ರಾಜ್ಯದ ಸಾಂಸ್ಕೃತಿಕ ಬ್ರ್ಯಾಂಡ್ ಆದ ಕಾರ್ಕಳ‌ ಉತ್ಸವ: ವಿ ಸುನಿಲ್ ಕುಮಾರ್

ಕಾರ್ಕಳ: ಹತ್ತು ದಿನಗಳ ಕಾಲ ವೈಭವವಾಗಿ ಸಂಪನ್ನಗೊಂಡ ಹಲವು ಹೆಗ್ಗಳಿಕೆಯ “ಕಾರ್ಕಳ ಉತ್ಸವ” ಈಗ ರಾಜ್ಯದ ಸಾಂಸ್ಕೃತಿಕ  “ಬ್ರ್ಯಾಂಡ್” ಆಗಿ ಪರಿವರ್ತನೆಗೊಂಡಿದೆ ಎಂದು ಇಂಧನ, ಕನ್ನಡ, ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಮಾ.೧೦ ರಿಂದ ೨೦ರ ವರೆಗೆ ನಡೆದ ಕಾರ್ಕಳ ಉತ್ಸವ ಈಗ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಮಾತ್ರವಲ್ಲ‌ ಕಾರ್ಕಳವನ್ನು ರಾಜ್ಯ, ರಾಷ್ಟ್ರ ಹಾಗೂ ವಿದೇಶಗಳಲ್ಲಿಯೂ ಜನಪ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಉತ್ಸವವನ್ನು ಆಯೋಜಿಸಬೇಕೆಂಬ ಕಲ್ಪನೆ ಹುಟ್ಟಿದ್ದೆ ಒಂದು ವಿಶೇಷ ಸಂದರ್ಭದಲ್ಲಿ. […]

ಮೂಡುಪೆರಂಪಳ್ಳಿ ಕಂಬಿಗಾರ ಬಬ್ಬುಸ್ವಾಮಿ ಗುಡಿಯ ಶಿಲಾನ್ಯಾಸ ಕಾರ್ಯಕ್ರಮ

ಮಣಿಪಾಲ: ಮೂಡುಪೆರಂಪಳ್ಳಿ ಶ್ರೀ ಕಂಬಿಗಾರ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಗುಡಿಯ ಶೀಲಾನ್ಯಾಸ ಕಾರ್ಯಕ್ರಮವು ಸನ್ನಿಧಾನದಲ್ಲಿ ನಡೆಯಿತು. ಸಮಾಜಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯ ಮತ್ತು ಆಡಳಿತ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಯ ಎಲ್ಲಾ ಜಾತ್ರಾ ಮಹೋತ್ಸವಗಳಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು: ವಿ.ಹಿಂ.ಪ. ಆಗ್ರಹ

ಉಡುಪಿ: ಜಿಲ್ಲೆಯ ಎಲ್ಲಾ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ನಡೆಯುವ ಜಾತ್ರಾ ಮಹೋತ್ಸವಗಳಲ್ಲಿ ವ್ಯಾಪಾರಕ್ಕೆ ಅನ್ಯಧರ್ಮೀಯರಿಗೆ ಅವಕಾಶ ನೀಡಬಾರದು ಎಂದು ವಿಶ್ವ ಹಿಂದು ಪರಿಷದ್ ಆಗ್ರಹಿಸಿದೆ. ಈ ದೇಶದ ಸಂವಿಧಾನಕ್ಕೆ ಬೆಲೆ ಕೊಡದ, ಈ ನೆಲದ ಕಾನೂನನ್ನು ಗೌರವಿಸದ ಮತ್ತು ಹಿಂದೂ ಸಮಾಜದ ಧಾರ್ಮಿಕ ನಂಬಿಕೆಗಳಿಗೆ ಪದೇ ಪದೇ ಅವಹೇಳನ ಮಾಡುವ ಮತಾಂಧರಿಗೆ ಉಡುಪಿ ಜಿಲ್ಲೆಯ ಯಾವುದೇ ದೇವಸ್ಥಾನ ಮತ್ತು ದೈವಸ್ಥಾನಗಳ ಜಾತ್ರೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ವಿಎಚ್ ಪಿ ಒತ್ತಾಯಿಸಿದೆ. ಕಾಪು, ಪಡುಬಿದ್ರೆ, ಪೆರ್ಡೂರು, ಪೆರ್ಣಂಕಿಲ ದೇವಸ್ಥಾನಗಳಲ್ಲಿ […]

ಗ್ರಂಥಾಲಯ ಮೇಲ್ವಿಚಾರಕರ ನೇಮಕ: ಅರ್ಜಿ ಆಹ್ವಾನ

ಉಡುಪಿ: ಬೈಂದೂರು ತಾಲೂಕು ಶಿರೂರು ಗ್ರಾಮ ಪಂಚಾಯತಿ ಗ್ರಂಥಾಲಯದಲ್ಲಿ ಖಾಲಿ ಇರುವ ಮೇಲ್ವಿಚಾರಕರ ಹುದ್ದೆಗೆ ಗೌರವ ಸಂಭಾವನೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಲು ಸಾಮಾನ್ಯ ಮೀಸಲಾತಿಯಡಿ ಅರ್ಹ ಗ್ರಾಮೀಣ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರುವ ಹಾಗೂ ಗ್ರಾಮ ಪಂಚಾಯತಿ ವ್ಯಾಪಿಯಲ್ಲಿ ವಾಸವಿರುವ ಅಭ್ಯರ್ಥಿಗಳು ಏಪ್ರಿಲ್ 20 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಶಿರೂರು ಗ್ರಾಮ ಪಂಚಾಯತ್ ದೂರವಾಣಿ ಸಂಖ್ಯೆ: 08254 – 253053 ಅಥವಾ ಜಿಲ್ಲಾ ಕೇಂದ್ರ ಗ್ರಂಥಾಲಯ, […]

ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಪಾವಿತ್ರ್ಯತೆ ಕಾಪಾಡಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ: ಮಾರ್ಚ್ 28 ರಿಂದ ಏಪ್ರಿಲ್ 11ರ ವರೆಗೆ ಎಸ್.ಸ್.ಎಲ್.ಸಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೊಠಡಿಗಳಲ್ಲಿ ಪರೀಕ್ಷಾ ಪಾವಿತ್ರ್ಯತೆಯನ್ನು ಕಾಪಾಡುವುದರೊಂದಿಗೆ ನಡೆಸಬೇಕೆಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ 266 ಶಾಲೆಗಳ 7229 ಬಾಲಕರು 6793 ಬಾಲಕಿಯರು ಸೇರಿದಂತೆ ಒಟ್ಟು 14022 ಜನ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬರೆಯಲಿದ್ದು, ಅವರಲ್ಲಿ 13672 ಹೊಸದಾಗಿ, 298 ಜನ ಖಾಸಗಿ ವಿದ್ಯಾರ್ಥಿಗಳು […]