ಬೆಂಗಳೂರು: ರಾಜ್ಯದೆಲ್ಲಡೆ ಈ ಬಾರಿ ಸುರಿದ ಭಾರೀ ಮಳೆಯು ರಸ್ತೆ ಕಾಮಗಾರಿಗಳ ಅವೈಜ್ಞಾನಿಕತೆ, ಕಳಪೆ ಕಾಮಗಾರಿ ಮತ್ತು ತುಂಬಿ ತುಳುಕುತ್ತಿರುವ ಭ್ರಷ್ಟಾಚಾರಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ರಾಜ್ಯದೆಲ್ಲೆಡೆ ಸುರಿದ ಮಳೆಯ ಪರಿಣಾಮ ರಸ್ತೆಗಳಲ್ಲೆಲ್ಲಾ ನೀರು ನಿಂತು ಹೆದ್ದಾರಿ, ಮನೆ ಮಠವೆನ್ನದೆ ಎಲ್ಲವೂ ನೀರಿನಲ್ಲಿ ಮುಳುಗಿ ನಗರಗಳೆಲ್ಲಾ ಕೆರಗಳಾಗಿ ಪರಿವರ್ತಿತವಾದ ದೃಶ್ಯ ಎಲ್ಲೆಲ್ಲೂ ಕಂಡುಬಂದಿದೆ.
ಮಂಗಳೂರು-ಮೈಸೂರು-ಬೆಂಗಳೂರೆನ್ನುವ ಭೇದವಿಲ್ಲದೆ ಎಲ್ಲಾ ಕಡೆಯೂ ಒಂದೇ ತೆರನಾದ ದೃಶ್ಯಗಳು ಕಾಣಸಿಗುತ್ತವೆ. ರಸ್ತೆಗಳನ್ನು ನಿರ್ಮಾಣ ಮಾಡುವಾಗ ಸಮರ್ಪಕ ಒಳಚರಂಡಿ ವ್ಯವಸ್ಥೆಯನ್ನು ಮಾಡದಿರುವುದು, ಇರುವ ಚರಂಡಿಗಳನ್ನು ಸ್ವಚ್ಛಗೊಳಿಸದಿರುವುದು, ಕಳಪೆ ಕಾಮಗಾರಿಗಳು, ಮಿತಿ ಮೀರಿದ ಭ್ರಷ್ಟಾಚಾರದಿಂದಾಗಿ ತೆರಿಗೆ ಕಟ್ಟುವ ಜನತೆಯ ಹಣ ನೀರಿನ ರೂಪದಲ್ಲಿ ಪೋಲಾಗುತ್ತಿರುವುದು ಕಣ್ಣಿಗೆ ರಾಚುತ್ತಿದ್ದರೂ ಸಂಬಂಧಪಟ್ಟವರ್ಯಾರೂ ಚಕಾರವೆತ್ತುತ್ತಿಲ್ಲ.
Bangalore unlocked new mode of transport!#JCB #bellandurfloods pic.twitter.com/NEDrLE56Z5
— nsrivastava.eth (@nitinkr1991) September 5, 2022
ಭಾನುವಾರದಂದು ಬೆಂಗಳೂರಿನಲ್ಲಿ ಸುರಿದ ಮಳೆಗೆ ಬೆಳ್ಳಂದೂರು ಮುಳುಗಡೆಯಾಗಿದ್ದು, ಸುತ್ತಮುತ್ತಲಿನ ಪರಿಸರವು ಸಮುದ್ರದಂತಾಗಿದೆ. ಪರಿಸರದ ಕೊಳಚೆ ನೀರು ರಸ್ತೆಗಳಲ್ಲಿ ಹರಿಯುತ್ತಿದ್ದು, ಈ ಭಾಗದಲ್ಲಿ ಸಂಚಾರಕ್ಕೆ ದೋಣಿಯ ಪರ್ಯಾಯ ವ್ಯವಸ್ಥೆ ಮಾಡಬೇಕು ಎನಿಸುವಂತಿದೆ. ಪರಿಸರದ ಸುತ್ತಲಿನ ಕಟ್ಟಡಗಳೆಲ್ಲಾ ಕೊಳಚೆ ನೀರಿನಲ್ಲಿ ಮುಳುಗಿದೆ.
Latest, it's all a big sea!!! #BellandurFloods #Bellandur #Bangalorerains #bangaloreweather pic.twitter.com/5soMjivuxe
— nsrivastava.eth (@nitinkr1991) September 5, 2022
ಪ್ರತಿ ಬಾರಿಯೂ ಮಳೆ ಬಂದಾಗ ಮಹಾನಗರಗಳಲ್ಲಿ ಈ ದೃಶ್ಯಗಳು ಸರ್ವೇ ಸಾಮಾನ್ಯವೆಂಬತಾಗಿದ್ದು, ಜನರ ಗೋಳು ಕೇಳುವವರೆ ಇಲ್ಲವಾಗಿದೆ. ಜನರು ಕಷ್ಟಪಟ್ಟು ಸಂಪಾದಿಸಿ ಕಟ್ಟಿದ ತೆರಿಗೆ ಹಣ ನೀರಿನಲ್ಲಿ ಪೋಲಾಗುತ್ತಿದ್ದರೂ ಸ್ಥಳೀಯ ಆಡಳಿತಗಳು ಕೈ ಕಟ್ಟಿ ಕುಳಿತಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.