ಜೂ.14: ವಿಶ್ವಸಂಸ್ಥೆ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ

ಜೂನ್‌ 14ರಂದು ನಡೆಯಲಿರುವ ವಿಶ್ವಸಂಸ್ಥೆಯ ವರ್ಚುವಲ್ ವಿಧಾನದ ಮೂಲಕ ಉನ್ನತ ಮಟ್ಟದ ಸಂವಾದ ಕಾರ್ಯಕ್ರಮದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಣ್ಣಿನ ಗುಣಮಟ್ಟ ನಾಶ, ಮರುಭೂಮೀಕರಣ ಹಾಗೂ ಬರ ಪರಿಸ್ಥಿತಿ ಕುರಿತು ಮಾತನಾಡಲಿದ್ದಾರೆ. ವಿಶ್ವಸಂಸ್ಥೆಯ 75ನೇ ಸಾಮಾನ್ಯಸಭೆಯ ಅಧ್ಯಕ್ಷರಾದ ವೋಲ್ಕನ್‌ ಬೊಜ್ಕಿರ್ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ವಿಶ್ವಸಂಸ್ಥೆಯ ಉಪ ಪ್ರಧಾನ ಕಾರ್ಯದರ್ಶಿ ಅಮೀನಾ ಮೊಹಮ್ಮದ್‌, ಯುಎನ್‌ಸಿಸಿಡಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಇಬ್ರಾಹಿಂ ಥಾಯ್ವ್ ಸಹ ಈ ಕಾರ್ಯಕ್ರಮವನ್ನು ಉದ್ಧೇಶಿಸಿ ವಿಚಾರ ಮಂಡನೆ ಮಾಡುವರು.

ಉಡುಪಿ: ಗ್ರಾಮೀಣ ಭಾಗದಲ್ಲಿ ಸೋಂಕು ನಿಯಂತ್ರಣಕ್ಕೆ ನೆರವಾದ “ವೈದ್ಯರ ನಡೆ ಹಳ್ಳಿ ಕಡೆ“ ಕಾರ್ಯಕ್ರಮ

ಉಡುಪಿ: ರಾಜ್ಯಾದ್ಯಂತ ಉಲ್ಬಣಗೊಳ್ಳುತ್ತಿದ್ದ ಕೋವಿಡ್ ಸೋಂಕಿನ ಪ್ರಸರಣವನ್ನು ನಿಯಂತ್ರಿಸುವಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಮಾರ್ಗಸೂಚಿಗಳನ್ನು ಜಾರಿ ಮಾಡಿದ್ದ ರಾಜ್ಯ ಸರ್ಕಾರ, ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡುವುದನ್ನು ನಿಯಂತ್ರಿಸಲು ರೂಪಿಸಿದ, “ವೈದ್ಯರ ನಡೆ ಹಳ್ಳಿ ಕಡೆ” ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಜಾರಿಗೊಳಿಸುವ ಮೂಲಕ, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುವುದನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಿಸಲು ಸಹಕಾರಿಯಾಗಿದೆ.. ಜಿಲ್ಲೆಯಲ್ಲಿ ಅನುಷ್ಠಾನ ಮಾಡಿರುವ “ವೈದ್ಯರ ನಡೆ ಹಳ್ಳಿ ಕಡೆ” ಕಾರ್ಯಕ್ರಮಕ್ಕೆ ವೈದ್ಯರು, ಸ್ವಾಬ್ ಸಂಗ್ರಹಗಾರರು, ಗ್ರಾಮೀಣ ಕೋವಿಡ್ […]

