ಎ.8 ರಿಂದ ಸಗ್ರಿ ದೇವಳದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲೋತ್ಸವ

ಉಡುಪಿ: ಸಗ್ರಿ ಶ್ರೀವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎ.8 ರಿಂದ 11ರವರೆಗೆ ನವನಿರ್ಮಿತ ಶ್ರೀನಾಗದೇವರ ಗುಡಿ ಸಮರ್ಪಣೆ, ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲೋತ್ಸವವು ಪಾಡಿಗಾರು ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಸಗ್ರಿ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ರಹ್ಮ ಕಲಶೋತ್ಸವ, ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷರು ಆಗಿರುವ ಶಾಸಕ ಕೆ.ರಘುಪತಿ ಭಟ್, ಪ್ರತಿದಿನ ನಡೆಯುವ ಧರ್ಮಸಭೆಗಳಲ್ಲಿ ಅನೇಕ ಮಠಾಧೀಶರು, ಮಂತ್ರಿಗಳು, ಜನಪ್ರತಿನಿಧಿಗಳು, ಉದ್ಯಮಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸುವರು. ಆ ಬಳಿಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ […]

ಏಳನೇ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ ಮಹಿಳಾ ತಂಡ

ಐಸಿಸಿ ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಆಸ್ಟ್ರೇಲಿಯಾ ಅಭೂತಪೂರ್ವ ಜಯಸಾಧಿಸಿದ್ದು, ಈ ಮೂಲಕ ಏಳನೇ ಬಾರಿಗೆ ಮಹಿಳಾ ವಿಶ್ವಕಪ್‌ ಅನ್ನು ತನ್ನದಾಗಿಸಿಕೊಂಡಿದೆ. ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡವು 50 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 356 ರನ್ ಗಳಿಸಿತ್ತು. ಆಸ್ಟ್ರೇಲಿಯಾ ಪರ ಅಲಿಸಾ ಹೀಲಿ ಶತಕ (170) ಸಿಡಿಸಿ ಸಂಭ್ರಮಿಸಿದರು. ಈ ಬೃಹತ್‌ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್‌ ತಂಡವು 43.4 ಓವರ್​ನಲ್ಲಿ 285 ರನ್​ಗೆ ಎಲ್ಲಾ‌‌ ಆಲೌಟ್ ಆದವು. ಇಂಗ್ಲೆಂಡ್‌ ಅನ್ನು […]

ಮಲ್ಪೆ: ಸರಸರನೆ ತೆಂಗಿನ ಮರ ಏರಿ ಶೇಂದಿ ತೆಗೆದ ಪ್ರಣವಾನಂದ ಸ್ವಾಮೀಜಿ

ಮೂರ್ತೆದಾರರ ಕಷ್ಟ ಅರಿತುಕೊಳ್ಳುವ ನಿಟ್ಟಿನಲ್ಲಿ ಪ್ರಣವಾನಂದ ಸ್ವಾಮೀಜಿ‌ ಸ್ವತಃ ತಾವೇ ತೆಂಗಿನ ಮರ ಏರಿ ಶೇಂದಿ ತೆಗೆದಿರುವ ಬಗ್ಗೆ ವರದಿಯಾಗಿದೆ. ಭಾನುವಾರ ಉಡುಪಿಗೆ ಆಗಮಿಸಿದ ಸ್ವಾಮೀಜಿ, ಮಲ್ಪೆಯ ಮೂರ್ತೆದಾರರ ಮನೆಯೊಂದಕ್ಕೆ ಭೇಟಿ ನೀಡಿ ಮೂರ್ತೆದಾರಿಕೆ ಸಮಸ್ಯೆ ಕುರಿತು ಮಾತುಕತೆ ನಡೆಸಿ ಚರ್ಚಿಸಿದರು. ಬಳಿಕ ಸ್ವಾಮೀಜಿ ಮನೆಯ ಎದುರಿನ ತೆಂಗಿನ ಮರಕ್ಕೆ ಸರಸರನೇ ಏರಿದರು. ತೆಂಗಿನ ಮರದ ತುದಿಯಲ್ಲಿದ್ದ ಶೇಂದಿಯನ್ನು ತೆಗೆದು ಎಲ್ಲರನ್ನು ನಿಬ್ಬೆರಗುಗೊಳಿಸಿದರು.

ಬಿಲ್ಲವ ಯುವಕರು ಕೋಮು ಸಂಘರ್ಷದ ಕಡೆ ಗಮನಕೊಡದೆ ಶಿಕ್ಷಣ, ಉದ್ಯೋಗಕ್ಕೆ ಒತ್ತು ನೀಡಿ; ಉಡುಪಿಯಲ್ಲಿ ಪ್ರಣವಾನಂದ ಶ್ರೀ ಕರೆ

ಬಿಲ್ಲವ ಯುವಕರು ಕೋಮು ಸಂಘರ್ಷದ ಕಡೆ ಗಮನಹರಿಸದೆ, ಉದ್ಯೋಗ, ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳದ ರಾಷ್ಟ್ರೀಯ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಕರೆನೀಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆಗೆ ತೊಂದರೆ ಮಾಡಬಾರದು. ಈ ಭೂಮಿಯಲ್ಲಿ ನಮ್ಮ ಜೀವನ ಇರುವುದು ಸ್ವಲ್ಪ ದಿನ.‌ ಅದನ್ನು ಒಳ್ಳೆಯ ಕೆಲಸಕ್ಕೆ ಬಳಸಬೇಕು.‌ಯಾವುದೇ ಪಕ್ಷದಲ್ಲಿ ಇದ್ದರು ಅದರ ಸಿದ್ದಾಂತಕ್ಕೆ ಬದ್ಧರಾಗಿರಬೇಕೇ ಹೊರತು, ಇನ್ನೊಂದು ಜನಾಂಗಕ್ಕೆ ನೋವುಂಟು ಮಾಡುವ ಕೆಲಸ ಮಾಡಬಾರದು ಎಂದು ಸಲಹೆ ನೀಡಿದರು.

ಶಾಂತಿಯ ತೋಟವಾಗಿರುವ ಕರ್ನಾಟಕದಲ್ಲಿ ಧರ್ಮ ಧರ್ಮದ ನಡುವೆ ಸಂಘರ್ಷ ಬೇಡ; ಪ್ರಣವಾನಂದ ಸ್ವಾಮೀಜಿ ಕರೆ

ಉಡುಪಿ: ಸರ್ವಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕದಲ್ಲಿ ಶಾಂತಿ ನೆಲೆಸಬೇಕು. ಧರ್ಮ ಧರ್ಮದ ನಡುವೆ ಘರ್ಷಣೆಗೆ ಅವಕಾಶ ಮಾಡಿಕೊಡಬಾರದು ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶರಣಬಸವೇಶ್ವರ ಮಠಾಧಿಪತಿ ಡಾ. ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು. ಉಡುಪಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಸಂವಿಧಾನವೇ ನಮ್ಮ ದೇವರು. ನಮ್ಮ ಆಚಾರ ವಿಚಾರ ಅದಕ್ಕೆ ಧಕ್ಕೆಯಾಗಬಾರದು. ಅವರವರ ಧರ್ಮದ ಆಚಾರ ವಿಚಾರಗಳನ್ನು‌ ಅವರು ಆಚರಣೆ ಮಾಡಿಕೊಂಡು ಹೋಗಲಿ.‌ ಅದು ಬಿಟ್ಟು ಒಂದು ಧರ್ಮದ ಸಂಪ್ರದಾಯ, ಆಚಾರ-ವಿಚಾರಗಳನ್ನು […]