ಪ್ರಧಾನಿಯವರ ಹರ್ ಘರ್ ತಿರಂಗಾ ಅಭಿಯಾನದಿಂದ ಬದಲಾಯ್ತು ವ್ಯಾಪಾರಿಗಳ ಬದುಕು: ಇತಿಹಾಸದಲ್ಲೇ ದಾಖಲೆಯ ರಾಷ್ಟ್ರಧ್ವಜಗಳ ಮಾರಾಟ!

ನವದೆಹಲಿ: ದೇಶದ 75 ನೇ ಸ್ವಾಂತಂತ್ರ್ಯೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಪ್ರಧಾನಿ ಮೋದಿ ಕರೆ ನೀಡಿದ್ದು, ರಾಷ್ಟ್ರಧ್ವಜ ಮಾರಾಟ ಮಾಡುವ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಬದುಕು ಹಸನಾಗಿದೆ. ಇತಿಹಾಸದಲ್ಲೇ ಅತಿ ಹೆಚ್ಚು ರಾಷ್ಟ್ರಧ್ವಜ ಮಾರಾಟವಾಗುತ್ತಿದ್ದು ವ್ಯಾಪಾರಿಗಳ ಮೊಗದಲ್ಲಿ ಸಂತಸ ಮನೆ ಮಾಡಿದೆ. ಹಿಂದೆಲ್ಲಾ ಜನರು ಒಂದೆರಡು ಧ್ವಜಗಳನು ಖರೀದಿಸುತ್ತಿದ್ದರು, ಆದರೆ ಹರ್ ಘರ್ ಅಭಿಯಾನದಿಂದಾಗಿ ಜನರು ಬೃಹತ್ ಆರ್ಡರ್ ಗಳನ್ನು ನೀಡುತ್ತಿದ್ದು, ಲಕ್ಷಗಟ್ಟಲೆ ಧ್ವಜಗಳು ಈಗಾಗಲೇ ಬಿಕರಿಯಾಗಿದ್ದು ಬೇಡಿಕೆ ಇನ್ನೂ ಹೆಚ್ಚುತ್ತಲೇ ಇದೆ. […]

ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ವಿಮೆ ವಿತರಣೆ

ಉಡುಪಿ: ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ವತಿಯಿಂದ ವಿವೇಕಾನಂದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಜರಕಾಡು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ವಿಮೆ ವಿತರಣಾ ಕಾರ್ಯಕ್ರಮವು ಜುಲೈ 06 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗುಂಡಿಬೈಲು ನಗರಸಭಾ ಸದಸ್ಯ ಪ್ರಭಾಕರ ಪೂಜಾರಿ, ಪ್ರೀತಿ ತಂಗಪ್ಪನ್ ( ಹ್ಯೂಮನ್ ರೈಟ್ಸ್ ಫೆಡರೇಷನ್ ಆಫ್ ಇಂಡಿಯಾ), ಪತ್ರಕರ್ತ ಜನಾರ್ಧನ ಕೊಡವೂರು, ಉದಯ್ ನಾಯ್ಕ್ ( ಹಿರಿಯ ಮಾರುಕಟ್ಟೆ ಪ್ರಬಂಧಕರು ಸ್ಟಾರ್ ಹೆಲ್ತ್), ಸಂಚಾಲಕ ಅಜಿತ್ ಕುಮಾರ್ […]

ಶ್ರೀಲಕ್ಷ್ಮೀವೆಂಕಟೇಶ ದೇವಳದಲ್ಲಿ ರಂಗಪೂಜೆಯ ಸೊಬಗು: ಪುಷ್ಪಾಲಂಕಾರದಲ್ಲೂ ಮೂಡಿಬಂತು ತ್ರಿವರ್ಣ ಧ್ವಜ!

ಉಡುಪಿ: ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ 122ನೇ ಭಜನಾ ಸಪ್ತಾಹ ಅಂಗವಾಗಿ ಭಾನುವಾರದಂದು ರಂಗಪೂಜೆಯ ಪ್ರಯುಕ್ತ ವಿಶೇಷ ಹೂವಿನ ಅಲಂಕಾರ ನಡೆಯಿತು. ಹೂವಿನ ಅಲಂಕಾರದಲ್ಲಿಯೂ ಭಾರತದ ತ್ರಿವರ್ಣ ಧ್ವಜವನ್ನು ಎತ್ತಿ ತೋರಿಸಿದ್ದು ವಿಶೇಷವಾಗಿತ್ತು.

ಒಂದು ಜಿಲ್ಲೆ ಒಂದು ಉತ್ಪನ್ನ ಉಡುಗೊರೆ ಕ್ಯಾಟಲಾಗ್‌ನ ಡಿಜಿಟಲ್ ಆವೃತ್ತಿ ಬಿಡುಗಡೆ

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವ ಪಿಯೂಷ್ ಗೋಯಲ್ ಅವರು ‘ಒಂದು ಜಿಲ್ಲೆ ಒಂದು ಉತ್ಪನ್ನ’ ಉಡುಗೊರೆ ಕ್ಯಾಟಲಾಗ್‌ನ ಡಿಜಿಟಲ್ ಆವೃತ್ತಿಯನ್ನು ಅನಾವರಣಗೊಳಿಸಿದರು. 5 ಆಗಸ್ಟ್ 2022 ರಂದು ವಾಣಿಜ್ಯ ಭವನದಲ್ಲಿ ರಫ್ತು ಉತ್ತೇಜನಾ ಮಂಡಳಿಗಳು ಮತ್ತು ಉದ್ಯಮ ಸಂಘಗಳೊಂದಿಗಿನ ಸಭೆಯಲ್ಲಿ ಡಿಜಿಟಲ್ ಆವೃತ್ತಿ ಬಿಡುಗಡೆ ಗೊಳಿಸಲಾಯಿತು. ಉಡುಗೊರೆ ಕ್ಯಾಟಲಾಗ್ ಸುಗಂಧ ದ್ರವ್ಯಗಳು ಮತ್ತು ತೈಲಗಳು, ಭಾರತೀಯ ಸ್ಪಿರಿಟ್ ಗಳು, ಗೃಹಾಲಂಕಾರ ಉತ್ಪನ್ನಗಳು, ಬಟ್ಟೆಗಳು ಮತ್ತು […]

ಬ್ರಹ್ಮಾವರ: ಸೀನಿಯರ್ ಚೇಂಬರ್ ಇಂಟರ್‌ನ್ಯಾಶನಲ್ ವತಿಯಿಂದ ಹಾಸ್ಟೆಲ್ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ

ಬ್ರಹ್ಮಾವರ: ಭಾನುವಾರದಂದು ಸೀನಿಯರ್ ಚೇಂಬರ್ ಇಂಟರ್‌ನ್ಯಾಶನಲ್ ಹಾಗೂ ಉಡುಪಿ ಟೆಂಪಲ್ ಸಿಟಿ ಲೀಜನ್ ವತಿಯಿಂದ ಬ್ರಹ್ಮಾವರದ ಗಾಂಧಿ ಮೈದಾನದ ಬಳಿ ಮೆಟ್ರಿಕ್ ಪೂರ್ವ ಮಕ್ಕಳಿಗಾಗಿ ಇರುವ ದೇವರಾಜ್ ಅರಸು ಹಿಂದುಳಿದ ವಿಭಾಗದ ಬಾಲಕಿಯರ ಹಾಸ್ಟೆಲ್ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಚೇಂಬರ್ ನ ಎಲ್ಲಾ ಹಿರಿಯ ಸದಸ್ಯರು ಉಪಸ್ಥಿತರಿದ್ದರು.