ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಕಲಾವಿದರಲ್ಲಿ ಒಬ್ಬರಾದ ಶಂಕನಾದ ಅರವಿಂದ್ ಕೊರೊನಾ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ.
ಎರಡು ದಿನಗಳ ಹಿಂದೆ ವಿಕ್ಟೋರಿಯ ಆಸ್ಪತ್ರೆಗೆ ದಾಖಲಾಗಿದ್ದ ನಟ ಶಂಖನಾದ ಅರವಿಂದ್, ಇಂದು ಮಧ್ಯಾಹ್ನ ಉಸಿರಾಟದ ಸಮಸ್ಯೆಯಿಂದ ಇಹಲೋಕ ತ್ಯಜಿಸಿದ್ದಾರೆ.
250ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಶಂಕನಾದ ಅರವಿಂದ್, ಪೋಷಕ ಪಾತ್ರಗಳಿಗೆ ತಮ್ಮದೇ ಶೈಲಿಯ ನಟನೆಯ ಮೂಲಕ ಜೀವ ತುಂಬಿದ್ದರು. ಇವರ ಹಾಗೂ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಕಾಂಬಿನೇಷನ್ನಲ್ಲಿ ಮೂಡಿ ಬಂದ ‘ಬೆಟ್ಟದ ಹೂ’ ಸಿನಿಮಾವಂತೂ, ಶಂಕನಾದ ಅರವಿಂದ್ ಹೆಸರು ಕೇಳಿದಾಕ್ಷಣ ಕಣ್ಣ ಮುಂದೆ ಹಾದು ಹೋಗುತ್ತೆ.
ದಿವಂಗತ ನಟ-ನಿರ್ದೇಶಕ ಕಾಶಿನಾಥ್‌ಗೆ ಶಂಕನಾದ ಅರವಿಂದ್ ಬಹಳ ಆಪ್ತರಾಗಿದ್ದರು.