ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದಲ್ಲಿ ಬಾಲ ಭೋಜನ

ಉಡುಪಿ: ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ಪ್ರಥಮ ಪ್ರತಿಷ್ಠಾ ವರ್ಧಂತಿ ಅಂಗವಾಗಿ ಸ್ವಾಮಿ ಸನ್ನಿಧಿಯಲ್ಲಿ ಗಣೇಶ ಯಜ್ಞ ನಡೆಯಿತು. ಧಾರ್ಮಿಕ ಪೂಜಾ ವಿಧಾನಗಳನ್ನು ಪ್ರಧಾನ ಅರ್ಚಕ ರಮೇಶ ಸುಲಾಖೆ ನಡೆಸಿಕೊಟ್ಟರು.

ಮಹಾ ಪೂಜೆಯ ಬಳಿಕ ಫಲ ಪೂಜೆ ಹಾಗೂ ಬಾಲ ಭೋಜನಕ್ಕೆ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ಎಂ.ಡಿ ಟ್ರಸ್ಟಿ ಕೆ. ಕೆ ಅವರ್ಸೆಕರ್ ಮುಂಬೈ ಇವರು ಚಾಲನೆ ನೀಡಿ ಶುಭ ಹಾರೈಸಿದರು.

ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು.

ಭಗವಾನ್ ನಿತ್ಯಾನಂದ ವಿದ್ಯಾಕೇಂದ್ರದ ಅಧ್ಯಕ್ಷ ದಿವಾಕರ ಶೆಟ್ಟಿ, ನವೀನ ಶೆಟ್ಟಿ ತೋನ್ಸೆ ,ಜಯಕರ್ ಶೆಟ್ಟಿ ಇಂದ್ರಾಳಿ , ಸುರೇಂದ್ರ ಕಲ್ಯಾಣಪುರ ಭಾಸ್ಕರ್ ಶೆಟ್ಟಿ ಮುಂಬಯಿ, ಈಶ್ವರ ಚಿಟ್ಪಾಡಿ , ನಟರಾಜ್ ಹೆಗ್ಡೆ ಪಳ್ಳಿ , ಹಾಗೂ ಆಡಳಿತ ಮಂಡಳಿಯ ಸದಸ್ಯರು, ನಿತ್ಯಾನಂದ ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.