ಕಾರ್ಕಳ: ಕಾರ್ಕಳ ಭುವನೇಂದ್ರ ಕಾಲೇಜಿನ ನಿವೃತ್ತ ಪ್ರಾಂಶುಪಾಲ,ಯಕ್ಷಗಾನ ಕಲಾವಿದ, ಕಾರ್ಕಳ ಸಾಹಿತ್ಯ ಸಂಘದ ಕಾರ್ಯದರ್ಶಿ, ಸಂಘಟಕರಾಗಿ ಗುರುತಿಸಿಕೊಂಡಿದ್ದ ಬಿ.ಪದ್ಮನಾಭ ಗೌಡ ಅವರು ವಯೋಸಹಜ ಕಾಯಿಲೆಯಿಂದ ನಿಧನರಾದರು. 75 ವರ್ಷ ವಯಸ್ಸಾಗಿತ್ತು.
ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ, ಕಾಲೇಜಿಗೆ ತಾಲೂಕಿನಲ್ಲಿ ವಿಭಿನ್ನವಾದ ಶೈಕ್ಷಣಿಕ, ಸಾಂಸ್ಕೃತಿಕ ಮಹತ್ವವನ್ನು ತಂದುಕೊಟ್ಟ ಖ್ಯಾತಿ ಅವರಿಗಿತ್ತು. ಕಾಲೇಜಿನಲ್ಲಿ ವಿಶ್ವವಿದ್ಯಾನಿಲಯ ಮಟ್ಟದ ಅಪರೂಪದ ಯಕ್ಷಗಾನ ಸಂಗ್ರಹಾಲಯ ನಿರ್ಮಿಸಿದ ಹೆಗ್ಗಳಿಕೆ ಇವರದ್ದು. ಕಾಲೇಜಿನಿಂದ ನಿವೃತ್ತರಾದ ಬಳಿಕವೂ ವಿವಿಧ ಸಾಹಿತ್ಯ,ಕಲಾ ಸಂಘಟನೆಗಳಲ್ಲಿ ಇವರು ಸಕ್ರೀಯರಾಗಿದ್ದರು.ಸಾವಿರಾರು ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದರು.















