ಬಡತನದ ಬೇಗೆಯಿಂದ ಬಳಲುತ್ತಿರುವ ಕುಟುಂಬಗಳು ಕಾರ್ಕಳ ತಾಲೂಕಿನ ಕಡ್ತಲದ ಚೆನ್ನಿಬೆಟ್ಟು ಸಮೀಪ ನೂರಾರು ಬಿದಿರಿನ ಉತ್ಪನ್ನಗಳನ್ನು ಮಾಡಿ ಅದನ್ನೇ ನಂಬಿ ಕೂತಿದೆ. ಈ ಕುಟುಂಬ ಇದೀಗ ಸಾಂಪ್ರದಾಯಿಕ ಬೆತ್ತದ ಬುಟ್ಟಿ, ಸೇರು,ಅಕ್ಕಿ ತಡಪೆಗಳನ್ನು ತಯಾರಿಸಿಟ್ಟುಕೊಂಡು ಯಾರಾದರೂ ಕೊಳ್ಳುವರಾ ಅಂತ ಕಾಯುತ್ತಾ ಕೂತಿದ್ದಾರೆ.
ಕೋಲ ಕಟ್ಟಳೆಗಳು ಹೀಗೆ ಸಾಂಪ್ರದಾಯಿಕ ಶೈಲಿಯ ತುಳುನಾಡಿನ ಕಲೆಯನ್ನು ಉಳಿಸಿಕೊಂಡು ಕಲಿಸಿಕೊಂಡು ಬರುವ ವಂಶ ಅವರದ್ದು. ಇವರ ಹೆಸರು ಸುಧಾಕರಣ್ಣ, ಕೋಲ ಮೊದಲಾದ ವೇಷಗಳನ್ನು ಹಾಕುತ್ತ ಕೋಲ ಕಟ್ಟುವಲ್ಲಿ ತುಳುನಾಡಿನಲ್ಲಿ ಹೆಸರನ್ನು ಪಡೆದ ವ್ಯಕ್ತಿ ತುಂಬಾ ಸರಳ ವ್ಯಕ್ತಿತ್ವ ಅವರದ್ದು.
ಈ ಸಲದ ಲಾಕ್ಡೌನ್ ಇವರ ಇಡೀ ಜೀವನದ ಅನ್ನವನ್ನೆ ಕಿತ್ತುಕೊಂಡಂತಿದೆ. ಆದರೆ ಇವರು ಸುಮ್ಮನೆ ಕೂರಲಿಲ್ಲ, ಏಡಿ ಹಿಡಿಯುವ ಗೂರಿಗಳು, ಕೋಳಿ ಸಾಕುವ ಗೂಡುಗಳು ಗೊಬ್ಬರದ ಬುಟ್ಟಿಗಳು, ಗೂಡುದೀಪಗಳು ಹೀಗೆ ವಿವಿಧ ಬಿದಿರಿನ ಪರಿಕರಗಳನ್ನು ತಯಾರಿಸಿದ್ದಾರೆ. ಸುಧಾಕರಣ್ಣನ ಜೊತೆ ಜಗ್ಗು ಪರವ ಕೂಡ ಭತ್ತದ ಗಳಗೆಗಳನ್ನು ಮಾಡುತ್ತಾರೆ.
ಇವರ ಕೈಯಲ್ಲರಳಿದ ಚಂದದ ಉತ್ಪನ್ನ ತಗೊಳ್ಳಿ: ತಾವು ತಯಾರಿಸಿದ ಉತ್ಪನ್ನಗಳನ್ನು ಅಂಗಡಿಗಳಲ್ಲಿ ಮಾರಾಟಕ್ಕೆ ಇಟ್ಟರೆ ಸೇಲ್ ಅಗ್ತಾ ಇಲ್ಲ. ಜನರಿಗೆ ಸ್ಪಂದಿಸುತ್ತಿಲ್ಲ. ಸುಂದರ ಪರವ ಒಳ್ಳೆಯ ಗೊಬ್ಬರದ ಬಟ್ಟಿ ಮಾಡುತ್ತಾರೆ. ಹಲವಾರು ವಿವಿಧ ರೀತಿಯ ಕರಕುಶಲ ವಸ್ತುಗಳನ್ನು ಮಾಡುತ್ತಾ ಬರುವ ಈ ಕುಟುಂಬಕ್ಕೆ ನಾವು ಇವರ ಉತ್ಪನ್ನ ಕೊಳ್ಳುವುದರ ಮೂಲಕ ಚೈತನ್ಯ ನೀಡಬೇಕಿದೆ.
ಬಿದಿರಿನ ಕಡ್ಡಿಗಳನ್ನು ನೂರಾರು ಕಿ.ಮಿ ನಡೆದು ಸಂಗ್ರಹಿಸಿ, ಇವರ ಬುಟ್ಟಿ ಮೊದಲಾದವುಗಳನ್ನು ತಯಾರಿಸುತ್ತಾರೆ. ಆದರೆ ಸದ್ಯದ ಪರಿಸ್ಥತಿಯಲ್ಲಿ ಇವರಿಷ್ಟು ಚಂದದ ಉತ್ಪನ್ನಗಳನ್ನು ಮಾಡುತ್ತಿದ್ದರೂ ಪರಿಸರ ಸ್ನೇಹಿ ದೇಸಿ ಕೌಶಲ್ಯದ ಇವರ ಬಿದಿರಿನ ಉತ್ಪನ್ನಗಳನ್ನು ಕೊಳ್ಳಲು ಆಸಕ್ತರು ಕೂಡಲೇ ಕೊಂಡರೆ ಇವರ ಬಾಳಿಗೆ ಚೂರಾದ್ರು ಬೆಳಕು ಕೊಟ್ಟ ಖುಷಿ ನಿಮ್ಮದಾಗುತ್ತದೆ.ದೇಶಿಯತೆಯನ್ನು ಉತ್ತೇಜಿಸುವುದೆಂದರೆ ಇದೇ ತಾನೇ
ಗೂರಿಗಳು ಕೋಳಿಗೂಡುಗಳಿಗಾಗಿ ಸುಧಾಕರ್ ಅವರ ಮೊಬೈಲ್ ಸಂಖ್ಯೆ : +917760485701
ಗಳಗೆ ಗೂರಿಗಳಿಗಾಗಿ ಜಗ್ಗು 8497077496
ಗೊರಬುಗಳು ಗೊಬ್ಬರ ಬಟ್ಟಿಗಳಿಗಾಗಿ ಸುಂದರ :9632813329
ಅಕ್ಕಿ ಗೇರುವ ತಡಪೆಗಳಿಗಾಗಿ ಬಾಬು : 8105307574 ಅವರನ್ನು ಸಂಪರ್ಕಿಸಿ.