ಕುಂದಾಪುರ: ಕುಲಾಲ ಸಮಾಜ ಸಂಘದ ಕಟ್ಟಡ ನವೀಕರಣಕ್ಕೆ ಧನಸಹಾಯ

ಕುಂದಾಪುರ: ಕುಲಾಲ ಕ್ರೀಡೋತ್ಸವ- 2022ರಲ್ಲಿ ಉಳಿತಾಯವಾದ ಮೊತ್ತ 80400 ರೂ ಗಳನ್ನು ಕುಂದಾಪುರದ ಕುಲಾಲ ಸಮಾಜ ಸುಧಾರಕರ ಸಂಘದ ಕಟ್ಟಡ ನವೀಕರಣಕ್ಕೆ ಧನ ಸಹಾಯ ರೂಪದಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ರಾಘವೇಂದ್ರ ಕುಲಾಲ ಹೆಮ್ಮಾಡಿ, ವಿಠ್ಠಲ ಕುಲಾಲ ಹೆಸ್ಕುತ್ತುರು, ಹರೀಶ ಕುಲಾಲ ಕೆದೂರು, ಮಂಜುನಾಥ ಕುಲಾಲ ನೆಲ್ಲಿಕಟ್ಟೆ, ಹರೀಶ ಕುಲಾಲ ಹೊಂಬಾಡಿ, ಶಂಕರ ಕುಲಾಲ ಮೊಳಹಳ್ಳಿ ಉಪಸ್ಥಿತರಿದ್ದರು.

ಫೆ.21 ರಂದು ವಿದ್ಯುತ್ ವ್ಯತ್ಯಯ

ಉಡುಪಿ: 33/11 ಕೆ.ವಿ ಶಿರ್ವ ಎಂ.ಯು.ಎಸ್.ಎಸ್ ನಲ್ಲಿ ರೀ ಕಂಡಕ್ಟರಿಂಗ್ ಮತ್ತು ಟವರ್ ನಿರ್ಮಾಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸದರಿ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರ್ ಮಾರ್ಗದಲ್ಲಿ, ಉಳಿಯಾರಗೋಳಿ, ಬಂಟಕಲ್ಲು, ಮೂಡಬೆಟ್ಟು, ಪಾಂಗಳ, ಶಿರ್ವ, ಶಂಕರಪುರ, ಕುಂಜಾರುಗಿರಿ, ಸಾಲ್ಮರ, ಪಾಜೈ, ಕುರ್ಕಾಲು, ಇನ್ನಂಜೆ, ಪಡುಬೆಳ್ಳೆ, ಮಟ್ಟಾರು, ಪದವು, ಪಾಂಬೂರು, ಪಿಲಾರುಖಾನ, ಪೆರ್ನಾಲು, ಕುತ್ಯಾರು, ಪುಂಚಲಕಾಡು, ಕಳತ್ತೂರು, ಚಂದ್ರನಗರ, ಮಲ್ಲಾರು, ಪೊಲಿಪು, ಕೊಪ್ಪಲಂಗಡಿ, ಪಣಿಯೂರು, ಕಾಪು ಬಡಾ, ಮೂಳೂರು, ಬೆಳಪು, ಅಬ್ಬೇಟ್ಟು, ಪಾದೂರು ಗ್ರಾಮ ಹಾಗೂ ಸುತ್ತಮುತ್ತಲಿನ […]

ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪನೆ: ರಾಜ್ಯ ಸರ್ಕಾರದ ಅಧಿಕೃತ ಆದೇಶ

ಬೆಂಗಳೂರು: ಬಿಲ್ಲವ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಬ್ರಹ್ಮರ್ಷಿ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಇಂದು ಅಧಿಕೃತ ಆದೇಶ ಹೊರಡಿಸಿದೆ. ರಾಜ್ಯದ ಹಿಂದುಳಿದ ಜಾತಿಗಳ ಪೈಕಿ ಒಂದಾಗಿರುವ ಬಿಲ್ಲವ ಸಮುದಾಯದ ಸರ್ವತೋಮುಖ ಅಭಿವೃದ್ಧಿ ಹಾಗೂ ಬ್ರಹ್ಮರ್ಷಿ ನಾರಾಯಣ ಗುರುಗಳ ತತ್ವಾದರ್ಶಗಳ ಪ್ರಸಾರಕ್ಕೆ ಪ್ರತ್ಯೇ ಕ ನಿಗಮ ಸ್ಥಾಪನೆ ಮಾಡಬೇಕೆಂಬುದು ಸಮುದಾಯದ ಬಹುಕಾಲದ ಬೇಡಿಕೆಯಾಗಿತ್ತು. ಸಮುದಾಯದ ಈ ಬೇಡಿಕೆ ಈಡೇರಿಕೆಗಾಗಿ ಕೆಲ ದಿನಗಳ ಹಿಂದಷ್ಟೇ ಸಚಿವ ವಿ ಸುನಿಲ್ ಕುಮಾರ್ , ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ […]

