ಬ್ಯಾಂಕ್‌ ಆಫ್ ಬರೋಡದಿಂದ ಭರ್ಜರಿ ಫೆಸ್ಟಿವ್ ಆಫರ್- ‘BOB ಕೆ ಸಂಗ್‌ ತ್ಯೋಹಾರ್ ಕಿ ಉಮಂಗ್’

ಬ್ಯಾಂಕ್‌ ಆಫ್ ಬರೋಡ ಈ ಬಾರಿಯ ಹಬ್ಬದ ಸೀಸನ್‌ಗೆ ಒಳ್ಳೆಯ ಆಫರ್‌ಗಳನ್ನು ಗ್ರಾಹಕರ ಮುಂದಿಟ್ಟಿದೆ. ಡಿಸ್ಕೌಂಟ್‌ ಬಡ್ಡಿದರದಲ್ಲಿ ಗೃಹಸಾಲ, ವಾಹನಸಾಲ, ಶಿಕ್ಷಣ ಸಾಲ ಮತ್ತು ವೈಯಕ್ತಿಕ ಸಾಲಗಳನ್ನು ಆಫರ್‌ ಮಾಡಿದೆ. ಹಾಗೆಯೇ, ನಾಲ್ಕು ವಿಶೇಷ ಸೇವಿಂಗ್ಸ್ ಅಕೌಂಟ್‌ಗಳನ್ನೂ ಚಾಲನೆಗೊಳಿಸಿದೆ. ಇವುಗಳ ಜೊತೆಗೆ ಈಗಿರುವ ಡೆಬಿಟ್‌ಕಾರ್ಡ್ ಮತ್ತು ಕ್ರೆಡಿಟ್‌ ಕಾರ್ಡ್ಗಳಿಗೂ ವಿವಿಧ ಡಿಸ್ಕೌಂಟ್‌ಗಳನ್ನುನೀಡಲಾಗುತ್ತಿದೆ. ಡಿಸೆಂಬರ್ 31,2023 ರವರೆಗೂ ಈ ಆಫರ್‌ಗಳು ಇರಲಿವೆ.

ಬ್ಯಾಂಕ್‌ಆಫ್ ಬರೋಡ ಬಹಳ ಕಡಿಮೆ ಬಡ್ಡಿದರಗಳಿಗೆ ಸಾಲಗಳ ಆಫರ್ ಮಾಡುತ್ತಿದೆ.ಶೇ.8.40 ರಿಂದ ಅದರ ಸಾಲದ ದರ ಆರಂಭವಾಗುತ್ತದೆ. ಈ ಬಾರಿಯ ಹಬ್ಬಕ್ಕೆ ಬ್ಯಾಂಕ್‌ ಆಫರ್ ಬರೋಡ ತನ್ನ ಗ್ರಾಹಕರಿಗೆ ಹಲವು ಕೊಡುಗೆಗಳನ್ನು ನೀಡಿದೆ. ‘BOB ಕೆ ಸಂಗ್, ತ್ಯೋಹಾರ್ ಕೀ ಉಮಂಗ್’ ಎಂಬ ಅಭಿಯಾನ ಆರಂಭಿಸಿದೆ.

