ಬೆಂಗಳೂರು: ವಿದ್ಯುತ್ ಚಾಲಿತ ಸ್ಕೂಟರ್ ತಯಾರಿಕಾ ಸಂಸ್ಥೆ ಅವನ್ ಮೋಟರ್ಸ್, ಲಿಥಿಯಂ ಬ್ಯಾಟರಿ ಚಾಲಿತ ಸ್ಕೂಟರ್ಗಳನ್ನು ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿದೆ. ಪುಣೆಯ ತಯಾರಿಕಾ ಘಟಕದಲ್ಲಿ ಈ ಸ್ಕೂಟರ್ ತಯಾರಿಸಲಾಗುತ್ತಿದೆ. ಸುಮಾರು 70 ಕೆ.ಜಿ ತೂಕದ ಈ ಸ್ಕೂಟರ್ನಲ್ಲಿ ಇಬ್ಬರು ಆರಾಮವಾಗಿ ಪ್ರಯಾಣಿಸಬಹುದು. 4 ಗಂಟೆ ಕಾಲ ಚಾರ್ಜ್ ಮಾಡಿದರೆ 60 ಕಿ. ಮೀ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಎಂದು ಸಂಸ್ಥೆಯ ವಹಿವಾಟು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಪಂಕಜ್ ತಿವಾರಿ ಅವರು ತಿಳಿಸಿದ್ದಾರೆ.
ಈ ಸ್ಕೂಟರ್ನ ಎಕ್ಸ್ಷೋರೂಂ ಬೆಲೆಯು ₹ 48 ಸಾವಿರ ಇದೆ.