ಮಂಗಳೂರು: ದಿನನಿತ್ಯ ನೂರಾರು ಆಟೋ ರಿಕ್ಷಾಗಳು ಓಡಾಡು ನಡೆಸುತ್ತಿರುವ ಕಡಲ ನಗರ ಮಂಗಳೂರಿನಲ್ಲಿ ಈಗ ಹೊಸ ರೀತಿಯ ರಿಕ್ಷಾವೊಂದು ಎಲ್ಲರ ಗಮನ ಸೆಳೆಯುತ್ತಿದೆ… ವಿಶೇಷ ಅಂದ್ರೆ ಈ ಆಟೋ ರಿಕ್ಷಾ ಹೊಗೆ ಬಿಡುವುದಿಲ್ಲ, ಶಬ್ದ ಮಾಲಿನ್ಯ ಮಾಡುವುದಿಲ್ಲ, ಯಸ್ ಯಾಕಂದ್ರೆ ಇದು ಎಲೆಕ್ಟ್ರಿಕ್ ರಿಕ್ಷಾ..
ವಿಶೇಷ ಬಣ್ಣದಿಂದಲೂ ಗಮನ ಸೆಳೆಯುತ್ತಿರುವ ಈ ಎಲೆಕ್ಟ್ರಿಕ್ ರಿಕ್ಷಾ ಪ್ರಯಾಣಿಕರ ಹಾಗೂ ನೋಡುಗರ ಕುತೂಹಲಕ್ಕೆ ಕಾರಣವಾಗಿದೆ. ಮಂಗಳೂರಿನ ಮೊದಲ ಎಲೆಕ್ಟ್ರಿಕ್ ರಿಕ್ಷಾವನ್ನು ಓಡಿಸುತ್ತಿರುವವರು ರಾರ್ಬಟ್ ಉಳ್ಳಾಲ ಎಂಬುವವರು. ಮಂಗಳೂರಿನಲ್ಲಿ ವಾಹನಗಳು ಅಧಿಕವಾಗಿ ವಾಯು ಮಾಲಿನ್ಯ ಶಬ್ದಮಾಲಿನ್ಯ ಉಂಟಾಗುತ್ತಿದೆ, ಹಾಗಾಗಿ ಪರಿಸರ ಮೇಲಿನ ಪ್ರೀತಿಯಿಂದ ಮಂಗಳೂರಿನಲ್ಲಿ ಹೊಸ ಪ್ರಯೋಗವಾಗಿ ಎಲೆಕ್ಟ್ರಿಕ್ ರಿಕ್ಷಾವನ್ನು ಖರೀದಿ ಮಾಡಿ ಓಡಿಸುತ್ತಿದ್ದೇನೆ ಎನ್ನುತ್ತಾರೆ ರಾಬರ್ಟ್ ಉಳ್ಳಾಲ.
ನಗರದಲ್ಲಿ ಎಲೆಕ್ಟ್ರಿಕ್ ರಿಕ್ಷಾ ಚಾರ್ಜಿಂಗ್ ಮಾಡಲು ವ್ಯವಸ್ಥೆ ಇಲ್ಲ ಹಾಗಾಗಿ ಮನೆಯಲ್ಲಿಯೇ ಚಾರ್ಜ್ ಮಾಡಿ ಸಂಚಾರ ಮಾಡಬೇಕಾದ ಅನಿವಾರ್ಯತೆ ಇದೆ, ಒಮ್ಮೆ ಚಾರ್ಜ್ ಮಾಡಿದ್ರೆ ಸುಮಾರು 130 ಕಿಲೋಮೀಟರ್ ಚಲಿಸಬಹುದು, ಆದ್ರೆ ನಾಲ್ಕು ತಾಸು ಚಾರ್ಜಿಂಗ್ ಮಾಡಬೇಕಾಗುತ್ತದೆ.
ಈಗಾಗಲೇ ವಿದ್ಯುತ್ ವಾಹನಗಳಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿರುದ್ದರಿಂದ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗಿದೆ.. ಉಡುಪಿಯಲ್ಲಿ ಮೂರು ಎಲೆಕ್ಟ್ರಿಕ್ ರಿಕ್ಷಾಗಳು ಇದ್ದು, ಮಂಗಳೂರಿನಲ್ಲಿ ಕೇವಲ ಒಂದು ಎಲೆಕ್ಟ್ರಿಕ್ ರಿಕ್ಷಾ ಮಾತ್ರ ಇದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಿದ್ರೆ, ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ವಾಹನ ಖರೀದಿಗೆ ಜನರು ಉತ್ಸುಕರಾಗುತ್ತಾರೆ