ಹಬ್ಬದ ಕೊಡುಗೆಯಾಗಿ ಬ್ಯಾಂಕ್‌ ಆಫ್ ಬರೋಡಾ ಮಾಡುತ್ತಿರುವ ಆಫರ್‌ನಲ್ಲಿ ಸಾಲದ ಬಡ್ಡಿದರ ಬಹಳಕಡಿಮೆ ಮಾಡಲಾಗಿದೆ. ಗೃಹಸಾಲ ಶೇ.8.40 ಯಿಂದ ಆರಂಭವಾಗುತ್ತದೆ. ಇನ್ನು, ಕಾರ್‌ಲೋನ್‌ ದರ ಶೇ.8.70ಯಿಂದ ಆರಂಭವಾಗುತ್ತದೆ. ವಿಶೇಷವೆಂದರೆ ಗೃಹಸಾಲ ಮತ್ತು ವಾಹನ ಸಾಲಗಳಿಗೆ ಪ್ರೋಸಸಿಂಗ್ ಫೀಯಿಂದ ವಿನಾಯಿತಿ ನೀಡಲಾಗಿದೆ. ಬ್ಯಾಂಕ್ ನೀಡುವ ಶಿಕ್ಷಣ ಸಾಲಕ್ಕೆ ಬಡ್ಡಿದರ ಶೇ.8.55 ರಿಂದ ಶುರುವಾಗುತ್ತದೆ. ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆಯುವ ವಿದ್ಯಾರ್ಥಿಗಳಿಗೆ ಯಾವುದೇ ಅಡಮಾನ ಇಲ್ಲದೇ ಇನ್ನೂಕಡಿಮೆ ಬಡ್ಡಿದರಕ್ಕೆ ಶಿಕ್ಷಣ ಸಾಲವನ್ನು ಬ್ಯಾಂಕ್‌ ಆಫ್ ಬರೋಡಾ ಆಫರ್ ಮಾಡಿದೆ.

ಈ ಬ್ಯಾಂಕ್‌ನ ವೈಯಕ್ತಿಕ ಸಾಲಕ್ಕೆ ಬಡ್ಡಿದರ ಶೇ.10.10ರಿಂದಶುರುವಾಗುತ್ತದೆ. ಗರಿಷ್ಠ 20 ಲಕ್ಷ ರೂ ವರೆಗೂ ಸಾಲ ಪಡೆಯಬಹುದು. ಪ್ರೋಸಸಿಂಗ್ ಶುಲ್ಕ ಇರುವುದಿಲ್ಲ. ಫ್ಲೋಟಿಂಗ್‌ ರೇಟ್‌ ಜೊತೆಗೆ ಫಿಕ್ಸೆಡ್‌ ರೇಟ್‌ ಆಯ್ಕೆಯನ್ನೂ ಗ್ರಾಹಕರಿಗೆ ನೀಡಲಾಗಿದೆ. ಇದು ವೈಯಕ್ತಿಕ ಸಾಲ ಪಡೆಯುವವರಿಗೆ ಮಾತ್ರವಲ್ಲ, ವಾಹನ ಸಾಲ ಪಡೆಯುವವರಿಗೂ ಅನ್ವಯವಾಗುತ್ತದೆ.

ಫೆಸ್ಟಿವ್ ಆಫರ್ ಆಗಿ ಬ್ಯಾಂಕ್‌ ಆಫರ್ ಬರೋಡಾ ಲೈಟ್ ಸೇವಿಂಗ್ಸ್ ಅಕೌಂಟ್, ಬ್ರೋ ಸೇವಿಂಗ್ಸ್ ಅಕೌಂಟ್, ಪರಿವಾರ್‌ ಅಕೌಂಟ್ ಮತ್ತು ಎನ್‌ಆರ್‌ಐ ಪವರ್‌ ಪ್ಯಾಕ್‌ ಅಕೌಂಟ್, ಹೀಗೆ ನಾಲ್ಕು ಉಳಿತಾಯ ಖಾತೆಗಳನ್ನು ಬಿಒಬಿ ಆರಂಭಿಸಿದೆ. ಇದರಲ್ಲಿ ಬಿಒಬಿ ಲೈಟ್‌ ಮತ್ತು ಬ್ರೋಸೇವಿಂಗ್ಸ್ ಅಕೌಂಟ್ ಗಳಲ್ಲಿ ಮಿನಿಮಮ್‌ ಬ್ಯಾಲನ್ಸ್ ಎಂಬುದು ಇರುವುದಿಲ್ಲ ಎಂದು ಬ್ಯಾಂಕ್ ನ ಪ್ರಕಟಣೆ ತಿಳಿಸಿದೆ.