ಮಂಗಳೂರು: ಗ್ಯಾಲರಿ ಆರ್ಕಿಡ್ ಮಾರ್ಚ್ 1 ರಿಂದ 10 ರವರೆಗೆ ಚಿತ್ರಕಲಾವಿದ ಎನ್.ಎಸ್. ಪತ್ತಾರ್ ಇವರ “ಸಬ್ಲೈಮ್ ಲಿರಿಕ್ಸ್” ಪೇಂಟಿಂಗ್ಸ್ ಪ್ರದರ್ಶನ ಹಮ್ಮಿಕೊಂಡಿದೆ.
ಈ ಪ್ರದರ್ಶನವು ಕಳೆದ ನಾಲ್ಕು ವರ್ಷಗಳಲ್ಲಿ ಅವರು ರಚಿಸಿದ 21 ಚಿತ್ರಕಲೆಗಳನ್ನು ಪ್ರದರ್ಶಿಸುತ್ತದೆ.
ಮಂಗಳೂರಿನ ಮಹಾಲಸ ಕಲಾ ಮಹಾವಿದ್ಯಾಲಯದ ಚಿತ್ರಕಲಾ ವಿಭಾಗದ ಮುಖ್ಯಸ್ಥರೂ ಆಗಿರುವ ಪ್ರತಿಷ್ಠಿತ ಕಲಾವಿದ ಎನ್.ಎಸ್. ಪತ್ತಾರ್, ಇವರು “ಸಬ್ಲೈಮ್ ಲಿರಿಕ್ಸ್” ಮೂಲಕ ತಮ್ಮ ಮೊದಲ ಏಕವ್ಯಕ್ತಿ ಪ್ರದರ್ಶನವನ್ನು ಪ್ರಸ್ತುತಪಡಿಸುತ್ತಿದ್ದಾರೆ.
ಉದ್ಘಾಟನಾ ಸಮಾರಂಭವು ಮಾರ್ಚ್ 1 ರಂದು ಸಂಜೆ 5 ಗಂಟೆಗೆ, ಗ್ಯಾಲರಿ ಆರ್ಕಿಡ್, ಹೇಮಾವತಿ ಕಟ್ಟಡ, ಬಲ್ಮಠ, ಮಂಗಳೂರು ಇಲ್ಲಿ ನಡೆಯಲಿದೆ.
ಆರ್ಕಿಟೆಕ್ಟ್ ಗುಲ್ಶನ್ ರೊಯ್, ಪ್ರದರ್ಶನವನ್ನು ಉದ್ಘಾಟಿಸಲಿದ್ದು, ಮಹಾಲಸ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಬಾಬುರಾವ್, ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಪ್ರದರ್ಶನದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 6ರ ವರೆಗೆ ಗ್ಯಾಲರಿ ತೆರೆದಿರುವುದೆಂದು ಗ್ಯಾಲರಿ ಆರ್ಕಿಡ್ ನಿರ್ದೇಶಕ ವಿಲಿಯಮ್ ಪಾಯ್ಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.