ಜು. 23 ರಂದು ಅರಣ್ಯ ಸಂಪತ್ತಿನ ಎಲ್ಲಾ ಜಾತಿಯ ಗಿಡಗಳ ಉಚಿತ ವಿತರಣಾ ಮೇಳ ಸಸ್ಯೋತ್ಸವ- 2023

ಉಡುಪಿ: ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ ಸರಳೇಬೆಟ್ಟು, ಮಣಿಪಾಲ ಮತ್ತು ಚಾರಿಟೇಬಲ್ ಟ್ರಸ್ಟ್ ಉಡುಪಿ ಹಾಗೂ ಸ್ನೇಹ ಸಂಗಮ ಸರಳೇಬೆಟ್ಟು, ಮಣಿಪಾಲ ಇವರ ಸಹಭಾಗಿತ್ವದಲ್ಲಿ ಉತ್ತಮ ತಳಿಯ ಕಸಿ ಸಸ್ಯಗಳು, ಹೂವು – ಹಣ್ಣು ಹಂಪಲು, ಅರಣ್ಯ ಸಂಪತ್ತಿನ ಎಲ್ಲಾ ಜಾತಿಯ ಗಿಡಗಳ ಉಚಿತ ವಿತರಣಾ ಮೇಳ ಸಸ್ಯೋತ್ಸವ- 2023 ಕಾರ್ಯಕ್ರಮವನ್ನು ಜು. 23 ರಂದು ಬೆಳಿಗೆ 8.30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ರತ್ನ ಸಂಜೀವ ಕಲಾಮಂಡಲದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ರಘುಪತಿ ಭಟ್ […]

ರಾಷ್ಟ್ರಮಟ್ಟದ ಹೈಫೈವ್ ಕರಾಟೆ ಚಾಂಪಿಯನ್ ಶಿಪ್: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸಾಧನೆ

ಕುಂದಾಪುರ : ಜುಲೈ 15 ಮತ್ತು 16 ರಂದು ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಹೈಫೈವ್ – 2023 ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಪ್ರಣಯ್ ಕುಮಿಟೆ ಯಲ್ಲಿ ತೃತೀಯ ಮತ್ತು ಕಟಾ ದಲ್ಲಿ ದ್ವಿತೀಯ ಸ್ಥಾನ ಪಡೆದು ಸಾಧನೆ ಮೆರೆದಿದ್ದಾನೆ. ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

ರಾಜ್ಯದಲ್ಲೇ ಪ್ರಥಮ: ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆಗೆ “ಆರೋಗ್ಯ ಶನಿವಾರ”; ಉಡುಪಿ ಶಿಕ್ಷಣ ಇಲಾಖೆಯ ನಿನೂತನ ಕಾರ್ಯ

ಮಲೇರಿಯಾ, ಡೆಂಗ್ಯೂ, ಜ್ವರ, ನೆಗಡಿ ಕಾಯಿಲೆಗಳು ಯಾವಾಗ ಬರುತ್ತವೆ, ಈ ರೋಗಗಳು ಏಕೆ ಬರುತ್ತವೆ, ಯಾವುದರಿಂದ ಬರುತ್ತದೆ, ಅವುಗಳ ಲಕ್ಷಣಗಳೇನು, ಈ ರೋಗಗಳು ಬಾರದಂತೆ ಏನು ಮಾಡಬೇಕು, ನಮ್ಮ ಆರೋಗ್ಯವನ್ನು ಸುರಕ್ಷಿತವಾಗಿ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಈ ಎಲ್ಲಾ ವಿಷಯಗಳ ಬಗ್ಗೆ ಶಾಲಾ ಮಕ್ಕಳಿಗೆ ನಿರಂತರವಾಗಿ ತಿಳಿಸುವ ವಿನೂತನ ಮತ್ತು ಬಹುಶ: ರಾಜ್ಯದಲ್ಲೇ ಪ್ರಥಮವಾದ “ಆರೋಗ್ಯ ಶನಿವಾರ” ಎಂಬ ಕಾರ್ಯಕ್ರಮ ಉಡುಪಿ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಆರಂಭಿಸಲಾಗಿದ್ದು, ಇದರಿಂದ ಉತ್ತಮ ಫಲಿತಾಂಶ ಕಂಡು ಬರುತ್ತಿದೆ. ಉಡುಪಿ […]

ಜುಲೈ ತಿಂಗಳಲ್ಲಿ 262 ಕೆ.ಜಿ ನಿಷೇಧಿತ ಪ್ಲಾಸ್ಟಿಕ್‌ ವಶ: 54500 ರೂ ದಂಡ ವಸೂಲಿ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಮಣಿಪಾಲದಲ್ಲಿ ಗುರುವಾರ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ದಾಳಿ ನಡೆಸಿ 158 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡು, ರೂ. 24,000 ದಂಡ ವಿಧಿಸಲಾಯಿತು. ಜುಲೈ ಮಾಹೆಯಲ್ಲಿ ಒಟ್ಟು ಈವರೆಗೆ 262 ಕೆ.ಜಿ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡು ರೂ. 54,500 ನ್ನು ದಂಡ ವಿಧಿಸಲಾಗಿದೆ. ಉದ್ದಿಮೆಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‌ಗಳನ್ನು ಉಪಯೋಗಿಸದ ಉದ್ದಿಮೆಯನ್ನು ಹಸಿರು ಸಂಸ್ಥೆ ಎಂದು ಘೋಷಿಸಲಾಗಿದೆ. ಎಲ್ಲಾ ಉದ್ದಿಮೆದಾರರು ಏಕ ಬಳಕೆಯ ಪ್ಲಾಸ್ಟಿಕ್‌ಗಳನ್ನು ಉಪಯೋಗಿಸುವುದನ್ನು ತ್ಯಜಿಸಿ ಹಸಿರು ಸಂಸ್ಥೆ […]

ತೋಟಗಾರಿಕಾ/ಉದ್ಯಾನವನ ಘನತ್ಯಾಜ್ಯ ವಿಲೇವಾರಿಗೆ ನಗರಸಭೆಯಿಂದ ಶುಲ್ಕ ನಿಗದಿ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ತೋಟಗಾರಿಕಾ, ಉದ್ಯಾನವನ ಮತ್ತು ಕೈತೋಟಗಳ ಘನತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಸ್ಕರಿಸುವ ಬಗ್ಗೆ ಘನತ್ಯಾಜ್ಯ ವ್ಯವಸ್ಥಾಪನಾ ನಿಯಮಗಳು 2016ರನ್ವಯ 4(ಡಿ) ಮತ್ತು 15(ಡಿ)ಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ತೋಟಗಾರಿಕಾ, ಉದ್ಯಾನವನ ಮತ್ತು ಕೈತೋಟಗಳ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ವ್ಯವಸ್ಥೆಯನ್ನು ಮಾಡಲು ಕಟ್ಟಡದ ಮಾಲೀಕರೇ ತಮ್ಮ ಸ್ವಂತ ವಾಹನದಲ್ಲಿ ನಿಗದಿತ ಸ್ಥಳದಲ್ಲಿ ಹಾಕಿದ್ದಲ್ಲಿ ಪ್ರತಿ ಲೋಡಿಗೆ ರೂ. 1,000 (3.0 ಕ್ಯೂಬಿಕ್ ಸಾಮರ್ಥ್ಯದ ಟಿಪ್ಪರ್) ಹಾಗೂ ನಗರಸಭಾ ವತಿಯಿಂದ ಸಂಗ್ರಹಿಸಿ ವಿಲೇ ಮಾಡಲು […]