ಉಡುಪಿ: ಸರ್ ಎಂ.ವಿಶ್ವೇಶ್ವರಯ್ಯನವರು ಒಂದು ಶಕ್ತಿಯಾಗಿ ದೇಶ ಕಟ್ಟುವ ಕೆಲಸ ಮಾಡಿದ್ದಾರೆ. ಪ್ರಸ್ತುತ ಯುವ ಎಂಜಿನಿಯರ್ಗಳು ವಿಶ್ವೇಶ್ವರಯ್ಯಅವರನ್ನು ಆದರ್ಶವಾಗಿಟ್ಟುಕೊಂಡು ಪ್ರಾಮಾಣಿಕತೆ, ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಮಾಂಡವಿ ಬಿಲ್ಡರ್ಸ್ ನ ವ್ಯವಸ್ಥಾಪಕ ನಿರ್ದೇಶಕ ಡಾ ಜೆರ್ರಿ ವಿನ್ಸೆಂಟ್ ಡಯಾಸ್ ಹೇಳಿದರು.
ಅವರು ಗುರುವಾರ ಅಸೋಸಿಯೇಶನ್ ಆಫ್ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಟ್ಸ್ ಉಡುಪಿವತಿಯಿಂದ ಮಾಂಡವಿ ಟ್ರೇಡ್ ಸೆಂಟರ್ನಲ್ಲಿ ನಡೆದ ಎಂಜಿನಿಯರ್ಸ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಒಂದು ನಗರವನ್ನು ವ್ಯವಸ್ಥಿತ ರೀತಿಯಲ್ಲಿ ರೂಪಿಸಲು ನಿರ್ಮಾಣ ಕ್ಷೇತ್ರದ ಪಾತ್ರ ಬಹಳ ಮುಖ್ಯ. ಸ್ಥಳೀಯಾಡಳಿತದ ಕಾನೂನುಗಳನ್ನು ಉಲ್ಲಂಗಿಸದೆ ಬಿಲ್ಡರ್ಗಳಿಗೆ ಸರಿಯಾದ ಸಲಹೆ, ಮಾರ್ಗದರ್ಶನ ನೀಡಿ ಮುನ್ನಡೆಯಬೇಕು.ಶಿಕ್ಷಕ ತಪ್ಪು ಮಾಡಿದರೆ ಒಂದು ಪೀಳಿಗೆ ನಾಶವಾಗುತ್ತದೆ ಎಂಬಮಾತಿನಂತೆ ಎಂಜಿನಿಯರ್ ಗಳು ತಪ್ಪು ಮಾಡಿದರೆ ಇಡೀ ಕಟ್ಟಡವೇ ನಾಶವಾಗುತ್ತದೆ ಎಂಬುದನ್ನು ಸದಾ ನೆನಪಿಟ್ಟುಕೊಳ್ಳಬೇಕು ಎಂದರು.
ಉಡುಪಿ ನಗರದಲ್ಲಿ ಏಕ ನಿವೇಶನ ಮತ್ತು ಸಾಮಾನ್ಯ ನಾಗರಿಕರಿಗೆ ಮನೆ ನಿರ್ಮಾಣಕ್ಕೆ ಸಮಸ್ಯೆಯಾಗುತ್ತಿದೆ. ನಗರಾಭಿವೃದ್ಧಿ ಪ್ರಾಾಧಿಕಾರ ಮತ್ತುನಗರಸಭೆಯಲ್ಲಿ ಕಡತಗಳು ಬಾಕಿ ಉಳಿದುಕೊಂಡಿವೆ. ಎಂಜಿನಿಯರ್ಗಳು, ಬಿಲ್ಡರ್ಗಳು ಒಟ್ಟಾಗಿ ಸರಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ದ.ಕ. ಜಿಲ್ಲೆ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ರಾವ್ ಕಲ್ಬಾವಿ, ಎಸಿಸಿಇಎ ಗೌರವಾಧ್ಯಕ್ಷ ನಾಗೇಶ್ ಹೆಗ್ಡೆ, ಕೋಶಾಧಿಕಾರಿ ಲಕ್ಷ್ಮೀನಾರಾಯಣ ಉಪಾಧ್ಯ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ್ ರಾವ್, ನಿವೃತ್ತ ಎಫ್ಡಿಎ ಶ್ರೀಧರ ಕಾನಂಗಿ, ನಗರಸಭೆ ಮಾಜಿ ಸದಸ್ಯ ನವೀನ ಭಂಡಾರಿ, ಸಾಮಾಜಿಕ ಕಾರ್ಯಕರ್ತ ರವಿ ಕಟಪಾಡಿ ಅವರನ್ನು ಸಮ್ಮಾನಿಸಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾಾರ್ಥಿ ವೇತನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸಿಸಿಇಎ ಅಧ್ಯಕ್ಷ ಪಾಂಡುರಂಗ ಆಚಾರ್ ಕೆ.ಸ್ವಾಗತಿಸಿದರು. ಕಾರ್ಯದರ್ಶಿ ಯೋಗೀಶ್ಚಂದ್ರಧರ ವಂದಿಸಿದರು. ಎಂಜಿನಿಯರ್ಗಳಾದ ಅಮಿತ್ಅರವಿಂದ್, ಜಗದೀಶ್ ಆಚಾರ್ಯ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎಂಜಿನಿಯರ್ದ ಯಾನಂದ ನಿರ್ವಹಿಸಿದರು.












