ಬಾಲಯ್ಯ ನಟನೆಯ ಸಿನಿಮಾ ವಿಮರ್ಶೆ ಇಲ್ಲಿದೆ : ‘ಭಗವಂತ ಕೇಸರಿ’ ರಿಲೀಸ್​​

ಟಾಲಿವುಡ್​ ಪ್ರಸಿದ್ಧ ನಟ​ ನಂದಮೂರಿ ಬಾಲಕೃಷ್ಣ ಅವರ ಬಹುನಿರೀಕ್ಷಿತ ಚಿತ್ರ ‘ಭಗವಂತ ಕೇಸರಿ’ ಇಂದು ತೆರೆಗಪ್ಪಳಿಸಿದೆ. ಅನಿಲ್ ರವಿಪುಡಿ ಆಯಕ್ಷನ್​ ಕಟ್​ ಹೇಳಿರುವ ‘ಭಗವಂತ ಕೇಸರಿ’ ಗುರುವಾರ (ಅಕ್ಟೋಬರ್​ 19) ಬಿಡುಗಡೆ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಂದಮೂರಿ ಬಾಲಕೃಷ್ಣ ನಟನೆಯ ‘ಭಗವಂತ ಕೇಸರಿ’ ಇಂದು ತೆರೆಗಪ್ಪಳಿಸಿದೆ.

ಸಿನಿಮಾದಲ್ಲೊಂದು ಸಂದೇಶ: ನಂದಮೂರಿ ಬಾಲಕೃಷ್ಣ ಸೇರಿದಂತೆ ಚಿತ್ರದಲ್ಲಿನ ಪ್ರಮುಖ ನಟರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ತಲುಪಿದ್ದಾರೆ. ಬಾಲಯ್ಯ ಅವರ ಡೈಲಾಗ್ಸ್, ಆಯಕ್ಷನ್ ಸೀನ್ಸ್, ಎಮೋಷನಲ್ ದೃಶ್ಯಗಳು ಸಿನಿಪ್ರಿಯರ ಮನ ಗೆದ್ದಿವೆ. ಬಾಲಯ್ಯ ಅಭಿನಯದ ಸಿನಿಮಾ ಗೆಲ್ಲೋದು ಪಕ್ಕಾ ಅಂತಿದ್ದಾರೆ ಅಭಿಮಾನಿಗಳು. ಚಿಕ್ಕವಯಸ್ಸಿನಲ್ಲೇ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಕಲಿಸಿಕೊಡುವ ಸಂದೇಶವನ್ನು ಈ ಸಿನಿಮಾ ಹೊಂದಿದ್ದು, ಫ್ಯಾಮಿಲಿ ಆಡಿಯನ್ಸ್ ಸಿನಿಮಾಗೆ ಕನೆಕ್ಟ್ ಆಗಲಿದ್ದಾರೆ ಎಂಬುದು ಚಿತ್ರತಂಡದ ವಿಶ್ವಾಸ.

ಸಿನಿಮಾದ ಮೊದಲಾರ್ಧ ಸರಾಗವಾಗಿ ಸಾಗುತ್ತದೆ. ಸಾಹಸ ದೃಶ್ಯಗಳು ಮುಂದಿನ ಹಂತದಲ್ಲಿವೆ. ಸೆಕೆಂಡ್ ಆಫ್ ಎಮೋಷನ್ಸ್ ಜೊತೆ ಮಾಸ್ ಎಂಟರ್‌ಟೈನ್ಮೆಂಟ್​ನಿಂದ ಕೂಡಿದೆ. ಬಾಲಯ್ಯ ಹಾಗೂ ಶ್ರೀಲೀಲಾ ಅವರ ನಟನೆ ಚಿತ್ರದ ಹೈಲೈಟ್ ಅಂತಾರೆ ಅಭಿಮಾನಿಗಳು. ಪಾಸಿಟಿವ್ ರೆಸ್ಪಾನ್ಸ್ ಜೊತೆಗೆ ಸಿನಿಮಾ ಕೆಲ ನೆಗೆಟಿವ್​ ವಿಮರ್ಷೆಗಳನ್ನೂ ಸ್ವೀಕರಿಸಿದೆ. ಒಟ್ಟಾರೆ ಈ ಸಿನಿಮಾ ಬಾಲಯ್ಯ ಅಭಿಮಾನಿಗಳಿಗೆ ಹಬ್ಬ ಅಂತಾರೆ ಸಿನಿಮಾ ವೀಕ್ಷಿಸಿದವರು. ಪ್ರತೀ ಹುಡುಗಿಯೂ ತಮ್ಮ ತಂದೆ ತಾಯಿಯೊಂದಿಗೆ ಈ ಸಿನಿಮಾವನ್ನು ನೋಡಲೇಬೇಕು ಎಂದು ಹಲವರು ತಮ್ಮ ಸಲಹೆ ಕೊಟ್ಟಿದ್ದಾರೆ.

ಒಟಿಟಿಯಲ್ಲಿ ಯಾವಾಗ? ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ‘ಭಗವಂತ ಕೇಸರಿ’ ಸಿನಿಮಾ ಓಟಿಟಿ ದೈತ್ಯ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಡಿಸೆಂಬರ್ ಎರಡನೇ ವಾರದಿಂದ ಲಭ್ಯ ಆಗಲಿದೆ ಎಂಬ ಮಾಹಿತಿ ಇದೆ.ಮಿಶ್ರ ಪ್ರತಿಕ್ರಿಯೆ: ಚಿತ್ರಮಂದಿರಗಳಿಗೆ ಇಂದು ಲಗ್ಗೆ ಇಟ್ಟಿರುವ ‘ಭಗವಂತ ಕೇಸರಿ’ ಸಿನಿಮಾಗೆ ಅನಿಲ್ ರವಿಪುಡಿ ಆಯಕ್ಷನ್​ ಕಟ್​ ಹೇಳಿದ್ದು, ಬಣ್ಣದ ಲೋಕದ ಬ್ಯೂಟಿ ಕಾಜಲ್ ಅಗರ್ವಾಲ್, ಗ್ಲ್ಯಾಮರ್ ಕ್ವೀನ್ ಶ್ರೀಲೀಲಾ ಜೊತೆಗೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಸಹ ಇತರೆ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಿನಿಮಾವನ್ನು ಶೈನ್ ಸ್ಕ್ರೀನ್ಸ್ ಬ್ಯಾನರ್ ಅಡಿಯಲ್ಲಿ ಸಾಹು ಗರಪಾಟಿ ಮತ್ತು ಹರೀಶ್ ಪೆದ್ದಿ ನಿರ್ಮಾಣ ಮಾಡಿದ್ದಾರೆ. ಬಹುಬೇಡಿಕೆ ತಾರೆಯರು ಕಾಣಿಸಿಕೊಂಡಿರುವ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿ, ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಬಾಲಯ್ಯ – ಶ್ರೀಲೀಲಾ ನಟನೆಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಿದ್ದಾರೆ. ತೆರೆ ಮೇಲೆ ಅಪ್ಪ-ಮಗಳ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆಫ್ ಸ್ಕ್ರೀನ್​ನಲ್ಲಿಯೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಭಾವನಾತ್ಮಕ ಅಂಶಗಳಿವೆ. ಇದೊಂದು ಹೃದಯಸ್ಪರ್ಶಿ ಚಿತ್ರ ಎಂದು ಟ್ವಿಟರ್ ಬಳಕೆದಾರರು ಟ್ವೀಟ್ ಮಾಡಿದ್ದಾರೆ.