ಏ.13 ರಿಂದ 19 ರವರೆಗೆ ಶ್ರೀ ಕ್ಷೇತ್ರ ನೀಲಾವರ ನಾಗಸನ್ನಿಧಿಯಲ್ಲಿ ಸಮಗ್ರ ಜೀರ್ಣೋದ್ಧಾರ ಪುನಃಪ್ರತಿಷ್ಠಾ ಮಹೋತ್ಸವ

ನೀಲಾವರ: ಮಹತೋಭಾರ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ನಾಗಸನ್ನಿಧಿಯಲ್ಲಿ ಏ.13 ರಿಂದ 19 ರವರೆಗೆ ಸಮಗ್ರ ಜೀರ್ಣೋದ್ಧಾರ ಪುನಃ ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ಕಾರ್ಯಗಳು ನಡೆಯಲಿದೆ

ಏ.14 ರಂದು ನೀಲಾವರ ಕ್ರಾಸ್ ನಿಂದ ಮಧ್ಯಾಹ್ನ 3ಗಂಟೆಗೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.

ಏ.15 ರಂದು ಬೆಳಿಗ್ಗೆ 9 ಗಂಟೆಗೆ ನಾಗದೇವರ ಪ್ರತಿಷ್ಠೆ

ಏ.18 ರಂದು ಅಷ್ಟಪವಿತ್ರ ನಾಗಮಂಡಲೋತ್ಸವ, ಮಧ್ಯಾಹ್ನ ಅನ್ನ ಸಂತರ್ಪಣೆ

ಏ. 27 ರಂದು ಶ್ರೀಮನ್ಮಹಾರಥೋತ್ಸವ

ಮಹೋತ್ಸವದ ನಿಮಿತ್ತ ಏ.14 ರಿಂದ 18 ರವರೆಗೆ ಭಜನೆ, ಯಕ್ಷಗಾನ, ಭಕ್ತಿ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.