ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗೆ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ

ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡಾಟಾ ಸೈನ್ಸ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಮೊಹಮ್ಮದ್ ಅಫ್ರಿದ್ಅವರು ೨೪ ಮೇ ೨೦೨೬ರಂದು ಮೈಸೂರಿನ ಚಾಮುಂಡಿ ವಿಹಾರ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ೬ ನೇ ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್‌ ಶಿಪ್‌ನಲ್ಲಿಅತ್ಯುತ್ತಮ ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.

ಅವರು ಪಾಯಿಂಟ್ ಫೈಟ್ (89 ಕೆಜಿ) ವಿಭಾಗ ಹಾಗೂ ಎಂ/ಎಫ್ ವೆಪನ್(ತಂಡ) ಸೀನಿಯರ್ ವಿಭಾಗದಲ್ಲಿಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕಗಳನ್ನು ಪಡೆದಿರುತ್ತಾರೆ. ಅಲ್ಲದೆ ಎಂ/ಎಫ್ ವೆಪನ್ ಸೀನಿಯರ್ ವಿಭಾಗದಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕಗಳನ್ನು ಪಡೆದಿರುತ್ತಾರೆ.

ಸಂಸ್ಥೆಯ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕರು ವಿದ್ಯಾರ್ಥಿಯ ಸಾಧನೆಗೆ ಅಪಾರ ಸಂತೋಷ ವ್ಯಕ್ತಪಡಿಸಿರುತ್ತಾರೆ.