ಮಂಗಳೂರು: ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ (IOCL) ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ. ಮೆಕ್ಯಾನಿಕಲ್, ಇಲೆಕ್ಟ್ರೀಷಿಯನ್, ಇನ್ಸ್ಟ್ರುಮೆಂಟೇಷನ್, ಸಿವಿಲ್, ಫಿಟ್ಟರ್, ಇನ್ಸ್ಟ್ರುಮೆಂಟ್ ಮೆಕ್ಯಾನಿಕ್, ಮಷಿನಿಸ್ಟ್, ಡಾಟಾ ಎಂಟ್ರಿ ಆಪರೇಟರ್, ಹೀಗೆ ಹಲವು ವಿಭಾಗಗಳಲ್ಲಿ ತರಬೇತಿಗೆ ಅಭ್ಯರ್ಥಿಗಳನ್ನು ನಿಯೋಜಿಸಲಾಗುತ್ತದೆ. ರಾಜ್ಯ ಹಾಗೂ ಟ್ರೇಡ್ / ಟೆಕ್ನೀಷಿಯನ್ / ಗ್ರಾಜುಯೇಟ್ವಾರು ಹುದ್ದೆಗಳ ಸಂಖ್ಯೆಗಳನ್ನು ಕೆಳಗಿನ ನೋಟಿಫಿಕೇಶನ್ನಲ್ಲಿ ಓದಿ ತಿಳಿಯಬಹುದು.
ಕರ್ನಾಟಕ, ಕೇರಳ, ತೆಲಂಗಾಣ, ಮಧ್ಯಪ್ರದೇಶ, ತಮಿಳುನಾಡು, ಅಸ್ಸಾಂ, ಉತ್ತರಪ್ರದೇಶ, ಬಿಹಾರ, ಸಿಕ್ಕಿಂ, ದೆಹಲಿ ಹರಿಯಾಣ ಸೇರಿದಂತೆ ದೇಶದ ಹಲವು ರಾಜ್ಯಗಳ ರಿಫೈನರೀಸ್ ಡಿವಿಷನ್ ಗಳಲ್ಲಿ ಅಗತ್ಯ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಇದೀಗ ನೋಟಿಫಿಕೇಶನ್ ಬಿಡುಗಡೆ ಮಾಡಿದೆ.
ಪ್ರಮುಖ ದಿನಾಂಕಗಳು
ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ: 14-12-2022
ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 03-01-2023
ಅಡ್ಮಿಟ್ ಕಾರ್ಡ್ ಬಿಡುಗಡೆ ಸಂಭಾವ್ಯ ದಿನಾಂಕ: ಪರೀಕ್ಷೆಗೆ ಎರಡು ವಾರ ಮುಂಚಿತವಾಗಿ ಪ್ರಕಟ ಮಾಡಲಾಗುವುದು.
ಲಿಖಿತ ಪರೀಕ್ಷೆ ಸಂಭಾವ್ಯ ದಿನಾಂಕ: ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.
ಉದ್ಯೋಗ ಸಂಸ್ಥೆ :ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್
ಹುದ್ದೆ ಹೆಸರು: ಟ್ರೇಡ್, ಟೆಕ್ನೀಷಿಯನ್ ಹಾಗೂ ಗ್ರಾಜುಯೇಟ್ ಅಪ್ರೆಂಟಿಸ್
ಹುದ್ದೆಗಳ ಸಂಖ್ಯೆ : 1760
ವಿದ್ಯಾರ್ಹತೆ ಟ್ರೇಡ್ ಅಪ್ರೆಂಟಿಸ್ : ಐಟಿಐ ಪಾಸ್ ಮಾಡಿರಬೇಕು.
ಟೆಕ್ನೀಷಿಯನ್ ಅಪ್ರೆಂಟಿಸ್ : ಡಿಪ್ಲೊಮ ಪಾಸ್ ಮಾಡಿರಬೇಕು.
ಗ್ರಾಜುಯೇಟ್ ಅಪ್ರೆಂಟಿಸ್ : ತಾಂತ್ರಿಕ ವಿಷಯಗಳಲ್ಲಿ ಪದವಿ ಪಾಸ್ ಮಾಡಿರಬೇಕು.
ವಯೋಮಿತಿ ಅರ್ಹತೆಗಳು
ಕನಿಷ್ಠ 18 ವರ್ಷ ಆಗಿರುವ, ಗರಿಷ್ಠ 24 ವರ್ಷ ವಯೋಮಿತಿ ಮೀರದ ಅಭ್ಯರ್ಥಿಗಳು ಈ ಅಪ್ರೆಂಟಿಸ್ ಪೋಸ್ಟ್ಗಳಿಗೆ ಅರ್ಜಿ ಸಲ್ಲಿಸಬಹುದು. ಜಾತಿವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯ ಆಗಲಿವೆ.