ಉಡುಪಿಯಲ್ಲೂ ಶುರುವಾಯ್ತು “ಅಂಚೆಮಿತ್ರ”ಯೋಜನೆ: ಮನೆಯಲ್ಲೇ ಕುಳಿತು ಅಂಚೆ ಸೇವೆ ಪಡೀರಿ

ಉಡುಪಿ: ಭಾರತೀಯ ಅಂಚೆ ಇಲಾಖೆ ಕೋವಿಡ್-19 ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಮನೆಯೊಳಗೆ ಕುಳಿತು ಅಂಚೆ ಇಲಾಖೆಯ ವ್ಯವಹಾರಗಳನ್ನು ನಡೆಸುವಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ‘ಅಂಚೆ ಮಿತ್ರ’ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಅದರ ಮುಖಾಂತರ ಮನೆಯಲ್ಲೇ ಕುಳಿತು ವೈಧ್ಯಕೀಯ ಪಾರ್ಸೆಲ್ ಪಿಕ್‌ಅಪ್‌ ಇತ್ಯಾದಿ ತುರ್ತು ಅಗತ್ಯಗಳಿಗೆ ಮನವಿ ಕಳುಹಿಸಬಹುದು. ಮನೆಯಲ್ಲೇ ಕುಳಿತು ಭಾರತೀಯ ಅಂಚೆ ಇಲಾಖೆಯ ಅಂಚೆ ಜೀವ ವಿಮೆ, ಗ್ರಾಮೀಣ ಅಂಚೆ ಜೀವ ವಿಮೆಗಳ ಆನ್ ಲೈನ್ ಪಾವತಿಗೆ ಮನವಿ ಸಲ್ಲಿಸಬಹುದಾಗಿದೆ.ಮನಿಯಾರ್ಡರ್ ಪಡೆಯಲು ಪಿಂಚಣಿದಾರರು ತಮ್ಮ […]

ಉಡುಪಿ ಜಿಲ್ಲೆ: ಆದ್ಯತೆ ಮೇರೆಗೆ ಬಸ್ಸು ಚಾಲಕ/ ನಿರ್ವಾಹಕರಿಗೆ ಕೋವಿಡ್ ಲಸಿಕೆ

ಉಡುಪಿ: ಉಡುಪಿ ಜಿಲ್ಲೆಯ ತಾಲೂಕುಗಳಾದ ಉಡುಪಿ, ಕಾಪು, ಬ್ರಹ್ಮಾವರ, ಕುಂದಾಪುರ, ಬೈಂದೂರು, ಹೆಬ್ರಿ, ಕಾರ್ಕಳ, ಈ ಸ್ಥಳಗಳಲ್ಲಿ ವಾಸಿಸುತ್ತಿರುವ 18 ರಿಂದ 44 ವರ್ಷದೊಳಗಿನ ವಯೋಮಿತಿಯ ಬಸ್ಸುಚಾಲಕರು/ನಿರ್ವಾಹಕರು ಹಾಗೂ ಸಹಾಯಕರುಗಳಿಗೆ ಆದ್ಯತೆ ಮೇರೆಗೆ ಉಚಿತ ಕೋವಿಡ್-19 ಲಸಿಕೆಯನ್ನು ನೀಡಲಾಗುವುದು. ಈ ಹಿನ್ನಲೆಯಲ್ಲಿ ಎಲ್ಲಾ ಬಸ್ಸು ಮಾಲಕರುಗಳು ತಮ್ಮ ಸಂಘದ ಮೂಲಕ, ಮಾಲಕರುಗಳು ಪ್ರಪತ್ರ-3 ರಲ್ಲಿ ಅರ್ಜಿಗಳನ್ನು ಕ್ರೋಢಿಕರಿಸುವ ಮೂಲಕ, ಅಥವಾ ಭಾರೀ ಮಜಲು ವಾಹನ (ಬಸ್ಸು) ಚಾಲಕರುಗಳು/ ನಿರ್ವಾಹಕರುಗಳು ಹಾಗೂ ಸಹಾಯಕರುಗಳು ಖುದ್ದಾಗಿ ಭಾವಚಿತ್ರ ಹೊಂದಿರುವ ಆಧಾರ್ […]

ವಿಶ್ವ ತಂಬಾಕು ರಹಿತ ದಿನ: ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿ

ಉಡುಪಿ: ಪ್ರತಿ ವರ್ಷ “ಮೇ 31 ರಂದು ವಿಶ್ವ ತಂಬಾಕು ರಹಿತ ದಿನ” ಎಂದು ಆಚರಿಸಲಾಗುತ್ತಿದ್ದು, 2021 ರ ಧ್ಯೇಯ ವಾಕ್ಯ “ತ್ಯಜಿಸಲು ಬದ್ಧರಾಗಿ” Commit to Quit ಎಂಬುದಾಗಿದ್ದು , ಈ ವಿಷಯದ ಕುರಿತಂತೆ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಇದರ ವತಿಯಿಂದ Online ಮೂಲಕ ಪ್ರಬಂಧ ಸ್ಪರ್ಧೆ  ಏರ್ಪಡಿಸಿದ್ದು, ಆಸಕ್ತಿಯುಳ್ಳವರು ಈ ಕೆಳಗಿನ http://chat.whatsapp.com/IMY3qObmEFVSbN6098Gf  Whatsapp group link join […]