ಸೌದಿ ಅರೇಬಿಯಾ: ಅಸಿರ್‌ನಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಕನಿಷ್ಠ 20 ಉಮ್ರಾ ಯಾತ್ರಿಕರು ಸಾವನ್ನಪ್ಪಿದ್ದಾರೆ ಮತ್ತು 29 ಮಂದಿ ಗಾಯಗೊಂಡಿದ್ದಾರೆ. ಬ್ರೇಕ್ ವೈಫಲ್ಯದ ಪರಿಣಾಮವಾಗಿ ಸೇತುವೆಯೊಂದಕ್ಕೆ ಬಸ್ ಡಿಕ್ಕಿ ಹೊಡೆದು, ಮಗುಚುಬಿದ್ದು ಬಸ್ ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
#BusAccidentसऊदी अरब में पुल से टकराकर हुई बस दुर्घटना, 20 उमरा तीर्थयात्रियों की मौत और 29 अन्य घायल हो गए हैं
#BusAccident #SaudiArabia #hajj2023 #Umrah pic.twitter.com/x0RsXgvlka— jk 365 (@365_jk) March 28, 2023
ಬ್ರೇಕ್ ವೈಫಲ್ಯದ ಪರಿಣಾಮವಾಗಿ ಸಂಭವಿಸಿದ ಅಪಘಾತವು ಅಸಿರ್ ಪ್ರಾಂತ್ಯ ಮತ್ತು ಅಭಾ ನಗರವನ್ನು ಸಂಪರ್ಕಿಸುವ ರಸ್ತೆಯಲ್ಲಿ ಸಂಭವಿಸಿದೆ. ಸಂತ್ರಸ್ತರು ಉಮ್ರಾ ನಿರ್ವಹಿಸಲು ಮೆಕ್ಕಾಗೆ ತೆರಳುತ್ತಿದ್ದರು. ಸೌದಿ ನಾಗರಿಕ ರಕ್ಷಣಾ ಮತ್ತು ರೆಡ್ ಕ್ರೆಸೆಂಟ್ ಪ್ರಾಧಿಕಾರದ ತಂಡಗಳು ಅಪಘಾತದ ಸ್ಥಳಕ್ಕೆ ಧಾವಿಸಿ ಪ್ರದೇಶವನ್ನು ಸುತ್ತುವರೆದಿವೆ. ಮೃತರು ಮತ್ತು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.