ಉಡುಪಿ: ಮಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀ ಮಧ್ವಶಂಕರ ಹೆಸರಿಟ್ಟರೆ ಉತ್ತಮ. ಇದರಿಂದ ದಾರ್ಶನಿಕ ಪರಂಪರೆಗೆ ಗೌರವ ಸಿಗುತ್ತದೆ ಎಂದು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಬೇರೆ ಹೆಸರಿಡಲು ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಶ್ರೀಗಳು ಈ ಸಲಹೆ ನೀಡಿದ್ದಾರೆ.
ಉತ್ತರ ಭಾರತದಲ್ಲಿ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಶ್ರೀರಾಮನ ಹೆಸರಿಡಲಾಗಿದೆ. ದಕ್ಷಿಣ ಭಾರತದಲ್ಲಿ ಮಾಧ್ವಚಾರ್ಯರು, ಶಂಕರಾಚಾರ್ಯರು ಮಠಗಳನ್ನು ಸ್ಥಾಪಿಸಿ ಆಧ್ಯಾತ್ಮಿಕತೆಯ ಪ್ರಚಾರ ಮಾಡಿದ್ದಾರೆ. ಶಂಕರಾಚಾರ್ಯರು ಶೃಂಗೇರಿ ಮಠ ಸ್ಥಾಪಿಸಿದ್ದಾರೆ. ಮಾಧ್ವಚಾರ್ಯರು ಉಡುಪಿ ಕೃಷ್ಣಮಠ ಸ್ಥಾಪಿಸಿದ್ದಾರೆ. ಹಾಗಾಗಿ ವಿಮಾನ ನಿಲ್ದಾಣಕ್ಕೆ ಅವರಿಬ್ಬರ ಹೆಸರಿಡುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.
ಆಧ್ಯಾತ್ಮಿಕಯೇ ಭಾರತದ ಮೂಲ ಸಂಪತ್ತು. ಹಾಗಾಗಿ ನಮ್ಮ ಆಧ್ಯಾತ್ಮಿಕತೆ, ಸಂಸ್ಕೃತಿ, ಪರಂಪರೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದು ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಸಹಕಾರಿಯಾಗಲಿದೆ ಎಂದಿದ್ದಾರೆ.
ರಾಮಾನುಜಾಚಾರ್ಯರು, ಬಸವಣ್ಣನವರ ಹೆಸರು ಕೂಡ ಇಡಬೇಕು. ಅವರ ಮೂಲ ಊರುಗಳ ಬಳಿಯ ನಿಲ್ದಾಣಕ್ಕೆ ಹೆಸರಿಡಬೇಕು ಎಂದು ಹೇಳಿದ್ದಾರೆ.