ಎಂಆರ್ಪಿಎಲ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಒಂದು ಷೆಡ್ಯೂಲ್ ‘ಎ’ ಮಿನಿ ರತ್ನ ಕೇಂದ್ರೀಯ ಸಾರ್ವಜನಿಕ ಕ್ಷೇತ್ರದ ಉದ್ದಿಮೆ ಮತ್ತು ಭಾರತದ ಅಗ್ರ ತೈಲ ಕಂಪೆನಿ. ಅಲ್ಲದೆ ಒಎನ್ಜಿಸಿ ಅಂಗಸಂಸ್ಥೆಯಾಗಿದೆ. ಇಲ್ಲಿ ಪ್ರತಿಭಾನ್ವಿತ, ಕ್ರಿಯಾಶೀಲ ಹಾಗೂ ಮಹತ್ವಾಕಾಂಕ್ಷಿ ವೃತ್ತಿಪರರಿಗೆ ಈ ಕೆಳಕಂಡ ಮ್ಯಾನೇಜ್ಮೆಂಟ್ ಕೇಡರ್ E2 ದರ್ಜೆಯ ವಿವಿಧ ವಿಷಯಗಳಿಗೆ ಅರ್ಹ ಭಾರತೀಯ ಪ್ರಜೆಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರಮುಖ ದಿನಾಂಕಗಳು
ಅರ್ಜಿಗಳನ್ನು ಸಲ್ಲಿಸಲು ಆನ್ಲೈನ್ ಪೋರ್ಟಲ್ ತೆರೆಯುವ ದಿನಾಂಕ : 17-12-2022 ರ 10-00 ಗಂಟೆಗೆ.
ಆನ್ಲೈನ್ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 15-01-2023 ರ ಸಂಜೆ 06 ಗಂಟೆವರೆಗೆ.
ಹುದ್ದೆಗಳ ವಿವರ (ಇಂಜಿನಿಯರ್ ಅರ್ಹತೆಯುಳ್ಳವರಿಗೆ)
ಕೆಮಿಕಲ್ ಇಂಜಿನಿಯರಿಂಗ್ : 28
ಮೆಕ್ಯಾನಿಕಲ್ ಇಂಜಿನಿಯರಿಂಗ್: 24
ಸಿವಿಲ್ ಇಂಜಿನಿಯರಿಂಗ್: 2
ಇಲೆಕ್ಟ್ರಿಕಲ್ ಇಂಜಿನಿಯರಿಂಗ್ : 7
ಇನ್ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್: 11
ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫಾರ್ಮೇಶನ್ ಟೆಕ್ನಾಲಜಿ : 5
ಕೆಮಿಸ್ಟ್ರಿ : 1
ಆಯ್ಕೆ ವಿಧಾನ : ಈ ಮೇಲಿನ ಇಂಜಿನಿಯರಿಂಗ್ ವಿಭಾಗದ ಹುದ್ದೆಗಳನ್ನು 2022 ರ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್ (ಗೇಟ್) ಅಂಕಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
ತಾಂತ್ರಿಕೇತರ ವಿಭಾಗದ ಹುದ್ದೆಗಳು (ಪದವಿ ಅರ್ಹತೆಯುಳ್ಳವರಿಗೆ)
ಮಾರ್ಕೆಟಿಂಗ್ : 12
ಲೈಬ್ರರಿ ಮತ್ತು ಇನ್ಫಾರ್ಮೇಷನ್ ಸೈನ್ಸ್ : 1
ಫೈನಾನ್ಸ್ / ಇಂಟರ್ನಲ್ ಆಡಿಟ್ : 4
ಸೆಕ್ರೇಟರಿಯಲ್ : 1
ಆಯ್ಕೆ ವಿಧಾನ ಹಾಗೂ ಅರ್ಹತೆ
ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಪದವಿ ಪಾಸ್ ಮಾಡಿರಬೇಕು.
ಮಾರ್ಕೆಟಿಂಗ್, ಲೈಬ್ರರಿ ಮತ್ತು ಇನ್ಫಾರ್ಮೇಷನ್ ಸೈನ್ಸ್ ವಿಭಾಗದ ಹುದ್ದೆಗಳನ್ನು ವಿಶ್ವವಿದ್ಯಾನಿಲಯ ಅನುದಾನ ಆಯೋಗದ ರಾಯ ಅರ್ಹತಾ ಪರೀಕ್ಷೆ (ಯುಜಿಸಿ-ಎನ್ಇಟಿ) (ಡಿಸೆಂಬರ್ 2021ಮತ್ತು ಜೂನ್ 2022 ರ ಅವಧಿ) ಅಂಕಗಳ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.
ಫೈನಾನ್ಸ್ / ಇಂಟರ್ನಲ್ ಆಡಿಟ್, ಸೆಕ್ರೇಟರಿಯಲ್ ಹುದ್ದೆಗಳನ್ನು ಎಂಆರ್ಪಿಎಲ್ ನಡೆಸುವ ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಆಸಕ್ತ ಅಭ್ಯರ್ಥಿಗಳು ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಅಧಿಕೃತ ವೆಬ್ಸೈಟ್ ವಿಳಾಸ https://www.mrpl.co.in/careers ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು.