ಸಚಿವ ಯೋಗೀಶ್ವರ್, ಸಿ.ಟಿ. ರವಿ ದೆಹಲಿಗೆ ದಿಢೀರ್ ಭೇಟಿ

ನವದೆಹಲಿ: ಮುಖ್ಯಮಂತ್ರಿ‌ ಬದಲಾವಣೆ ವಿಚಾರ ತಣ್ಣಗಾಯ್ತು ಎನ್ನುವಾಗಲೇ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಹಾಗೂ‌ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ದೆಹಲಿಗೆ ದೌಡಾಯಿಸಿರುವುದು ಬಹಳಷ್ಟು ಕುತೂಹಲ ಸೃಷ್ಟಿಸಿದೆ. ಮುಖ್ಯಮಂತ್ರಿ ಬದಲಾವಣೆ‌ಗೆ ಸಂಬಂಧಿಸಿದಂತೆ ಪರೀಕ್ಷೆ ಬರೆದಿದ್ದೇವೆ, ಶೀಘ್ರವೇ ಫಲಿತಾಂಶ ಹೊರಬೀಳಲಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಯೋಗೇಶ್ವರ ದೆಹಲಿಗೆ ತೆರಳಿರುವುದು  ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಶುಕ್ರವಾರ ತಡರಾತ್ರಿ ದೆಹಲಿಗೆ ತೆರಳಿರುವ ಅವರು, ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡದೆ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದಾರೆ. ನಾಯಕತ್ವ […]

ಹಡಿಲು ಭೂಮಿ‌ ಕೃಷಿ ಅಭಿಯಾನ ರಾಜ್ಯಕ್ಕೆ ವಿಸ್ತರಣೆಯಾಗಲಿ: ಕೃಷಿ ಸಚಿವ ಬಿ.ಸಿ. ಪಾಟೀಲ್

ಉಡುಪಿ: ಉಡುಪಿ ಶಾಸಕ ಕೆ. ರಘುಪತಿ ಭಟ್ ನೇತೃತ್ವದಲ್ಲಿ ನಡೆಯುತ್ತಿರುವ ಹಡಿಲು ಭೂಮಿ ಕೃಷಿ ಅಭಿಯಾನವನ್ನು ಇಡೀ ರಾಜ್ಯಕ್ಕೆ ವಿಸ್ತರಿಸಿದಲ್ಲಿ, ರಾಜ್ಯದಲ್ಲಿ ಹಡಿಲು ಬಿದ್ದಿರುವ 15 ಲಕ್ಷ ಹೆಕ್ಟೇರ್‌ ಕೃಷಿ ಭೂಮಿಯನ್ನು ಹಸನಾಗಿಸಬಹುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು. ಕೇದಾರೋತ್ಥಾನ ಟ್ರಸ್ಟ್‌ನಿಂದ ಕಡೆಕಾರಿನಲ್ಲಿ ಶನಿವಾರ ನಡೆದ ಹಡಿಲು ಭೂಮಿ ಕೃಷಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು. , ಶಾಸಕ ರಘುಪತಿ‌ ಭಟ್ ಕೃಷಿ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದೆ. ಅವರ ನೇತೃತ್ವದ ಕೇದಾರೋತ್ಥಾನ ಟ್ರಸ್ಟ್‌ ವತಿಯಿಂದ ಜಿಲ್ಲೆಯಲ್ಲಿ ಹಡಿಲು […]

ಲಕ್ಷಾಂತರ ಮೌಲ್ಯದ ಗಂಧದ ಮರಗಳ ಕಳ್ಳತನಕ್ಕೆ ಯತ್ನ; ಇಬ್ಬರು ಖದೀಮರನ್ನು ಸೆರೆಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಹಿಂದೂ ಕಾರ್ಯಕರ್ತರು

ಬಂಟ್ವಾಳ: ಇಲ್ಲಿನ ಕಲ್ಲಡ್ಕ ಸಮೀಪದ ಅನಂತಾಡಿ ಗ್ರಾಮದ ಸುಳ್ಲಮಲೆ ಗುಡ್ಡೆ ಅರಣ್ಯದಲ್ಲಿ ಲಕ್ಷಾಂತರ ಮೌಲ್ಯದ ಗಂಧದ ಮರಗಳನ್ನು‌ ಕಳ್ಳತನ ಮಾಡಲು ಯತ್ನಿಸುತ್ತಿದ್ದ ಇಬ್ಬರು ಖದೀಮರನ್ನು ಹಿಂದು ಸಂಘಟನೆಯ ಯುವಕರು ಸೆರೆಹಿಡಿದು ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಬಂಧಿತರನ್ನು ಇಬ್ರಾಹಿಂ ಹಾಗೂ ಮೊಯಿದ್ದೀನ್ ಎಂದು‌ ಗುರುತಿಸಲಾಗಿದೆ. ಈ ಇಬ್ಬರು ಸುಳ್ಲಮಲೆ ಗುಡ್ಡೆ ಅರಣ್ಯದಲ್ಲಿ ಗಂಧದ ಮರಗಳನ್ನು‌ ಕಡಿಯುತ್ತಿದ್ದರು. ಇದರ ಸುಳಿವು ಪಡೆದ ಯುವಕರು ದಿಢೀರ್ ದಾಳಿ ನಡೆಸಿ ಇಬ್ಬರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಇಬ್ಬರು ಖದೀಮರನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಅಧಿಕಾರಿಗಳು […]

ಬಾಲಕಾರ್ಮಿಕತೆ ನಿಲ್ಲಿಸಿ, ಶಿಕ್ಷಣ ಒದಗಿಸಿ; ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಸಮಿತಿ ಆಗ್ರಹ

ಉಡುಪಿ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ಆಯೋಜಿಸಿರುವಂತಹ “ಬಾಲಕಾರ್ಮಿಕತೆ ನಿಲ್ಲಿಸಿ, ಶಿಕ್ಷಣ ಒದಗಿಸಿ”. ಅಭಿಯಾನದ ಭಾಗವಾಗಿ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಸಾರ್ವಜನಿಕ ಶಿಕ್ಷಣದ ಉಪನಿರ್ದೇಶಕರು, ಕಾರ್ಮಿಕ ಇನ್ಸ್‌ಪೆಕ್ಟರ್, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿಯನ್ನು ನೀಡಲಾಯಿತು. ಗ್ರಾಮದಲ್ಲಿರುವ ಪ್ರತಿಯೊಂದು ವಿದ್ಯಾರ್ಥಿ ಕೂಡ ಶಿಕ್ಷಣದಿಂದ ವಂಚಿತರಾಗಬಾರದು, ಬಾಲ ಕಾರ್ಮಿಕತೆಗೆ ಒಳಗಾದ ಮಕ್ಕಳಿದ್ದರೆ ಅವರಿಗೆ ಶಿಕ್ಷಣ ಒದಗಿಸುವ ಯೋಜನೆಯನ್ನು ಸರ್ಕಾರ ರೂಪಿಸಬೇಕು, ಕಾರ್ಯಾಂಗ ವ್ಯವಸ್ಥೆಯನ್ನು ಸರಿಯಾಗಿ ಸದುಪಯೋಗಪಡಿಸಿ ತಳ […]

ಉಡುಪಿ: ಕೋವಿಡ್ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಸಹಾಯ ಹಸ್ತ ಚಾಚಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ

ಉಡುಪಿ: ದೇಶ ಸೇವೆ ಹಾಗೂ ಸಮಾಜ ಸೇವೆ ಮಾಡುವ ಉದ್ದೇಶದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗವನ್ನು ಹುಟ್ಟುಹಾಕಿದ್ದು, ಸಂಸ್ಥೆಯ ಉಡುಪಿ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಅವರ ಜನ್ಮದಿನದ ಪ್ರಯುಕ್ತ ಒಂದು ವಾರ ಕಾಲ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಸಹಾಯ ಹಸ್ತವನ್ನು ಚಾಚುವ ಕೆಲಸವನ್ನು ಸಂಸ್ಥೆ ಮಾಡಿದೆ. ಅಲ್ಲದೆ, ಸಂಸ್ಥೆಯ ವತಿಯಿಂದ ಉಡುಪಿ ಜಿಲ್ಲೆಯಾದ್ಯಂತ ಅನ್ನದಾನ, ತರಕಾರಿ ಕಿಟ್ ವಿತರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮಗಳು ಮತ್ತು ಕೋವಿಡ್ 19 ಲಸಿಕೆ ಜಾಗೃತಿ ಮೂಡಿಸುವ […]