ಉಡುಪಿಗೆ ಭಾರತೀಯ ಜನತಾ ಪಕ್ಷದಲ್ಲಿ ವಿಶೇಷ ಸ್ಥಾನವಿದೆ: ಜೆ.ಪಿ.ನಡ್ಡಾ

ಉಡುಪಿ: ಜಿಲ್ಲೆಗೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೋಮವಾರದಂದು ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ಬೂತ್ ಅಧ್ಯಕ್ಷರು ಮತ್ತು ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಪವಿತ್ರ ಕೃಷ್ಣಮಠಕ್ಕೆ ಭೇಟಿ ನೀಡಿ, ಶ್ರೀಕೃಷ್ಣನ ಆಶೀರ್ವಾದ ಪಡೆದು ಮಾತು ಆರಂಭಿಸುತ್ತಿದ್ದೇನೆ. ಉಡುಪಿಗೆ ಭಾರತೀಯ ಜನತಾ ಪಕ್ಷದಲ್ಲಿ ವಿಶೇಷ ಸ್ಥಾನವಿದೆ. 1968ರಲ್ಲಿ ಬಾರಿಗೆ ಉಡುಪಿ ನಗರಸಭೆ ಭಾರತೀಯ ಜನ ಸಂಘದ ತೆಕ್ಕೆಗೆ ಬಂದಿದ್ದು, ಈ ಮೂಲಕ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕಮಲ ಅರಳಲು ಸಾಧ್ಯವಾಗಿತ್ತು.1968ರಲ್ಲಿ ವಿಎಸ್ ಆಚಾರ್ಯ […]

ಕುತ್ಯಾರು ಕರ್ಮಾರು ಜೆಡ್ಡು ಹೊಸಮನೆ ಪುಣ್ಯ ಕ್ಷೇತ್ರದ ವಾರ್ಷಿಕ ನೇಮೋತ್ಸವ ಸಂಪನ್ನ

ಕುತ್ಯಾರು: ಕರ್ಮಾರು ಜೆಡ್ಡು ಹೊಸಮನೆ ಪುಣ್ಯ ಕ್ಷೇತ್ರದ ಕಾರಣಿಕದ ದೈವ ಮಂತ್ರದೇವತೆ ಶ್ರೀ ವರ್ತೇಶ್ವರಿ ಶ್ರೀ ದೇವಿ ಕಲ್ಕುಡ ವಾರ್ಷಿಕ ನೇಮೋತ್ಸವವು ಫೆ.18 ರಂದು ಕ್ಷೇತ್ರದ ಉಸ್ತುವಾರಿ ಪ್ರಧಾನ ಅರ್ಚಕ ಭೋಜ ಪಾತ್ರಿ ಕುತ್ಯಾರು ಇವರ ಧಾರ್ಮಿಕ ಸಲಹೆಯೊಂದಿಗೆ ನಡೆಯಿತು. ಬೆಳಿಗ್ಗೆ ತುಲಾಭಾರ ಸೇವೆ ರಾತ್ರಿ ಶ್ರೀ ದೈವ ದೇವರುಗಳ ನೇಮೋತ್ಸವ ನಡೆದು ಮರುದಿನ ಬೆಳಿಗ್ಗೆ ಜಟ್ಟಿಗ ಗುಳಿಗ ಕೊರಗಜ್ಜನ ನೇಮೋತ್ಸವ ನಡೆದು ಅಗೆಲ್ ತಂಬಿಲ ಸೇವೆ ಸಂಪನ್ನಗೊಂಡಿತು. ಕ್ಷೇತ್ರದ ಅರ್ಚಕ ಚಂದ್ರಶೇಖರ ವಾಸುದೇವ ಪಾತ್ರಿ, ಶಿವರಾಜ […]