ಉಡುಪಿ: ಶೋಷಿತ ವರ್ಗದ ಆತ್ಮಬಲದ ಪ್ರತೀಕವಾಗಿ ಹುಟ್ಟಿ ಬಂದ ನಾರಾಯಣಗುರು ಇಡೀ ಮನುಕುಲದ ಬೆಳಕು ಎಂದು ದಲಿತ ಚಿಂತಕ ಜಯನ್ ಮಲ್ಪೆ ಹೇಳಿದರು.
ಬನ್ನಂಜೆ ನಾರಾಯಣಗುರು ಆಟೊ ಚಾಲಕ ಮತ್ತು ಮಾಲೀಕರ ಸಂಘ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಏರ್ಪಡಿಸಿದ ಶ್ರೀ ನಾರಾಯಣಗುರು ಅವರ 165ನೇ ಜನ್ಮದಿನಾಚರಣೆ ಕಾರ್ಯಕ್ರಮಯನ್ನು ಉದ್ಘಾಟಿಸಿ ಮಾತನಾಡಿದರು.
ಸಮಾನತೆ ಹಾಗೂ ಸಹೋದರತೆ ಬದುಕಿ ಆಧಾರವಾಗಬೇಕೆಂಬ ನಾರಾಯಣಗುರುಗಳ ಸಂದೇಶ ಎಲ್ಲ ಜಾತಿಗೂ ಪ್ರಸ್ತುತವಾಗಿದೆ. ಕೆಲ ಪಟ್ಟಭದ್ರ ಹಿತಾಶಕ್ತಿಗಳು ಶೋಷಿತರು, ಬಡವರ ಪರ ಹೋರಾಡಿದ ಎಲ್ಲಾ ದರ್ಶನಿಕರನ್ನು ಆಯಾಯ ಜಾತಿಗೆ ಕಟ್ಟುಹಾಕುವ ಮೂಲಕ ದಲಿತ ಮತ್ತು ಹಿಂದುಳಿದವರ ನಡುವೆ ಸಂಘರ್ಷ ಉಂಟುಮಾಡಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.
ನಾರಾಯಣ ಚಿಟ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ದಲಿತ ಮುಖಂಡ ಉಮೇಶ್ ಅಂಬಲಪಾಡಿ, ಜ್ವಾನ್ ಮಿಸ್ಕಿತ್, ಮೋಹನ್‌ದಾಸ್ ಚಿಟ್ಪಾಡಿ, ಸಂದೀಪ್, ಕೆ. ಸದಾಶಿವ, ಭಾಸ್ಕರ್ ಬನ್ನಂಜೆ, ಪ್ರಶಾಂತ್, ವಿಜಯ, ರಮೇಶ್, ಅಶ್ವಥ್ ಕುಮಾರ್, ಕೆ. ಪ್ರಕಾಶ್ ಉಪಸ್ಥಿತರಿದ್ದರು.
ಪವನ್ ಜಿ. ಪೂಜಾರಿ ಸ್ವಾಗತಿಸಿದರು. ಅಬ್ದುಲ್ ಫಾಝೀಲ್ ವಂದಿಸಿದರು.