
ವಾಮಂಜೂರು ತಿರುವೈಲುಗುತ್ತು ನವೀನ್ ಚಂದ್ರ ಆಳ್ವ (6½ ಕೋಲು ನಿಶಾನೆಗೆ ನೀರು ಹಾಯಿಸಿರುತ್ತಾರೆ)
ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ.
ಅಡ್ಡಹಲಗೆ: ಪ್ರಥಮ: ಪಾತಿಲ ಹೊಸಮನೆ ರವಿರಾಜ್ ಶೆಟ್ಟಿ (ಹಲಗೆ ಮುಟ್ಟಿದವರು: ಪಣಪೀಲು ರಾಜವರ್ಮ ಮುದ್ಯ)
ದ್ವಿತೀಯ: ಆಳದಪದವು ಮೇಗಿನಮನೆ ಶುಭ್ರತ್ ವರುಣ್ ಶೆಟ್ಟಿ .
(ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ)
ಹಗ್ಗ ಹಿರಿಯ: ಪ್ರಥಮ: ಪದವು ಕಾನಡ್ಕ ಫ್ರಾನ್ಸಿಸ್ ಫ್ಲೇವಿ ಡಿಸೋಜಾ ‘ಎ’
(ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ)
ದ್ವಿತೀಯ: ಪದವು ಕಾನಡ್ಕ ಫ್ರಾನ್ಸಿಸ್ ಫ್ಲೇವಿ ಡಿಸೋಜಾ ‘ಬಿ’
(ಓಡಿಸಿದವರು: ಪಣಪೀಲು ಪ್ರವೀಣ್ ಕೋಟ್ಯಾನ್ )
ನೇಗಿಲು ಹಿರಿಯ: ಪ್ರಥಮ: ಬೋಳದ ಗುತ್ತು ಸತೀಶ್ ಶೆಟ್ಟಿ ‘ಎ’ (ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ)
ದ್ವಿತೀಯ: ಪಟ್ಟೆ ಬಿಜ್ಜೊಟ್ಟು ಪ್ರಶಾಂತ್ ಶೆಟ್ಟಿ ‘ಬಿ’
(ಓಡಿಸಿದವರು: ಕೊರಿಂಜೆ ಹೊಸಮನೆ ಅರುಣ್ ಕುಮಾರ್ )
ಹಗ್ಗ ಕಿರಿಯ: ಪ್ರಥಮ: ಮಿಜಾರು ಪ್ರಸಾದ್ ನಿಲಯ ಶಕ್ತಿಪ್ರಸಾದ್ ಶೆಟ್ಟಿ ‘ಎ’
(ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ)
ದ್ವಿತೀಯ: ನಕ್ರೆ ಮಹೋದಯ ನಿವಾಸ ಇಷಾನಿ ತುಕ್ರ ಭಂಡಾರಿ.
(ಓಡಿಸಿದವರು: ಅತ್ತೂರು ಕೊಡಂಗೆ ಸುಧೀರ್ ಸಾಲ್ಯಾನ್)
ನೇಗಿಲು ಕಿರಿಯ: ಪ್ರಥಮ: ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ ‘ಎ’
(ಓಡಿಸಿದವರು: ಪಲಿಮಾರು ದಿನೇಶ್ ಕೋಟ್ಯಾನ್)
ದ್ವಿತೀಯ: ಸರಪಾಡಿ ಮಿಯ್ಯಾರು ಸುರೇಶ್ ಶೆಟ್ಟಿ ‘ಎ’ (ಓಡಿಸಿದವರು: ಕನ್ನಡಿಕಟ್ಟೆ ಮೊಹಮ್ಮದ್ )
ನೇಗಿಲು ಕಿರಿಯ ಸಬ್ ಜ್ಯೂನಿಯರ್:
ಪ್ರಥಮ: ಕಡಂದಲೆ ಮುಡಾಯಿಬೆಟ್ಟು ವಿಶ್ವನಾಥ ನಿವಾಸ ಕಾಳು ಪಾಣಾರ
ದ್ವಿತೀಯ: ಪೆರಿಂಜೆ ಕುರ್ಲೊಟ್ಟು ಯುವ ಸಹೋದರರು.